ಮನೆ ಮನರಂಜನೆ ಗೆಳತಿ ಜೊತೆ ಸಪ್ತಪದಿ ತುಳಿಯಲು ಸಜ್ಜಾದ ಫರ್ಹಾನ್ ಅಖ್ತರ್

ಗೆಳತಿ ಜೊತೆ ಸಪ್ತಪದಿ ತುಳಿಯಲು ಸಜ್ಜಾದ ಫರ್ಹಾನ್ ಅಖ್ತರ್

0

ಹೈದರಾಬಾದ್ : ನಟ, ನಿರ್ದೇಶಕ ಫರ್ಹಾನ್ ಅಖ್ತರ್ ತಮ್ಮ ಗೆಳತಿ ಶಿವಾನಿ ದಾಂಡೇಕರ್ ಜೊತೆ ಸಪ್ತಪದಿ ತುಳಿಯಲು ಸಿದ್ಧರಾಗಿದ್ದು, ಈ ಬಗ್ಗೆ ಫರ್ಹಾನ್ ತಂದೆ ಜಾವೇದ್ ಅಖ್ತರ್ ಮಾಹಿತಿ ನೀಡಿದ್ದಾರೆ.

ಫರ್ಹಾನ್ ಹಾಗೂ ಶಿವಾನಿ ಫೆಬ್ರುವರಿ 21ರಂದು ವಿವಾಹವಾಗಲಿದ್ದಾರೆ. ಶಿವಾನಿ ನಿರೂಪಕಿ, ಹಾಡುಗಾರ್ತಿ ಹಾಗೂ ನಟಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ವಿವಾಹದ ತಯಾರಿಯನ್ನು ಸಂಸ್ಥೆಯೊಂದು ನಿರ್ವಹಿಸುತ್ತಿದ್ದು, ಕೆಲಸಗಳು ನಡೆಯುತ್ತಿವೆ. ಕೋವಿಡ್​ ಸಾಂಕ್ರಾಮಿಕದ ಹಿನ್ನೆಲೆ ನಾವು ವಿವಾಹವನ್ನು ಅದ್ಧೂರಿಯಾಗಿ ಆಯೋಜಿಸುತ್ತಿಲ್ಲ. ಕುಟುಂಬಸ್ಥರು ಸೇರಿದಂತೆ ಕೆಲವೇ ಜನರನ್ನು ಮಾತ್ರ ಕರೆಯುತ್ತಿದ್ದೇವೆ. ತುಂಬಾ ಸರಳವಾಗಿ ವಿವಾಹ ಕಾರ್ಯ ನೆರವೇರಲಿದೆ ಎಂದು ಜಾವೇದ್ ಹೇಳಿದ್ದಾರೆ.

ಫರ್ಹಾನ್ ಅಖ್ತರ್ ಅವರಿಗೆ ಇದು ಎರಡನೇ ವಿವಾಹ. ಈ ಮುನ್ನ ಅವರು ಕೇಶ ವಿನ್ಯಾಸಕಿ ಅದ್ಬುನ ಭಬಾನಿ ಅವರನ್ನು ವಿವಾಹವಾಗಿದ್ದರು. 2017ರಲ್ಲಿ ಈರ್ವರೂ ಬೇರ್ಪಟ್ಟಿದ್ದರು. ಈ ದಂಪತಿಗೆ ಶಕ್ಯ ಹಾಗೂ ಅಕಿರಾ ಎಂಬ ಮಕ್ಕಳಿದ್ದಾರೆ.

ಹಿಂದಿನ ಲೇಖನಹಿಜಾಬ್ ವಿವಾದ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಮುಂದಿನ ಲೇಖನಕರೆಯದೇ ಊಟಕ್ಕೆ ಹೋಗುವವನು ನಾನಲ್ಲ: ಎಸ್.ಎ.ರಾಮದಾಸ್