ಮನೆ ಮನರಂಜನೆ ಕನ್ನಡದ ಹಿರಿಯ ನಟಿ ಭಾರ್ಗವಿ ನಾರಾಯಣ್ ನಿಧನ

ಕನ್ನಡದ ಹಿರಿಯ ನಟಿ ಭಾರ್ಗವಿ ನಾರಾಯಣ್ ನಿಧನ

0

ಸ್ಯಾಂಡಲ್ ವುಡ್ ನ ಹಿರಿಯ ನಟಿ ಭಾರ್ಗವಿ ನಾರಾಯಣ್ (84) ಅವರು ಸೋಮವಾರ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ.

ಭಾರ್ಗವಿ ಅವರು ಸಿನಿಮಾ, ಕಿರುತೆರೆ ಹಾಗೂ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಇನ್ನು ತಮ್ಮ ಅಜ್ಜಿಯ ನಿಧನದ ಸಂಬಂಧ ನಟಿ ಸಂಯುಕ್ತಾ ಹೊರನಾಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

2019ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ ಭಾರ್ಗವಿ ಅವರು, ಎರಡು ಕನಸು, ಹಂತಕರ ಸಂಚು, ಪಲ್ಲವಿ ಅನುಪಲ್ಲವಿ, ವಂಶವೃಕ್ಷ ಸೇರಿದಂತೆ ಹಲವು ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

ಭಾರ್ಗವಿ ನಾರಾಯಣ್ ಅವರು ನಂಜುಡಯ್ಯ ನಾರಾಯಣ ಅವರನ್ನು ವಿವಾಹವಾಗಿದ್ದು ದಂಪತಿಗೆ ನಟರಾದ ಪ್ರಕಾಶ್ ಬೆಳವಾಡಿ, ಸುಧಾ ಬೆಳವಾಡಿ ಸೇರಿ ನಾಲ್ಕು ಮಕ್ಕಳಿದ್ದಾರೆ.

ಹಿಂದಿನ ಲೇಖನಆಸ್ತಿಗಾಗಿ ತಂದೆಯನ್ನೇ ಶೂಟ್ ಮಾಡಿದ ಮಗ
ಮುಂದಿನ ಲೇಖನಶಾಲಾ ಕಾಲೇಜುಗಳಲ್ಲಿ ಸಹಜ,  ಶಾಂತಿ  ವಾತಾವರಣ ಕಾಪಾಡಲು ಸರ್ಕಾರ ಬದ್ಧ: ಗೃಹ ಸಚಿವ ಆರಗ ಜ್ಞಾನೇಂದ್ರ.