ನಮ್ಮ ದೇಹದಲ್ಲಿ ಎಲ್ಲಾ ಕಾರ್ಯಗಳನ್ನು ನಿರ್ವಹಿಸುವ ಕಾರ್ಯವನ್ನು ಮಿದುಳು ಮಾಡುತ್ತದೆ. ಈ ಮಿದುಳು ತಲೆಯಲ್ಲಿ ತಾತ್ಕಾಲಿಕವಾಗಿ ಕಾರ್ಯ ಮಾಡಲು ತಡೆಯಾದರೆ ಅವರಿಗೆ ಪ್ರಜ್ಞೆ ತಪ್ಪುತ್ತದೆ. ಮಿದುಳು ತನ್ನ ಕೆಲಸ ನಿಲ್ಲಿಸಿದರೆ ಅವರು ಕೋಮಾಸ್ಥಿತಿಗೆ ತಲುಪುತ್ತಾರೆ. ಎರಡು ಒಂದೇ ಆದರೂ, ಮೂರ್ಧೆಯು ತಾತ್ಕಾಲಿಕವಾಗಿರುತ್ತದೆ.
ಈ ಕಾಲದಲ್ಲಿ ರೋಗಿಯು ಕೈಕಾಲು ಮಾಂಸಖಂಡಗಳು ಸೆಟೆಯುತ್ತವೆ. ಕಣ್ಣು ಗುಡ್ಡೆಗಳು ಮೇಲಕ್ಕೆ ಹೊರಳುತ್ತವೆ. ಅತೀವ ಒತ್ತಡ ಮತ್ತು ತಲೆ ಹಿಂಡುವಿಕೆಯಿಂದ ತಲೆನೋವು ತೀವ್ರವಾಗಿ ಕಾಣಿಸಿ ಕೊಂಡು ಕೈಕಾಲು ಸೆಳೆವು ಕಾಣಿಸಿ ರೋಗಿ ಒದ್ದಾಡುತ್ತಾನೆ. ಬಾಯಿ ಕಚ್ಚಿಕೊಳ್ಳುವ, ಬಾಯಿಯಲ್ಲಿ ಜೊಲ್ಲು ಮತ್ತು ನೊರೆ ಸುರಿಯುವುದು, ಹೆಚ್ಚು ಬೆವರು. ಈ ಕಾಲದಲ್ಲಿ ಕೆಲವರು ಕೈಯಲ್ಲಿ ಕಬ್ಬಿಣದ ವಸ್ತುಗಳನ್ನು ನೀಡುತ್ತಾರೆ. ಇದರಿಂದ ಸ್ವಲ್ಪ ಉಪಶಮನವಾಗಬಹುದು.
ಇದು ಮಿದುಳಿನ ಕೊರೆಗಳಲ್ಲಿ ಉತ್ಪತ್ತಿಯಾಗುವ ವಿದ್ಯುತ್ ರಾಸಾಯನಿಕ ಪ್ರಚೋದನೆ ಕಾರಣ.ಮಿದುಳಿನ ಜೀವಕೋಶಗಳು ಆಸಹಜ ಎಲೆಕ್ಟಿಕಲ್ ಸಂಕೇತಗಳು ಬಿಡುಗಡೆ ಮಾಡಿದ್ದಾಗ ಆ ವ್ಯಕ್ತಿಯಲ್ಲಿ ವಿಚಿತ್ರ ಭಾವನೆಯುಂಟಾಗುತ್ತದೆ. ಈ ರೀತಿ ಮಿದುಳು ಅಸಹಜ ಕ್ರಿಯೆ ಯಾಕೆ ಉಂಟು ಮಾಡುತ್ತದೆ ಎಂದರೆ, ಮಿದುಳಿಗೆ ಆಮ್ಲಜನಕ ಕೊರತೆಯಿಂದಾಗುತ್ತದೆ. ಮಿದುಳಿಗೆ ಕೇವಲ 30 ಸೆಕೆಂಡ್ ಗಳ ಕಾಲ ರಕ್ತ (ಆಮ್ಲಜನಕ) ಹೋಗುವುದು ನಿಂತರೆ, ಆ ವ್ಯಕ್ತಿಯ ಮಿದುಳು ಕೆಲಸ ಮಾಡದೆ ಅವನು ಪ್ರಜ್ಞಾಹೀನತೆಗೆ (ಕೋಮಾ) ಹೋಗುತ್ತಾನೆ. ಕೆಲ ಸಲ ಸಂಪೂರ್ಣ ನಿಷ್ಕ್ರಿಯವಾಗಿ ರೋಗಿಯು ಶಾಸ್ವತ ಕೋಮಾ ಸ್ಥಿತಿಗೆ ಬರುತ್ತಾನೆ. ಕೆಲವು ಸಲ ಜ್ವರ ವಿಪರೀತವಾಗಿ ತಲೆಗೆ ಹತ್ತುತ್ತದೆ. ತಲೆಯಲ್ಲಿ ಗಾಯ, ನಂಜು, ಮಿದುಳಿನಗಡ್ಡೆ ತಲೆಗೆ ಏಟು ಬೀಳುವುದರಿಂದ ಈ ರೀತಿ ರಕ್ತಚಲನೆ ನಿಂತು ಸೆಳೆತವುಂಟಾಗುತ್ತದೆ.
