ಮನೆ ಕಾನೂನು ಸೋಷಿಯಲ್‌ ಮೀಡಿಯಾ ಬಳಸಿದರೆ ಪರಿಣಾಮ ಕೂಡ ಎದುರಿಸಿ: ಸುಪ್ರೀಂಕೋರ್ಟ್

ಸೋಷಿಯಲ್‌ ಮೀಡಿಯಾ ಬಳಸಿದರೆ ಪರಿಣಾಮ ಕೂಡ ಎದುರಿಸಿ: ಸುಪ್ರೀಂಕೋರ್ಟ್

0

ನವದೆಹಲಿ: ಸಾಮಾಜಿಕ ಜಾಲತಾಣಗಳನ್ನು ಬಳಸುವವರು ತಮ್ಮ ಚಟುವಟಿಕೆಗಳಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಎಚ್ಚರದಿಂದ ಇರಬೇಕು. ಸೋಷಿಯಲ್‌ ಮೀಡಿಯಾ ಬಳಸುವುದು ತಮಗೆ ಅಗತ್ಯ ಎಂದು ಅವರು ಭಾವಿಸಿದ್ದರೆ ಅದರ ಪರಿಣಾಮಗಳನ್ನು ಎದುರಿಸಲೂ ಸಿದ್ಧರಿರಬೇಕು ಎಂದು ಸುಪ್ರೀಂಕೋರ್ಟ್‌ ತೀಕ್ಷ್ಣವಾಗಿ ಹೇಳಿದೆ.

ತಮಿಳುನಾಡಿನ ಮಾಜಿ ಶಾಸಕ ಹಾಗೂ ನಟ ಎಸ್‌.ವಿ.ಶೇಖರ್‌ ಎಂಬುವರು 2018ರಲ್ಲಿ ಫೇಸ್‌ಬುಕ್‌ನಲ್ಲಿ ಪತ್ರಕರ್ತೆಯರ ಬಗ್ಗೆ ಅವಹೇಳನಕಾರಿಯಾದ ಪೋಸ್ಟ್‌ ಒಂದನ್ನು ಶೇರ್‌ ಮಾಡಿದ್ದರು. ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಾಗಿತ್ತು. ಅದನ್ನು ರದ್ದುಪಡಿಸುವಂತೆ ಅವರು ಮದ್ರಾಸ್‌ ಹೈಕೋರ್ಟ್‌ ಗೆ ಹೋಗಿದ್ದರು. ಅಲ್ಲಿ ಅರ್ಜಿ ವಜಾಗೊಂಡಿತ್ತು. ಅವರು ಸುಪ್ರೀಂಕೋರ್ಟ್‌ ಗೆ ಮೇಲ್ಮನವಿ ಸಲ್ಲಿಸಿದ್ದರು. ಅದನ್ನು ಶುಕ್ರವಾರ ವಜಾಗೊಳಿಸಿದ ಸುಪ್ರೀಂಕೋರ್ಟ್‌ , ‘ಸೋಷಿಯಲ್‌ ಮೀಡಿಯಾ ಬಳಕೆದಾರರು ಎಚ್ಚರಿಕೆಯಿಂದ ಇರಬೇಕು’ ಎಂದು ಕಿವಿಮಾತು ಹೇಳಿತು.

ಶೇಖರ್‌ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಶೇರ್‌ ಮಾಡುವಾಗ ಕಣ್ಣಿಗೆ ಔಷಧಿ ಬಿಟ್ಟುಕೊಂಡಿದ್ದರು. ಹೀಗಾಗಿ ಅವರಿಗೆ ಅಲ್ಲಿ ಏನು ಬರೆದಿದೆ ಎಂಬುದು ಸರಿಯಾಗಿ ಕಾಣಿಸಿರಲಿಲ್ಲ. ಪೋಸ್ಟ್‌ನಲ್ಲಿ ಪತ್ರಕರ್ತೆಯರ ಬಗ್ಗೆ ಅವಹೇಳನಕಾರಿಯಾದ ಅಂಶವಿರುವುದು ತಿಳಿದ ಕೂಡಲೇ ಅದನ್ನವರು ಡಿಲೀಟ್‌ ಮಾಡಿದ್ದರು ಎಂದು ಅವರ ಪರ ವಕೀಲರು ವಾದಿಸಿದ್ದರು. ಅದನ್ನು ಸುಪ್ರೀಂಕೋರ್ಟ್‌ ಒಪ್ಪಿಕೊಳ್ಳಲಿಲ್ಲ.

ಹಿಂದಿನ ಲೇಖನಚೆನ್ನೈ: ಬಿರಿಯಾನಿ ವಿಚಾರಕ್ಕೆ ಗಲಾಟೆ, ಯುವಕನ ಕೊಲೆ
ಮುಂದಿನ ಲೇಖನಎಂಬಿಬಿಎಸ್ ವ್ಯಾಸಂಗ ಮಾಡುವ ಮೆರಿಟ್ ವಿದ್ಯಾರ್ಥಿಗಳಿಗೆ ಸಾಲದ ಪ್ರಮಾಣ ಐದು ಲಕ್ಷ ರೂ. ಗೆ ಏರಿಸಲು ಚಿಂತನೆ: ಜಮೀರ್ ಅಹಮದ್