ಮನೆ ರಾಜ್ಯ ರೈತರಿಗೆ ಬೆಳೆ ನಷ್ಟದ ಪರಿಹಾರ ನೀಡಲು ಕಾರ್ಖಾನೆಗೆ ಆದೇಶ

ರೈತರಿಗೆ ಬೆಳೆ ನಷ್ಟದ ಪರಿಹಾರ ನೀಡಲು ಕಾರ್ಖಾನೆಗೆ ಆದೇಶ

0

ಮಂಡ್ಯ(Mandya): ಕೀರ್ತಿ ರಾಸಾಯನಿಕ ಸಲ್ಪೂರಿಕ್ ಆಸಿಡ್ ತಯಾರಿಕಾ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಿಂದ ಬೆಳೆ ನಷ್ಟವಾದ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಮಂದಿ ರೈತರಿಗೆ 6.89 ಲಕ್ಷ ರು. ಪರಿಹಾರ ನೀಡುವಂತೆ ರಾಜ್ಯಸರ್ಕಾರ ಆದೇಶ ನೀಡಿದೆ.

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ ಮತ್ತು ಸೇವೆಗಳು) ಸರ್ಕಾರದ ಅಧೀನ ಕಾರ್ಯದರ್ಶಿ ಜಿ. ಎನ್. ಸುಶೀಲ ಬೆಳೆಹಾನಿಯಾಗಿರುವ ಸಂತ್ರಸ್ತ ರೈತರಿಗೆ ಕಂಪನಿಯವರಿಂದ ಪರಿಹಾರ ಪಾವತಿಸುವಂತೆ ಆದೇಶಿಸಿದ್ದಾರೆ.

ಮಂಡ್ಯ ತಹಶೀಲ್ದಾರ್‌ಗೆ ಪತ್ರ ಬರೆದಿರುವ ಜಿಲ್ಲಾಧಿಕಾರಿಗಳು ರೈತರಿಗೆ ಪರಿಹಾರ ಪಾವತಿಸುವ ಸಂಬಂಧ ಕ್ರಮವಹಿಸಿ, ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಇದೇ ಜನವರಿಯಲ್ಲಿ ತಾಲೂಕಿನ ಬಸರಾಳು ಹೋಬಳಿ ಕಾರೆಕಟ್ಟೆ ಗ್ರಾಮದ ರಾಸಾಯನಿಕ ಸೋರಿಕೆಯಿಂದ ಕಾರ್ಖಾನೆ ಸುತ್ತಮುತ್ತಲಿನ 20 ಎಕರೆಗೂ ಹೆಚ್ಚು ಬೆಳೆ ನಾಶವಾಗಿತ್ತು. ಹಲವು ಜಾನುವಾರುಗಳ ಮೇಲೆ ಪರಿಣಾಮ ಬೀರಿತ್ತು. ಹಾಗಾಗಿ ಆ ಘಟಕವನ್ನು ಜಿಲ್ಲಾಡಳಿತ ಸ್ಥಗಿತಗೊಳಿಸಿತ್ತು. ವಿಷಾನಿಲ ಸೋರಿಕೆಯಿಂದ ರಾಗಿ, ಭತ್ತ, ಕಬ್ಬಿನ ಬೆಳೆಗಳು ಸಂಪೂರ್ಣ ಒಣಗಿ ಹೋಗಿತ್ತು. ಕೆಲವೊಂದು ಕಡೆ ತೆಂಗಿನ ಮರಗಳಿಗೂ ಕೂಡ ಹಾನಿಯಾಗಿತ್ತು. ಸೋರಿಕೆಯಾದ ವಿಷಾನಿಲದಿಂದ ರೈತರಿಗೆ ಸೇರಿದ 15 ಎಕರೆ ಜಮೀನು ಹಾಗೂ ಸುಮಾರು 20 ಎಕರೆಗೂ ಮೇಲ್ಪಟ್ಟು ಅರಣ್ಯ ಇಲಾಖೆಗೆ ಸೇರಿದ ಪ್ರದೇಶ ಹಾನಿಗೊಳಗಾಗಿತ್ತು.

ವಿಷಾನಿಲ ಸೋರಿಕೆಯಿಂದ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ನೀಡಲು ಸೂಕ್ತ ಆದೇಶ ನೀಡುವಂತೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅದರಂತೆ ಮಂಡ್ಯ ಉಪವಿಭಾಗಾಕಾರಿ, ತಾಲೂಕು ಸಹಾಯಕ ಕೃಷಿ ನಿರ್ದೇಶಕರು, ತೋಟಗಾರಿಕೆ ಇಲಾಖೆ, ವಲಯ ಅರಣ್ಯಯಾಧಿಕಾರಿ ಅವರನ್ನೊಳಗೊಂಡ ತಂಡ ರಚಿಸಿ ಬೆಳೆ ನಷ್ಟ ಕುರಿತಂತೆ ಜಂಟಿ ಸಮೀಕ್ಷಾ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು.

ಒಟ್ಟು 6,89,283 ರು. ಪರಿಹಾರ ಈ ಸಂಬಂಧ ಬೆಳೆ ಹಾನಿಯಾದ ರೈತರು, ಕಾರ್ಖಾನೆ ಪ್ರತಿನಿಧಿಗಳು ಹಾಗೂ ಸಮೀಕ್ಷಾ ತಂಡದ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಲಾಗಿದ್ದು, ಅಧಿಕಾರಿಗಳು ನಿಗದಿಪಡಿಸಿದ ಪರಿಹಾರ ಮೊತ್ತ ಪಡೆಯಲು ರೈತರು, ಕಂಪನಿ ಅಧಿಕಾರಿಗಳು ಒಪ್ಪಿದ್ದರು. ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಬೆಳೆನಷ್ಟಕ್ಕೊಳಗಾದ 5 ಮಂದಿ ರೈತರಿಗೆ 2,29,603 ರು. ಹಾಗೂ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ 7 ಮಂದಿ ಲಾನುಭವಿಗಳಿಗೆ 4,49,680 ರು. ಸೇರಿ 6,89,283 ರು. ಪರಿಹಾರ ಪಾವತಿಸಲು ನಿರ್ಧರಿಸಲಾಗಿತ್ತು.

ಹಿಂದಿನ ಲೇಖನನಕಲಿ ಬೀಜ, ನಕಲಿ ಗೊಬ್ಬರ ಪೂರೈಕೆ: ಜಾಲದ ಬುಡವನ್ನೇ ಕತ್ತರಿಸಿ- ಬಿ.ಸಿ.ಪಾಟೀಲ್
ಮುಂದಿನ ಲೇಖನನಾನು ಮಂಡ್ಯ ಬಿಟ್ಟು ಹೋಗುವುದಿಲ್ಲ: ಸಂಸದೆ ಸುಮಲತಾ ಅಂಬರೀಶ್‌