ಮನೆ ಆರೋಗ್ಯ ಫ್ಲೂ

ಫ್ಲೂ

0

ಲಾರಿಯ ಚಕ್ರದಡಿ ಸಿಕ್ಕು ನೆರಳುತ್ತಿರುವಂತೆ ಭಾಸವಾಗುತ್ತಿದೆಯೇ? ಜ್ವರದ ತಾಪಕ್ಕೆ ಸತ್ತು ಹೋಗುತ್ತೇನೆಂದು ಭಯವಾಗುತ್ತಿದೆಯೇ? ತಲೆ ಸಿಡಿದು ಹೋಗುತ್ತಿರುವಂತಿದೆಯೇ? ಶರೀರದ ಮಾಂಸ ಖಂಡಗಳು ಕಿತ್ತು ಬರುವಷ್ಟು ನೋವಾಗುತ್ತಿದೆಯೇ?

ಹಾಗಾದರೆ ನಿಮಗೆ ಫ್ಲೂ ವೈರಸ್ ಆಕ್ರಮಿಸಿದೆ ರೋಗವಾಸಿಯಾಗುವ ತನಕ ನಿಮ್ಮನ್ನು ಹೀಗೆ ಹಿಂಸಿಸುತ್ತಿರುತ್ತದೆ.

ವೈದ್ಯರ ಪ್ರಕಾರ ಅಮೇರಿಕಾದಲ್ಲಿ 13 ಮಿಲಿಯನ್ ವ್ಯಕ್ತಿಗಳು ಫ್ಲೂನಿಂದ ಬಳಲುತ್ತಾರೆ. ಇದರಲ್ಲಿ 72,000 ಆರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಾರೆ. ನಿಮೋನಿಯಾದಂತಹ ರೋಗಗಳಿಂದ ಪ್ರತಿವರ್ಷ 69 ಸಾವಿರ ಜನ ಸಾಯುತ್ತಾರೆ ಎಂದು ಅಂಕಿ – ಅಂಶಗಳು ತಿಳಿಸುತ್ತವೆ.

ಫ್ಲೂ ರೋಗದ ಆರಂಭ ಗೊತ್ತೆ ಆಗುವುದಿಲ್ಲ. ಮೊದಮುದಲು ಮೈಯಲ್ಲಿ ನೋವು ಕಾಣಿಸಿಕೊಳ್ಳುವುದು, ಹಾಗೆ ತಲೆನೋವು, ಗಂಟಲು ನೋವು ಆಗಬಹುದು. ಸ್ವಲ್ಪ ದಿನಗಳ ನಂತರ ಚಳಿ ಚಳಿ ಎನಿಸಿ, ಜ್ವರ, ಕೆಮ್ಮು, ಮೈನುಡುಗಿಸುವಂತಹ ಚಳಿ, ಕೀಲು ನೋವು ಮುಂತಾದ ಲಕ್ಷಣಗಳು ಇದ್ದರೆ ಫ್ಲೂ ನಿಮ್ಮನ್ನು ಸಂಪೂರ್ಣ ಆವರಿಸಿಕೊಂಡಿದೆ ಎಂದರ್ಥ ಸಾವಿರ ಮುಖದ ರಾಕ್ಷಸಿ ಎಂದು ಫ್ಲೂ ಕಾಯಿಲೆಯನ್ನು ಕರೆಯಬಹುದು.

ಇನ್ ಫ್ಲೂಯೆಂಜಾ ವೈರಸ್ ನಲ್ಲಿ ಮುಖ್ಯವಾಗಿ ಎ, ಬಿ, ಸಿ ಎನ್ನುವ ಮೂರು ವಿಧಗಳಿದ್ದರೂ, ಅವು ಮೂರು ಸೇರಿಕೊಂಡು ಅನೇಕ ರೂಪ ತಾಳುತ್ತವೆ. ನೀವು ಯಾವ ಒಂದು ವೈರಸ್ಗೆ ಲಸಿಕೆ ತೆಗೆದುಕೊಂಡಿದ್ದರು ಕಾಲಕ್ಕೆ ತಕ್ಕಂತೆ ಬೇರೊಂದು ರೂಪದಲ್ಲಿ  ಫ್ಲೂ ವೈರಸ್  ಗಳು ನಿಮ್ಮ ಮೇಲೆ ಆಕ್ರಮಣ ಮಾಡಿ ಬಲಹೀನಗೋತ್ತದೆ.

ಫ್ಲೂ ಉಂಟಾದಾಗ ಆಂಟಿಬಯೋಟಿಕ್ಸ್ ತೆಗೆದುಕೊಳ್ಳುವುದರಿಂದ ಯಾವ ಪ್ರಯೋಜನವೂ ಇಲ್ಲ. ಏಕೆಂದರೆ ಫ್ಲೂ ಬರುವುದು ವೈರಸ್ ಗಳಿಂದ ಆಂಟಿಬಯೋಟಿಕ್ ವೈರಸ್ ಗಳನ್ನು ಏನು ಮಾಡುವುದಿಲ್ಲ. ಆಗ ವೈದ್ಯರು ಬೇರೆ ಔಷಧಿಗಳನ್ನು ಸೂಚಿಸಬೇಕಾಗುತ್ತದೆ.

