ಮನೆ ರಾಜ್ಯ ವಿತ್ತೀಯ ಶಿಸ್ತು ಪಾಲನೆಯ ಜೊತೆಗೆ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಒತ್ತು: ಮುಖ್ಯಮಂತ್ರಿ ಸಿದ್ದರಾಮಯ್ಯ

ವಿತ್ತೀಯ ಶಿಸ್ತು ಪಾಲನೆಯ ಜೊತೆಗೆ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಒತ್ತು: ಮುಖ್ಯಮಂತ್ರಿ ಸಿದ್ದರಾಮಯ್ಯ

0

ಬೆಂಗಳೂರು: ರಾಜ್ಯಕ್ಕೆ 3,71,383 ಕೋಟಿ ರೂ. ಗಾತ್ರದ  ಜನಪರ ಬಜೆಟ್ ಮಂಡಿಸುವ ಮೂಲಕ ವಿತ್ತೀಯ ಶಿಸ್ತು ಪಾಲನೆಯ ಜೊತೆಗೆ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಒತ್ತು ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ವಿಧಾನಪರಿಷತ್ತಿನಲ್ಲಿ ಆಯವ್ಯಯ ಭಾಷಣ ಕುರಿತ ಚರ್ಚೆಗೆ ಉತ್ತರ ನೀಡಿದರು.

19 ಜನ ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಬಜೆಟ್ ನ ಹಲವು ಅಂಶಗಳ ಬಗ್ಗೆ ಬೆಳಕು ಚೆಲ್ಲಿದ್ದು, ಬಂದ ಟೀಕೆ ಹಾಗೂ ಸಲಹೆ ಸೂಚನೆಗಳನ್ನು ನಾನು ತುಂಬುಹೃದಯದಿಂದ ಸ್ವಾಗತಿಸುತ್ತೇನೆ.

7 ಕೋಟಿ ಕನ್ನಡಿಗರ ಆರ್ಥಿಕ, ಸಾಮಾಜಿಕ, ರಾಜಕೀಯ ಶಕ್ತಿ ತುಂಬಲು , ಸಮಾಜದಲ್ಲಿ ಅವಕಾಶದಲ್ಲಿ ವಂಚಿತರಾದ ವರ್ಗದವರಿಗೆ ಶಕ್ತಿ ತುಂಬುವ ಬಜೆಟ್ ನ್ನು ಸರ್ಕಾರ ಮಂಡಿಸಿದೆ ಎಂದರು.

2024-25ಕ್ಕೆ ರಾಜಸ್ವ ವೆಚ್ಚ 2,90,531 ಕೋಟಿ ರೂ. ಬಂಡವಾಳ ವೆಚ್ಚ55,877 ಕೋಟಿ ,  ಸಾಲ ಮರುಪಾವತಿ  24,974 ಒಳಗೊಂಡಂತೆ ಒಟ್ಟು 3,71,383 ಕೋಟಿ ರೂ.ಗಳ ಆಯವ್ಯಯ ಮಂಡಿಸಿದ್ದೇನೆ. 2002 ರ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಪ್ರಕಾರ  ಜಿಎಸ್ ಡಿಪಿಯ 23.68 % ಇದ್ದು 25% ರ ಮಿತಿಯೊಳಗೆ ಇದೆ. ವಿತ್ತೀಯ ಕೊರತೆ 82,981 ಕೊರತೆ ಇದ್ದು ರಾಜ್ಯದ ಜಿಎಸ್ ಡಿಪಿಯ ಶೇ.2.95 ರಷ್ಟಿದ್ದು, ರಾಜ್ಯದ ವಿತ್ತೀಯ ಕೊರತೆ ಹಾಗೂ ಹೊಣೆಗಾರಿಕೆ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ಮಿತಿಯೊಳಗೆ ಇದೆ ಎಂದು ವಿವರಿಸಿದರು

ಹಿಂದಿನ ಸರ್ಕಾರಕ್ಕಿಂತ ಬಜೆಟ್ ಗಾತ್ರ ಹೆಚ್ಚಳ

ಬಸವರಾಜ ಬೊಮ್ಮಾಯಿಯವರು ಫೆಬ್ರವರಿ 2023ರಲ್ಲಿ 3,09,182 ಕೋಟಿ ಗಾತ್ರ ಬಜೆಟ್ ಮಂಡಿಸಿದ್ದರು.  2023 ರ ಜುಲೈನಲ್ಲಿ ನಮ್ಮ ಸರ್ಕಾರ 3,27,747 ಕೋಟಿ ರೂ. ಬಜೆಟ್ ಮಂಡಿಸಲಾಗಿದೆ.  ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಗಿಂತ 62200 ಕೋಟಿ ಯಷ್ಟು ಗಾತ್ರ ಹೆಚ್ಚಳವಾಗಿದೆ. ನಾನು ಜುಲೈ 2023ರಲ್ಲಿ ಮಂಡಿಸಿದ ಬಜೆಟ್ ಗಿಂತ ಇದು 43630 ಕೋಟಿ ರೂ. ಹೆಚ್ಚಳವಾಗಿದೆ ಎಂದರು.

ಬಜೆಟ್ ಗೆ ಜನಮನ್ನಣೆ ದೊರೆತಿದೆ:

ರಾಜ್ಯದ ಜಿಡಿಪಿ 25,63,247 ಕೋಟಿ ರೂ. ಇತ್ತು. 2024-25 ಕ್ಕೆ 28,09,063 ಕೋಟಿ ರೂ. ಆಗುವ ನಿರೀಕ್ಷೆ ಇದೆ. ನಮ್ಮ ಬಜೆಟ್ ಜನಪರ ಬಜೆಟ್ , ಅಭಿವೃದ್ಧಿಪರವಾದ ಬಜೆಟ್  ಎಂಬ ಮನ್ನಣೆ ಎಲ್ಲೆಡೆಯಿಂದ ದೊರೆಯುತ್ತಿದೆ ಎಂದರು.

ಹಿಂದಿನ ಲೇಖನರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೆ ಬಿಜೆಪಿ ಮನವಿ: ಬಸವರಾಜ ಬೊಮ್ಮಾಯಿ
ಮುಂದಿನ ಲೇಖನಸರ್ಕಾರ ದಿವಾಳಿ ಆಗಿದೆ ಅನ್ನೋದು ಸುಳ್ಳು: ಡಿ.ಕೆ.ಸುರೇಶ್