ಮನೆ ಸುದ್ದಿ ಜಾಲ ಚಕ್ರಕ್ಕೆ ಸಿಲುಕಿದ ಹುರುಳಿಸೊಪ್ಪು: ಅರ್ಧಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ನಿಂತ ಆಂಬುಲೆನ್ಸ್

ಚಕ್ರಕ್ಕೆ ಸಿಲುಕಿದ ಹುರುಳಿಸೊಪ್ಪು: ಅರ್ಧಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ನಿಂತ ಆಂಬುಲೆನ್ಸ್

0

ಮೈಸೂರುಆಂಬ್ಯುಲೆನ್ಸ್‌ನ ಚಕ್ರಗಳಿಗೆ ರಸ್ತೆಯಲ್ಲಿ ಒಕ್ಕಣೆಗೆ ಹಾಕಿದ್ದ ಹುರುಳಿ ಸೊಪ್ಪು ಸಿಲುಕಿ ಅರ್ಧಗಂಟೆಗೂ ಹೆಚ್ಚು ಕಾಲ,  ಆಂಬುಲೆನ್ಸ್ ರಸ್ತೆಯಲ್ಲಿಯೇ ನಿಂತ ಘಟನೆ ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಗ್ರಾಮದಲ್ಲಿ ನಡೆದಿದೆ.

ಇದರಿಂದಾಗಿ ಅಂಬ್ಯಲೆನ್ಸ್ ನಲ್ಲಿದ್ದ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬುಲೆನ್ಸ್‌ನಲ್ಲಿದ್ದ ತರದೆಲೆ ಗ್ರಾಮದ ಗರ್ಭಿಣಿ ಪ್ರೇಮಾ ಹೆರಿಗೆ ನೋವಿನಿಂದ ಬಳಲಿದರು.

ಹುರುಳಿ ಸೊಪ್ಪು ಚಕ್ರಗಳಿಗೆ ಸಿಲುಕಿದ್ದರಿಂದ ವಾಹನ ಚಲಿಸಲಾಗದೇ ಚಾಲಕ ಸೊಪ್ಪನ್ನು ಬಿಡಿಸುವುದರಲ್ಲಿ ನಿರತರಾದರು. ಇವರ ಜತೆಗೆ ಸುತ್ತಮುತ್ತಲಿದ್ದ ರೈತರೂ ಸಹಕರಿಸಿದರು. ನಂತರ, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.