ಮನೆ ಅಂತಾರಾಷ್ಟ್ರೀಯ ಅಮೇರಿಕಾ: 18 ಜನರನ್ನು ಕೊಂದಿದ್ದ ಶಂಕಿತ ವ್ಯಕ್ತಿ ಶವವಾಗಿ ಪತ್ತೆ

ಅಮೇರಿಕಾ: 18 ಜನರನ್ನು ಕೊಂದಿದ್ದ ಶಂಕಿತ ವ್ಯಕ್ತಿ ಶವವಾಗಿ ಪತ್ತೆ

0

ಲೆವಿಸ್ಟನ್: ಮೈನೆನ ಲೆವಿಸ್ಟನ್‌ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ 18 ಜನರನ್ನು ಕೊಂದು 13 ಜನರನ್ನು ಗಾಯಗೊಳಿಸಿದ ಶಂಕಿತ ವ್ಯಕ್ತಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾನೆ,

ಈ ಕುರಿತು ಲೆವಿಸ್ಟನ್ ಪೊಲೀಸ್ ಅಧಿಕಾರಿಗಳು ಶಂಕಿತ ರಾಬರ್ಟ್ ಆರ್ ಕಾರ್ಡ್ ಸಾವನ್ನಪಿರುವುದನ್ನು ಖಚಿತಪಡಿಸಿದ್ದಾರೆ. ಅಲ್ಲದೆ ಆತ ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.

ಕಾರ್ಡ್ ಮೃತದೇಹವು ಲೆವಿಸ್ಟನ್‌ ನಗರದಿಂದ 8 ಕಿ.ಮೀ ದೂರದ ಕಾಡಿನಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಮೆರಿಕದ ಮೈನೆ ರಾಜ್ಯದಲ್ಲಿನ ಲೆವಿಸ್ಟನ್‌ ನಗರದ ‘ಬೌಲಿಂಗ್‌ ಅಲೈ’ ಮತ್ತು ರೆಸ್ಟೋರೆಂಟ್‌ ಕೇಂದ್ರದ ಮೇಲೆ ಮನಬಂದಂತೆ ದಾಳಿ ನಡೆಸಿದ ಕಾರ್ಡ್ ಸುಮಾರು ಹದಿನೆಂಟು ಮಂದಿಯನ್ನು ಹತ್ಯೆಗೈದಿದ್ದಾನೆ. ಅಲ್ಲದೇ ಸುಮಾರು ಅರುವತ್ತಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಬಳಿಕ ಲೆವಿಸ್ಟನ್‌ ಪೊಲೀಸರು ಕಾರ್ಡ್ ಪತ್ತೆಗೆ ಹಲವು ತಂಡ ರಚಿಸಿದ್ದರು. ಆದರೆ ಕಾರ್ಡ್ ಎರಡು ದಿನಗಳ ಬಳಿಕ ಲೆವಿಸ್ಟನ್‌ ನಲ್ಲಿರುವ ಕಾಡಿನಲ್ಲಿ ಮೃತದೇಹ ಪತ್ತೆಯಾಗಿದೆ.

ಹಿಂದಿನ ಲೇಖನಚಂದ್ರಗ್ರಹಣ: ಮಧ್ಯಾಹ್ನದ ನಂತರ ದೇವಾಲಯ ಪ್ರವೇಶಕ್ಕೆ ನಿರ್ಬಂಧ
ಮುಂದಿನ ಲೇಖನನವಿಲುಗರಿಗೆ ವಿನಾಯಿತಿ ನೀಡಲಾಗಿದೆ: ಸಚಿವ ಈಶ್ವರ ಖಂಡ್ರೆ