ಏಕೆಂದರೆ, ರಕ್ತದಲ್ಲಿ ಆಮ್ಲಜನಕವಿರುತ್ತದೆ. ಈ ಆಮ್ಲಜನಕವು ರಕ್ತದ ಜೀವಕೋಶ ಕೆಲಸ ಮಾಡಲು ಸಹಾಯ ಮಾಡುತ್ತದೆ. ಈ ರಕ್ತದ ಆಮ್ಲಜನಕ ನಿಂತರೆ ಅಥವಾ ರಕ್ತದಲ್ಲಿ ಆಮ್ಲಜನಕ ಕೊರತೆಯಾದರೆ ಈ ಜೀವಕೋಶದಲ್ಲಿಯ ಇಂಗಾಲ ಡಯಾಕ್ಸೆಡ್ ಅಲ್ಲೇ ಶೇಖರವಾಗಿ ಜೀವಕೋಶಗಳು ಕೆಲಸ ಮಾಡಲು ಅಡ್ಡಿಯಾಗುತ್ತದೆ. ಇದರಿಂದ ಸಮಸ್ಯೆಗಳು ಉತ್ಪತ್ತಿಯಾಗಿ ಮಿದುಳು ತನ್ನ ಕೆಲಸ ಮಾಡಲು ಅಡ್ಡಿಯಾಗಿ, ಕೆಲಸ ನಿಲ್ಲಿಸುವ ಸಾಧ್ಯತೆ ಇರುತ್ತದೆ. ಆಗ ವ್ಯಕ್ತಿಯು ತನ್ನ ಅಂಗಾಂಗಗಳು ಕೆಲಸಮಾಡದೆ ನಿಷ್ಕ್ರಿಯವಾಗಿ ಪ್ರಜ್ಞೆ ತಪ್ಪುತ್ತಾನೆ. ಏಕೆಂದರೆ, ನಮ್ಮ ದೇಹದ ಅಂಗಾಂಗಗಳ ಕೆಲಸವನ್ನು ಈ ಮಿದುಳು ನಿಯಂತ್ರಿಸುತ್ತದೆ.
ಮಿದುಳು ಕೆಲಸ ಮಾಡಬೇಕಾದರೆ ರಕ್ತ ಮುಖ್ಯ ಆ ರಕ್ತದಲ್ಲಿ ಆಮ್ಲಜನಕ, ಈ ಆಮ್ಲಜನಕವು ನಮ್ಮ ರಕ್ತದ ಹಿಮೋಗ್ಲೋಬಿನ್ ಅಂಶದಲ್ಲಿ ಈ ಹಿಮೋಗ್ಲೋಬಿನ್ ನಮ್ಮ ರಕ್ತದ ಫೆರಿಕ್ ಫಾಸ್ಪೆಟ್ ನ (ಕಬ್ಬಿಣಾಂಶ) ಮೇಲೆ ಇರುತ್ತದೆ. ಆದ್ದರಿಂದ ವ್ಯಕ್ತಿಯ ರಕ್ತದಲ್ಲಿ ಕಬ್ಬಿಣಾಂಶದ ಕೊರತೆಯಾದರೆ, ಅವರಿಗೆ ರಕ್ತಹೀನತೆ ಉಂಟಾಗುತ್ತದೆ (ಆ್ಯನಿಮಿಕ್) ಇದರಿಂದ ಆಮ್ಲಜನಕ ಕೊರತೆಯಾಗಿ, ಅವರಲ್ಲಿ ಮೊದಲು ಸುಸ್ತು ಕಾಣಿಸಿಕೊಳ್ಳುತ್ತದೆ. ನಿದ್ರಾಭಂಗ, ಮೈಯಲ್ಲಿ ಕೆರೆತ, ದೇಹ ಉರಿಯಾಗುವಿಕೆ, ತಲೆನೋವು, ತಲೆಯ ರಕ್ತನಾಳಗಳಲ್ಲಿ ಗಾಯ, ಊತಗಳು ಬರುತ್ತದೆ. ಅಲ್ಲದೆ, ಕೆಲವು ಅಂಗಗಳು ಅಂದರೆ ಕಣ್ಣು, ಕಿವಿ, ಹೃದಯ ಇತರ ಕೆಲಸಗಳ ನಿಯಂತ್ರಣ ತಪ್ಪುತ್ತದೆ. ಏಕೆಂದರೆ, ಮಿದುಳಿನಲ್ಲಿ ಪ್ರತಿಯೊಂದು ಅಂಗದ ನಿಯಂತ್ರಣ ಕೊಠಡಿ ಇದೆ (ಕ್ಯಾಬಿನ್). ಈ ಅಂಗ ನಿಯಂತ್ರಣದ ರಕ್ತದ ರಕ್ತನಾಳಗಳ ದೋಷಗಳಿಂದ ಅಂಗಾಂಗ ದೋಷ ಅಥವಾ ಅಂಗಾಂಗ ನಿಷ್ಕ್ರಿಯವಾಗುತ್ತದೆ. ಆದ್ದರಿಂದ ಈ ಮೂರ್ಧೆವ್ಯಾಧಿಗೆ (ಫಿಟ್ಸ್)ಗೆ ಈ ಆಮ್ಲಜನಕದ ಕೊರತೆಯು ಯಾವ ರೀತಿಯ ಲ್ಲಾದರೂ ಸಹ ಕಾರಣವಾಗುತ್ತದೆ.
