ಮನೆ ಆರೋಗ್ಯ ಬಿಸಿ ಬಿಸಿ ಚಿಕನ್ ಸೂಪ್ ಸೇವಿಸುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ!

ಬಿಸಿ ಬಿಸಿ ಚಿಕನ್ ಸೂಪ್ ಸೇವಿಸುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ!

0

ನಮ್ಮ ಹಿರಿಯರೇ ಹೇಳುವ ಹಾಗೆ, ಮನುಷ್ಯನಿಗೆ ಸಕಲ ಭಾಗ್ಯಕ್ಕಿಂತ ಆರೋಗ್ಯ ಭಾಗ್ಯವೇ ದೊಡ್ಡದು. ಇದನ್ನು ಉಳಿಸಿಕೊಂಡು ಹೋಗುವ ಜಾಣತನದ ಕ್ರಮ ನಮಗೆ ಗೊತ್ತಿರಬೇಕು ಅಷ್ಟೇ. ಯಾಕೆಂದರೆ, ಆರೋಗ್ಯದ ವಿಷ್ಯದಲ್ಲಿ ಸ್ವಲ್ಪ ಅಜಾಗರೂಕತೆ, ಮಾಡಿದರೂ ಕೂಡ, ಆರೋಗ್ಯದಲ್ಲಿ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ.

ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ

• ಆರೋಗ್ಯ ತಜ್ಞರು ಹೇಳುವ ಪ್ರಕಾರ, ಮನುಷ್ಯನಿಗೆ ಯಾವತ್ತಿಗೂ ಕೂಡ ಅಷ್ಟೇ ರಕ್ತದೊತ್ತಡ ಯಾವಾಗಲೂ ನಾರ್ಮಲ್ ಮಟ್ಟದಲ್ಲಿ ಇರಬೇಕು. ಇಲ್ಲಿ ಹೆಚ್ಚಾಗಲೂ ಬಾರದು ಇಲ್ಲಾಂದ್ರ ಕಡಿಮೆ ಆಗಲೂ ಬಾರದು. ಯಾಕೆಂ ದರೆ ಇವೆರಡೂ ಲಕ್ಷಣಗಳು ಮನುಷ್ಯನ ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ.

• ರಕ್ತದೊತ್ತಡ ಏರಿಳಿತಗಳು ಕಂಡು ಬಂದರೆ, ನೇರ ಪರಿ ಣಾಮ ನಮ್ಮ ಹೃದಯದ ಮೇಲೆ ಬೀರುತ್ತದೆ ಇದರಿಂದ ಪ್ರಮಾಣಕ್ಕೆ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ.

• ಹೀಗಾಗಿ ಈ ಕಾಯಿಲೆಯನ್ನು ಕಂಟ್ರೋಲ್ ನಲ್ಲಿ ಇಟ್ಟು ಕೊಳ್ಳ ಬೇಕೆಂದರೆ, ಕಟ್ಟುನಿಟ್ಟಿನ ಆಹಾರ ಪದ್ಧತಿಯ ಜೊತೆಗೆ, ಚಿಕನ್ ಸೂಪ್ ಕುಡಿಯುವ ಅಭ್ಯಾಸ ಮಾಡಿ ಕೊಳ್ಳಬೇಕಂತೆ!

• ಇದಕ್ಕೆ ಪ್ರಮುಖ ಕಾರಣ, ಚಿಕನ್ ಸೂಪ್ಗೆ ಬಳಸುವ ವಿವಿಧ ಬಗೆಯ ತರಕಾರಿಗಳು ಹಾಗೂ ಸಣ್ಣಗೆ ಹಚ್ಚಿರುವ ಬೇಯಿಸಿದ ಚಿಕನ್ ಪೀಸ್‪ಗಳಲ್ಲಿ ಅಧಿಕ ಪ್ರಮಾಣದಲ್ಲಿ ಪ್ರೋಟೀನ್, ನಾರಿನಾಂಶ, ಪೊಟ್ಯಾಶಿಯಂ ಹಾಗೂ ಕಬ್ಬಿಣದಾಂಶ ಹೇರಳವಾಗಿ ಕಂಡುಬರುವುದರಿಂದ ರಕ್ತದೊತ್ತಡವನ್ನು ಕಂಟ್ರೋಲ್’ನಲ್ಲಿ ಇಡಲು ನೆರವಾಗುತ್ತದೆ.

