ಬೆಂಗಳೂರು: ಉದಯೋನ್ಮುಖ ಖ್ಯಾತ ಯುವನಟ ಕಿರಣ್ ರಾಜ್ ಅವರು ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಘಟನೆ ಕೆಂಗೇರಿ ಬಳಿ ಮಂಗಳವಾರ ರಾತ್ರಿ (ಸೆ 10) ರಂದು ನಡೆದಿದೆ.
ಕಿರಣ್ ರಾಜ್ ಅವರೊಂದಿಗೆ ಬೆಂಜ್ ಕಾರಿನಲ್ಲಿ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಇದ್ದಿದ್ದು ಅವರು ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್ಗೆ ಡಿಕ್ಕಿಯಾದ್ದು, ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನ ಮುಂದಿನ ಚಕ್ರ ಕಳಚಿ ಬಿದ್ದಿರುವುದು ಅಪಘಾತದ ತೀವ್ರತೆಗೆ ಸಾಕ್ಷಿಯಾಗಿದೆ.
31 ರ ಹರೆಯದ ಕಿರಣ್ ರಾಜ್ ಅವರನ್ನು ಆಸ್ಪತೆಗೆ ದಾಖಲಿಸಲಾಗಿದ್ದು ಅವರ ಎದೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಗುಟ್ಟಯ್ಯನ ಪಾಳ್ಯದ ಸಿದ್ದೇಶ್ವರ ನಿರಾಶ್ರಿತ ಕೇಂದ್ರಕ್ಕೆ ಭೇಟಿ ನೀಡಿ ವಾಪಾಸಾಗುತ್ತಿದ್ದ ವೇಳೆ ಅವಘಡ ನಡೆದಿದೆ ಎನ್ನಲಾಗಿದೆ. ಪ್ರತಿವಾರವೂ ಅಲ್ಲಿ ಭೇಟಿ ಊಟ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.
”ಕನ್ನಡತಿ” ಧಾರಾವಾಹಿಯ ಹರ್ಷ ಪಾತ್ರದ ಮೂಲಕ ಜನಪ್ರಿಯರಾಗಿದ್ದರು. ಚಿತ್ರರಂಗಕ್ಕೂ ಕಾಲಿಟ್ಟಿದ್ದ ಕಿರಣ್ ರಾಜ್ ಅಭಿನಯದ ರಾನಿ ಸಿನಿಮಾ ನಾಳೆ(ಗುರುವಾರ)ಬಿಡುಗಡೆಯಾಗುತ್ತಿದೆ. ಟೀಸರ್, ಟ್ರೇಲರ್ ಬಿಡುಗಡೆಯಾಗಿದ್ದು ಚಿತ್ರ ನಿರೀಕ್ಷೆ ಹುಟ್ಟುಹಾಕಿದೆ.