ವೈದ್ಯಕೀಯ ರೀತಿ ಬರುವ ವಿಧಾನಗಳು
ಮಿದುಳಿನಲ್ಲಿ ನಂಜು, ಮಿದುಳಿನಲ್ಲಿ ಗಡ್ಡೆ ರಕ್ತನಾಳದಲ್ಲಿ ತಡೆಗಳು, ಮಿದುಳಿನಲ್ಲಿ ಕ್ಯಾನ್ಸರ್, ರಕ್ತದಲ್ಲಿ ಆಮ್ಲಜನಕದ ಕೊರತೆ
ಕಬ್ಬಿಣಾಂಶ – ಕಬ್ಬಿಣಾಂಶ ಇರುವ ಆಹಾರಗಳನ್ನು ಹೆಚ್ಚು ಸೇವಿಸಿ. ಇದರಿಂದ ನಾವು ತೆಗೆದು
ಕೊಳ್ಳುವ ಉಸಿರಿನ ಆಮ್ಲಜನಕದಲ್ಲಿ ಶೇಕಡ 40 ಭಾಗ ಆಮ್ಲಜನಕವು ಈ ಮಿದುಳು ಉಪಯೋಗಿಸು ತ್ತದೆ. ಆದ್ದರಿಂದ ಕಬ್ಬಿಣಾಂಶದ ಕೊರತೆಯಿಂದ ರಕ್ತಹೀನವಾಗಿ, ರಕ್ತದಲ್ಲಿರುವ ಹಿಮೋಗ್ಲೋಬಿನ್ ಪ್ರಮಾಣವು ಕಡಿಮೆಯಾಗಿ, ಆಮ್ಲಜನಕದ ಮಟ್ಟ ಕಡಿಮೆಯಾಗುತ್ತದೆ. ಆಮ್ಲಜನಕವಿಲ್ಲದೆ ಮಿದುಳಿನಲ್ಲಿ ಇರುವ ಜೀವಕೋಶಗಳು ಶುದ್ಧವಾಗದೆ, ಆಶುದ್ಧ ವಸ್ತು ಶೇಖರವಾಗಿ ಮಿದುಳಿಗೆ ಬಾಧೆಯಾಗಿ ಇತರ ವ್ಯಾಧಿಗಳು ಕಾಣಿಸಿಕೊಳ್ಳುವುದಲ್ಲದೆ, ರಕ್ತ ಹೆಪ್ಪುಗಟ್ಟುವ ಸಾಧ್ಯತೆಯೂ ಇರುತ್ತದೆ.
ಕಬ್ಬಿಣಾಂಶ ಆಹಾರಗಳು – ಒಣದ್ರಾಕ್ಷಿ, ಖರ್ಜೂರ, ಸೊಪ್ಪುಗಳು (ನುಗ್ಗೆ ಸೊಪ್ಪು), ಕಾಳು ಗಳು, ಅಗಸೆ, ಏಳಕಾಯಿ ಪಲ್ಯಮಾಡಿ ಸೇವಿಸಿದರೆ ಮಿದುಳಿನ ರಕ್ತನಾಳಗಳು ತೊಡಕು ನಿವಾರಣೆ ಆಗುತ್ತದೆ.
