ಹೈದರಾಬಾದ್ : ನಟ, ನಿರ್ದೇಶಕ ಫರ್ಹಾನ್ ಅಖ್ತರ್ ತಮ್ಮ ಗೆಳತಿ ಶಿವಾನಿ ದಾಂಡೇಕರ್ ಜೊತೆ ಸಪ್ತಪದಿ ತುಳಿಯಲು ಸಿದ್ಧರಾಗಿದ್ದು, ಈ ಬಗ್ಗೆ ಫರ್ಹಾನ್ ತಂದೆ ಜಾವೇದ್ ಅಖ್ತರ್ ಮಾಹಿತಿ ನೀಡಿದ್ದಾರೆ.
ಫರ್ಹಾನ್ ಹಾಗೂ ಶಿವಾನಿ ಫೆಬ್ರುವರಿ 21ರಂದು ವಿವಾಹವಾಗಲಿದ್ದಾರೆ. ಶಿವಾನಿ ನಿರೂಪಕಿ, ಹಾಡುಗಾರ್ತಿ ಹಾಗೂ ನಟಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ವಿವಾಹದ ತಯಾರಿಯನ್ನು ಸಂಸ್ಥೆಯೊಂದು ನಿರ್ವಹಿಸುತ್ತಿದ್ದು, ಕೆಲಸಗಳು ನಡೆಯುತ್ತಿವೆ. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆ ನಾವು ವಿವಾಹವನ್ನು ಅದ್ಧೂರಿಯಾಗಿ ಆಯೋಜಿಸುತ್ತಿಲ್ಲ. ಕುಟುಂಬಸ್ಥರು ಸೇರಿದಂತೆ ಕೆಲವೇ ಜನರನ್ನು ಮಾತ್ರ ಕರೆಯುತ್ತಿದ್ದೇವೆ. ತುಂಬಾ ಸರಳವಾಗಿ ವಿವಾಹ ಕಾರ್ಯ ನೆರವೇರಲಿದೆ ಎಂದು ಜಾವೇದ್ ಹೇಳಿದ್ದಾರೆ.
ಫರ್ಹಾನ್ ಅಖ್ತರ್ ಅವರಿಗೆ ಇದು ಎರಡನೇ ವಿವಾಹ. ಈ ಮುನ್ನ ಅವರು ಕೇಶ ವಿನ್ಯಾಸಕಿ ಅದ್ಬುನ ಭಬಾನಿ ಅವರನ್ನು ವಿವಾಹವಾಗಿದ್ದರು. 2017ರಲ್ಲಿ ಈರ್ವರೂ ಬೇರ್ಪಟ್ಟಿದ್ದರು. ಈ ದಂಪತಿಗೆ ಶಕ್ಯ ಹಾಗೂ ಅಕಿರಾ ಎಂಬ ಮಕ್ಕಳಿದ್ದಾರೆ.