ಮೂಳೆಗಳ ಆರೋಗ್ಯಕ್ಕೆ

• ದೇಹದ ಮೂಳೆಗಳ ಆರೋಗ್ಯಕ್ಕೆ ವೃದ್ಧಿಸುವ ಪೌಷ್ಟಿಕ ಸತ್ವಗಳು, ಕ್ಯಾಲ್ಸಿಯಂ, ಮೆಗ್ನಿಶಿಯಂ, ಪೊಟಾಶಿಯಂ, ಪೋಸ್ಪರಸ್ ಹಾಗು ಇತರ ಬಗೆಯ ಖನಿಜಾಂಶಗಳು ಅಗಾಧ ಪ್ರಮಾಣದಲ್ಲಿ, ಚಿಕನ್ ಸೂಪ್ನಲ್ಲಿ ಕಂಡು ಬರುವುದರಿಂದ, ಮೂಳೆಗಳು ಗಟ್ಟಿಮುಟ್ಟಾಗಲು ನೆರವಾಗುತ್ತದೆ.

• ಪ್ರಮುಖವಾಗಿ ಇದರಲ್ಲಿ ಪ್ರೋಟೀನ್ ಅಂಶ ಹೇರಳವಾಗಿ ಸಿಗುವುದರಿಂದ ಸಂಧಿವಾತ ಸಮಸ್ಯೆಯನ್ನು ದೂರ ಮಾಡುವುದು.

ರೋಗ ನಿರೋಧಕ ಶಕ್ತಿ ಬಲಗೊಳಿಸುತ್ತದೆ

• ನಮಗೆಲ್ಲಾ ಗೊತ್ತೇ ಇರುವ ಹಾಗೆ ಆರೋಗ್ಯ ಚೆನ್ನಾಗಿ ಇರಬೇಕು ಎಂದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಬಲವಾಗಿರಬೇಕು.

• ದುರ್ಬಲ ರೋಗ ನಿರೋಧಕ ಶಕ್ತಿ ಹೊಂದಿದ್ದರೆ, ಸಣ್ಣ ಪುಟ್ಟ ಕಾಯಿಲೆಗಳಿಗೂ ಕೂಡ ಆಸ್ಪತ್ರೆಗಳ ಬಾಗಿಲು ತಟ್ಟ ಬೇಕಾಗಿ ಪರಿಸ್ಥಿತಿ ಬರುತ್ತದೆ.

• ಹೀಗಾಗಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗ ಬೇಕೆಂದರೆ, ಆರೋಗ್ಯಕಾರಿ ಆಹಾರ ಪದ್ಧತಿಯ ಜೊತೆಗೆ, ಬಿಸಿ-ಬಿಸಿ ಚಿಕನ್ ಸೂಪ್ ಕುಡಿಯುವ ಅಭ್ಯಾಸ ಮಾಡಿ ಕೊಳ್ಳಬೇಕು.

• ಸೂಪ್ ನಲ್ಲಿ ಇರುವಂತಹ ವಿವಿಧ ಬಗೆಯ ಪೌಷ್ಟಿಕಾಂಶ ಭರಿತ ತರಕಾರಿಗಳು ರುಚಿಯನ್ನು ಹೆಚ್ಚಿಸು ವುದು ಮಾತ್ರವಲ್ಲದೆ ದೇಹದ ರೋಗನಿರೋಧಕ ಶಕ್ತಿಯನ್ನು ಕೂಡ ವೃದ್ಧಿಸುವುದು.

