ಮನೆ ಸುದ್ದಿ ಜಾಲ ರಷ್ಯಾ-ಉಕ್ರೇನ್ ಸಂಘರ್ಷ: ಉಕ್ರೇನ್ ನ 137 ಮಂದಿ ಸಾವು

ರಷ್ಯಾ-ಉಕ್ರೇನ್ ಸಂಘರ್ಷ: ಉಕ್ರೇನ್ ನ 137 ಮಂದಿ ಸಾವು

0

ಕೈವ್ರಷ್ಯಾ ಉಕ್ರೇನ್ ಮೇಲೆ ದಾಳಿ ಆರಂಭಿಸಿದಾಗಿನಿಂದ ಇಲ್ಲಿಯವರೆಗೆ ಸೈನಿಕರು, ನಾಗರಿಕರು ಸೇರಿದಂತೆ  137 ಜನರು ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್  ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶುಕ್ರವಾರ ಮುಂಜಾನೆ ವೀಡಿಯೊ ಭಾಷಣದಲ್ಲಿ ತಿಳಿಸಿದ್ದಾರೆ. 

ಉಕ್ರೇನ್ ವಿರುದ್ಧ ಪೂರ್ಣ ಪ್ರಮಾಣದಲ್ಲಿ ದಾಳಿ ಆರಂಭಿಸಿರುವ ರಷ್ಯಾ, ತನ್ನ ವಾಯು, ಕ್ಷಿಪಣಿ ದಾಳಿಯೊಂದಿಗೆ ಉಕ್ರೇನ್ ನ ಉತ್ತರ,ಪೂರ್ವ, ದಕ್ಷಿಣದ ಗಡಿಯುದ್ದಕ್ಕೂ ದಾಳಿ ನಡೆಸುತ್ತಿದ್ದು,  ಉಕ್ರೇನ್ ನ ಮಿಲಿಟರಿ ಸೌಲಭ್ಯಗಳನ್ನು ನಾಶಪಡಿಸುತ್ತಿದೆ. 

ಉಕ್ರೇನ್ ರಾಜಧಾನಿ ಕೈವ್ ಮತ್ತು ಇತರ ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳಲು ರಷ್ಯಾ ಉದ್ದೇಶಿಸರಬಹುದು ಮತ್ತು ಅಂತಿಮವಾಗಿ ಹೆಚ್ಚು ಸ್ನೇಹಪರ ಸರ್ಕಾರವನ್ನು ಸ್ಥಾಪಿಸಲು ರಷ್ಯಾ ಉದ್ದೇಶಿಸಿರಬಹುದು ಎಂದು ಯುಎಸ್ ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಉಕ್ರೇನಿಯನ್ ಪಡೆಗಳು ಮತ್ತೆ ಹೋರಾಟಕ್ಕಿಳಿದಾಗ ನಾಗರಿಕರು ರೈಲುಗಳು ಮತ್ತು ಕಾರುಗಳಲ್ಲಿ ಪಲಾಯನ ಮಾಡುತ್ತಿದ್ದಾರೆ. ಅಮೆರಿಕ ಮತ್ತಿತರ ಯೂರೋಪಿಯನ್ ಮುಖಂಡರು ಆರ್ಥಿಕ ನಿರ್ಬಂಧ ವಿಧಿಸುವುದರೊಂದಿಗೆ ರಷ್ಯಾಗೆ ಪ್ರತೀಕಾರ ನೀಡಲು ಮುಂದಾಗಿದ್ದಾರೆ. ಪೂರ್ವ ಭಾಗದತ್ತ ನ್ಯಾಟೋ ಪಡೆ ಧಾವಿಸಿದೆ.

ಹಿಂದಿನ ಲೇಖನಉಕ್ರೇನ್ ನಲ್ಲಿ ರಾಜ್ಯದ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿದ್ದಾರೆ: ಹೆಚ್ ಡಿಕೆ
ಮುಂದಿನ ಲೇಖನಉಕ್ರೇನ್​​ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಸಿದ್ಧತೆ: ನೋಡಲ್ ಅಧಿಕಾರಿ ನೇಮಕ; ಸಹಾಯವಾಣಿ ಆರಂಭ