ಮನೆ ಮನರಂಜನೆ ಬೀಸ್ಟ್ ಸಿನಿಮಾದ ಟ್ರೈಲರ್ ಮೆಚ್ಚಿಕೊಂಡ ಶಾರುಖ್ ಖಾನ್

ಬೀಸ್ಟ್ ಸಿನಿಮಾದ ಟ್ರೈಲರ್ ಮೆಚ್ಚಿಕೊಂಡ ಶಾರುಖ್ ಖಾನ್

0

ಬೆಂಗಳೂರು(Bengaluru): ತಮಿಳು ನಟ ದಳಪತಿ ವಿಜಯ್‌ (Vijay) ಅವರ ’ಬೀಸ್ಟ್‌‘ (Beast)ಸಿನಿಮಾ ಬಿಡುಗಡೆಗೆ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿದ್ದು, ಸಿನಿಮಾದ ಟ್ರೈಲರ್ ನೋಡಿ ಮೆಚ್ಚಿಕೊಂಡಿರುವ ಬಾಲಿವುಡ್ ನಟ ಶಾರುಖ್ ಖಾನ್(Shahrukh Khan) ಅವರು ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

‘ನಿರ್ದೇಶಕ ಆಟ್ಲಿ(Atlee) ಜೊತೆ ಕುಳಿತು ಬೀಸ್ಟ್ ಟ್ರೈಲರ್ ನೋಡಿದೆ. ಅದ್ಭುತವಾಗಿದೆ. ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಆಟ್ಲಿ ಅವರಂತೆ ನಾನು ಕೂಡ ವಿಜಯ್ ಅವರ ದೊಡ್ಡ ಅಭಿಮಾನಿ’ ಎಂದು ಟ್ವೀಟ್ (Tweet)ಮಾಡಿ ಶುಭಾಶಯ ಕೋರಿದ್ದಾರೆ.

ಇದೇ ಏಪ್ರಿಲ್ 13 ರಂದು ಬೀಸ್ಟ್ ಚಿತ್ರ ತೆರೆ ಕಾಣಲಿದ್ದು, ಬೀಸ್ಟ್‌ ವಿಜಯ್ ಅವರ 65 ನೇ ಚಿತ್ರವಾಗಿದೆ.

ಇನ್ನು ಈ ಟ್ವೀಟ್ ಹಂಚಿಕೊಂಡಿರುವ ಆಟ್ಲಿ ಅವರು ಶಾರುಖ್‌ಗೆ ಧನ್ಯವಾದ ಹೇಳಿದ್ದಾರೆ. ಮೆರ್ಸಲ್ ಬಿಗಿಲ್ ನಿರ್ದೇಶಕ ಎಂಬ ಖ್ಯಾತಿಯ ಆಟ್ಲಿ ಶಾರುಖ್ ಖಾನ್ ಅವರ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ಬೀಸ್ಟ್‌ ಟ್ರೈಲರ್ ಸನ್‌ ಪಿಕ್ಚರ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಮೂರೇ ದಿನದಲ್ಲಿ 55 ಮಿಲಿಯನ್ ವೀಕ್ಷಣೆ ಆಗಿದೆ. ಸನ್‌ ಪಿಕ್ಚರ್‌ ನಿರ್ಮಾಣದ ಈ ಚಿತ್ರಕ್ಕೆ ನೆಲ್ಸನ್‌ ದಿಲೀಪ್‌ಕುಮಾರ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಮೊಟ್ಟ ಮೊದಲ ಬಾರಿಗೆ ಪೂಜಾ ಹೆಗ್ಡೆ ಮತ್ತು ವಿಜಯ್‌ ಜೊತೆಯಾಗಿ ನಟಿಸುತ್ತಿದ್ದಾರೆ.

ಹಿಂದಿನ ಲೇಖನಚಾಮುಂಡಿಬೆಟ್ಟಕ್ಕೆ ರೋಪ್ ವೇ ಬೇಡ : ಪ್ರಮೋದಾದೇವಿ ಒಡೆಯರ್
ಮುಂದಿನ ಲೇಖನಸರ್ವ ಜನಾಂಗದ ಶಾಂತಿಯ ತೋಟ: ಭಾವೈಕ್ಯತೆ ಚರ್ಚೆಯಲ್ಲಿ ಹೆಚ್ ಡಿಕೆ ಭಾಗಿ