ಜ್ವರದ ಸಂದರ್ಭದಲ್ಲಿ

• ಸಾಮಾನ್ಯವಾಗಿ ಜ್ವರದ ಅಸ್ವಸ್ಥತೆಯಿಂದ ಬಳಲುತ್ತಿ ರುವ ಜನರು ಸಸ್ಯಾಹಾರಿಗಳಾದರೆ ವೆಜಿಟೇಬಲ್ ಸೂಪ್ ಮತ್ತು ಮಾಂಸಾಹಾರಿ ಗಳಾದರೆ ಚಿಕನ್ ಸೂಪ್ ಅನ್ನು ಸೇವನೆ ಮಾಡಿದರೆ ಬಹಳ ಒಳ್ಳೆಯದು.

• ಯಾಕೆಂದ್ರೆ ಇವರೆಡರಲ್ಲೂ ಕೂಡ ಪ್ರೋಟೀನ್ ಅಂಶ ಅಧಿಕ ಪ್ರಮಾಣದಲ್ಲಿ ಸಿಗುವುದರ ಜೊತೆಗೆ ವಿವಿಧ ಬಗೆಯ ವಿಟಮಿನ್ಸ್ ಹಾಗೂ ಖನಿಜಾಂಶಗಳು ಕೂಡ ಇರುವುದರಿಂದ ದೇಹದಲ್ಲಿ ಹೊಸ ಚೈತನ್ಯವನ್ನು ಮೂಡಿಸಲು ಅನುಕೂಲವಾಗುತ್ತದೆ.

ಕೊನೆಯ ಮಾತು

• ಶೀತ, ನೆಗಡಿ, ಕೆಮ್ಮು ಉಂಟಾದ ಸಂದರ್ಭದಲ್ಲಿ ಬಿಸಿ-ಬಿಸಿ ಚಿಕನ್ ಸೂಪ್’ಗೆ ಸ್ವಲ್ಪ ಕರಿಮೆಣಸಿನ ಪುಡಿಯನ್ನು ಚುಮುಕಿಸಿ ಸೇವನೆ ಮಾಡಿದರೆ ಕೂಡಲೇ ಸಮಸ್ಯೆಗೆ ಪರಿಹಾರ ಕಾಣಬಹುದಾಗಿದೆ.

• ಇದರ ಜೊತೆಗೆ ಎದೆ ಕಟ್ಟುವಿಕೆ ಹಾಗೂ ಗಂಟಲಿನ ಕಿರಿಕಿರಿ ಸಮಸ್ಯೆಯೂ ಕೂಡ ಬಹಳ ಬೇಗನೇ ದೂರವಾಗುತ್ತದೆ.

• ಚಿಕನ್ ಮಾಂಸದಲ್ಲಿ ವಿಟಮಿನ್ ಬಿ6 ಅಂಶಗಳು ಅಧಿಕ ಪ್ರಮಾಣದಲ್ಲಿ ಕಂಡು ಬರುವುದರಿಂದ ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳನ್ನು ದೂರ ಮಾಡುವಲ್ಲಿ ನೆರವಿಗ ಬರುತ್ತದೆ.

• ಇನ್ನು ಚಿಕನ್ ಮಾಂಸದಲ್ಲಿ ಮೆಗ್ನೀಷಿಯಂ ಅಂಶದ ಪ್ರಮಾಣ ಹೆಚ್ಚಾಗಿ ಸಿಗುವುದರಿಂದ, ಮುಟ್ಟಿನ ಸಮಯ ದಲ್ಲಿ ಮಹಿಳೆಯರು ಎದುರಿಸುವ ಕೆಲವೊಂದು ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ಹಿಂದಿನ ಲೇಖನಹೆಚ್.ವಿಶ್ವನಾಥ್ ನಿವಾಸಕ್ಕೆ ಡಿ.ಕೆ ಶಿವಕುಮಾರ್ ಭೇಟಿ
ಮುಂದಿನ ಲೇಖನಟ್ರಕ್-ಜೀಪ್ ನಡುವೆ ಅಪಘಾತ: ಏಳು ಮಂದಿ ಸಾವು