ಲಜ್ಜಾವತಿ (ಮುಟ್ಟಿದರೆ ಮುನಿ) – ಇದರ ಸೊಪ್ಪು ಮತ್ತು ಬೇರನ್ನು ನೀರಿನಲ್ಲಿ ಕುದಿಸಿ.ಆ ನೀರನ್ನು ಆರಿಸಿ ಕುಡಿದರೆ ರಕ್ತಸ್ರಾವ, ಹೆಪ್ಪುಗಟ್ಟುವಿಕೆ ತಡೆಯುತ್ತದೆ.
ಪರಿಹಾರಗಳು
ಮುದ್ರೆಗಳು – ವರುಣ ಮುದ್ರೆ, ಸುರಭಿ ಮುದ್ರೆ ಮತ್ತು ಪೃಥ್ವಿ ಮುದ್ರೆಗಳು.
ಜ್ಯೋತಿಷ್ಯದ ಪ್ರಕಾರ
ಜಾತಕದಲ್ಲಿ ಕಾರಕ ಗ್ರಹ – ಚಂದ್ರ ಮತ್ತು ಬುಧ.
ರಾಶಿಗಳಲ್ಲಿ – ಮೀನ ಮೇಷ ಮತ್ತು ಕುಂಭ ರಾಶಿಗಳು,
ಮೀನರಾಶಿ – ಚಾತಕದಲ್ಲಿ ಈ ರಾಶಿಯು ಫೆರಿಕ್ ಫಾಸ್ಟೇಟ್ ಲವಣ (ಕಬ್ಬಿಣಾಂಶ)ವನ್ನು ತೋರಿಸುತ್ತದೆ. ಜಾತಕದಲ್ಲಿ ಈ ರಾಶಿಯು ಪಾಪಗ್ರಹಗಳಿಂದ ಪೀಡಿತವಾದರೆ ಕಬ್ಬಿಣಾಂಶದ ಕೊರತೆಯನ್ನು ತೋರಿಸುತ್ತದೆ. ರಕ್ತದಲ್ಲಿರುವ ಆಮ್ಲಜನಕವು ಮಿದುಳಿನ ಅಂಗದಲ್ಲಿ ಚಲನೆಯಿಲ್ಲದೆ ನಿಷ್ಕ್ರೀಯವಾಗಿ ನಮಗೆ ಮೂರ್ಛಿ ಬರುತ್ತದೆ.
*ಮೇಷರಾಶಿ – ಇದು ಕಾಲಪುರುಷನ ಅಂಗವಾದ ತಲೆಯನ್ನು ತೋರಿಸುತ್ತದೆ. ಇದು ಪೀಡಿತವಾದರೆ ತಲೆಯ ಸಂಬಂಧೀ ವ್ಯಾಧಿಗಳು ಬರುತ್ತದೆ.
ಕುಂಭರಾಶಿ – ಜಾತಕದಲ್ಲಿ ಈ ರಾಶಿಯು ರಕ್ತದಚಲನೆಯನ್ನು ತೋರಿಸುತ್ತದೆ. ರಕ್ತದಲ್ಲಿ ಆಡೆತಡೆಗಳು, ರಕ್ತ ಹೆಪ್ಪುಗಟ್ಟುವುದು, ಕೊಬ್ಬಿನಾಂಶ ಶೇಖರಣೆಯನ್ನು ನೋಡಬಹುದು.
ಭಾವಗಳಲ್ಲಿ ಚತುರ್ಥಭಾವ
ಜಾತಕದಲ್ಲಿ ಪೀಡಿತ ಶನಿಯಿಂದ ಚಂದ್ರ ಪೀಡಿತನಾದರೆ ಅವರಿಗೆ ಮೂರ್ಧೆರೋಗ ಬರುತ್ತದೆ.
ಮಿದುಳು ಕಾರಕ ಗ್ರಹ ಗುರು. ಅದರಲ್ಲಿ ಬಲಭಾಗದ ಮಿದುಳಿಗೆ ಬುಧನು: ಎಡಭಾಗದ ಮಿದುಳಿಗೆ ಕುಜ ಕಾರಕ. ಜಾತಕದಲ್ಲಿಯೂ ಗುರು ಪೀಡಿತನಾದರೆ ಮಿದುಳು ತೊಂದರೆ.
ಮೂರ್ಛವ್ಯಾಧಿಗೆ ಇತರ ನಿಯಮಗಳು
1. ಗುರುವಿಗೆ 6, 8, 12ರ ಅಧಿಪತಿಗಳ ಸಂಬಂಧ ಬಂದಾಗ…
2. ಶನಿಯು ರವಿ ಮತ್ತು ಕುಜನೊಡನೆ 8ನೇ ಸ್ಥಾನದಲ್ಲಿದ್ದಾಗ…
3. ಲಗ್ನ ದ್ರೇಕ್ಕಾಣವು ಬುಧ ಅಥವಾ ಶನಿಯ ವರ್ಗದಲ್ಲಿ ಬಂದಾಗ…