ಮನೆ ಅಪರಾಧ ಪಾರ್ಟಿಯಲ್ಲಿ ಗುಂಡಿನ ದಾಳಿ: ಇಬ್ಬರು ಅಪ್ರಾಪ್ತರ ಸಾವು

ಪಾರ್ಟಿಯಲ್ಲಿ ಗುಂಡಿನ ದಾಳಿ: ಇಬ್ಬರು ಅಪ್ರಾಪ್ತರ ಸಾವು

0

ವಾಷಿಂಗ್ಟನ್: ಅಮೆರಿಕದ ಪೆನ್ಸಿಲ್ವೇನಿಯಾದ ಪ್ರಮುಖ ನಗರವಾದ ಪಿಟ್ಸ್‌ಬರ್ಗ್‌ನ ಪಾರ್ಟಿಯೊಂದರಲ್ಲಿ ಗುಂಡಿನ ದಾಳಿಯಲ್ಲಿ ಇಬ್ಬರು ಅಪ್ರಾಪ್ತರು ಸಾವಿಗೀಡಾಗಿದ್ದು, ಎಂಟು ಜನರು ಗಾಯಗೊಂಡಿದ್ದಾರೆ.

ಮಧ್ಯರಾತ್ರಿ ಮನೆಯೊಂದರಲ್ಲಿ ನಡೆಯುತ್ತಿದ್ದ ಸುಮಾರು 200 ಜನರು ಹಾಜರಿದ್ದ ಪಾರ್ಟಿಯ ಸಮಯದಲ್ಲಿ ಗುಂಡಿನ ದಾಳಿ ನಡೆದಿದೆ. ಪಾರ್ಟಿಯಲ್ಲಿದ್ದವರ ಪೈಕಿ ಹಲವರು ಅಪ್ರಾಪ್ತರು ಎಂದು ತಿಳಿದುಬಂದಿದ್ದು, ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಅಪ್ರಾಪ್ತರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇನ್ನೂ ಎಂಟು ಜನರು ಗುಂಡೇಟಿನ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. 50 ಸುತ್ತು ಗುಂಡು ಹಾರಿಸಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾರ್ಟಿಯಲ್ಲಿ ಇದ್ದ ಕೆಲವರು ಕಿಟಕಿಗಳಿಂದ ಹೊರಗೆ ಜಿಗಿದಿದ್ದಾರೆ. ಮನೆಯ ಹೊರಗಡೆಯೂ ಹಲವರ ಮೇಲೆ ಗುಂಡು ಹಾರಿಸಲಾಗಿದೆ ಎಂದು ತಿಳಿದುಬಂದಿದೆ.