ಫ್ಲೂ ಬಂದಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು

ಮನೆಯಲ್ಲಿಯೇ ಇರುವುದು

ಫ್ಲೂ ಬಹಳ ಬೇಗ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ರೋಗಕ್ಕೆ ತುತ್ತಾದವರು ನಿಷ್ಠಾವಂತ ಅಧಿಕಾರಿಯಾಗಾದರೂ, ಆಫೀಸು, ಕಾಲೇಜುಗಳಿಗೆ ಹೋಗದೆ ಮನೆಯಲ್ಲಿ ಇರುವುದು ಸೂಕ್ತ. ಇದರಿಂದ ಇತರರು ಈ ರೋಗಕ್ಕೆ ತುತ್ತಾಗುವ ಸಾಧ್ಯತೆ ಇರದು.

• ಫ್ಲೂ ಪೂರ್ತಿ ವಾಸಿಯಾಗುವವರೆಗೂ ಮನೆಯಲ್ಲಿ ಇರಿ. ಜ್ವರ ಸಾಮಾನ್ಯ ಸ್ಥಿತಿಗೆ ಮರಳಿದ ನಂತರ ಮಾರನೇ ದಿನ ಹೊರ ಹೋಗಬಹುದು ಮಕ್ಕಳಿಗೂ ಇದೇ ರೀತಿ ಮಾಡಿ.

ವಿಶ್ರಾಂತಿ ತೆಗೆದುಕೊಳ್ಳಿ

ವಾಸ್ತವವಾಗಿ ರೋಗಪೀಡಿತರಾದವರು ಯಾವ ಕೆಲಸವನ್ನು ಮಾಡಲಾಗದ ನಿಶಕ್ತಿ ಆಲಸ್ಯದಿಂದ ಬಳಲುತ್ತಿರುತ್ತಾರೆ. ಆದುದರಿಂದ ಈ ಸಲಹೆಯನ್ನು ಮರುತಾಡದೇ ಸ್ವೀಕರಿಸುತ್ತೀರಿ. ಯಾವ ಯೋಜನೆ ಮಾಡದೆ ಮಲಗಿ ವಿಶ್ರಾಂತಿ ಪಡೆಯಿರಿ.

ಹಾಗೆ ವಿಶ್ರಾಂತಿ ಸ್ಥಿತಿಯಲ್ಲಿದ್ದಾಗ ಶರೀರದ ರೋಗ ನಿರೋಧಕ ಶಕ್ತಿ ಫ್ಲೂ ವೈರಸ್ ನೊಂದಿಗೆ ಹೋರಾಡಲು ಶಕ್ತವಾಗಿರುತ್ತದೆ. ನೀವು ಓಡಾಡುವುದು ಮುಂತಾದವನ್ನು ಮಾಡುತ್ತಿದ್ದರೆ ನಮ್ಮ ನಿರೋಧಕ ಶಕ್ತಿ ದುರ್ಬಲವಾಗಿ ಮತ್ತೆನಾದರೂ ಅಡ್ಡ ಪರಿಣಾಮಕ್ಕೆ ಕಾರಣವಾಗಬಹುದು.

ದ್ರವಾಹಾರ ತೆಗೆದುಕೊಳ್ಳುವುದು:

• ಜ್ವರದ ಕಾರಣ ಡಿ ಹೈಡ್ರೇಶನ್ ಆಗಬಹುದು ಆ ಸಮಯದಲ್ಲಿ ಯಥೇಚ್ಛ ದ್ರವ ಆಹಾರ ಸೇವಿಸಬೇಕು. ಘನ ರೂಪ ಆಹಾರ ವ್ಯರ್ಜ್ಯ, ದ್ರವ ರೂಪದ ಆಹಾರ ಶಕ್ತಿ ಕೊಡುತ್ತದೆ.

• ಸೂಪುಗಳು, ಕಿತ್ತಲೆ, ದ್ರಾಕ್ಷಿ, ಬೀಟ್ರೂಟ್, ಕ್ಯಾರೆಟ್ ರಸದಲ್ಲಿ ವಿಟಮಿನ್ ಖನಿಜಗಳ ಖಜಾನೆಯೇ ಇದೆ.

• ನೀರಿನೊಂದಿಗೆ ಜ್ಯೂಸ್ ಸಕ್ಕರೆ ಸೇರಿಸಿ ಕುಡಿಯುವುದು ಒಳ್ಳೆಯದು. ಜ್ವರವಿದ್ದಾಗ ಸಕ್ಕರೆ ಹೆಚ್ಚಾಗಿ ಉಪಯೋಗಿಸಬಾರದು.

ನೋವು ನಿವಾರಣೆಗೆ

•       Aspirin, Nice, Ibuprofen ಇತ್ಯಾದಿ ಔಷಧಿ ಫ್ಲೂ ನೊಂದಿಗೆ ಬರುವ ತಲೆನೋವು ಮೈಕೈ ನೋವುಗಳನ್ನು ಕಡಿಮೆ ಮಾಡುತ್ತದೆ. ಡಾಕ್ಟರ್ ಸಲಹೆಯ ಮೇರೆಗೆ ಇವುಗಳನ್ನು ತೆಗೆದುಕೊಳ್ಳಬೇಕು.

•       ಫ್ಲೂ ಲಕ್ಷಣಗಳು ಮಧ್ಯಾಹ್ನ ಮತ್ತು ಸಹಾಯಕಾಲ ಜಾಸ್ತಿಯಾಗಿರುತ್ತದೆ ಈ ಸಮಯದಲ್ಲಿ ವೈದ್ಯರ ಸಲಹೆ ಮೇರೆಗೆ ನಾಲ್ಕು ಗಂಟೆಗಳು ಒಮ್ಮೆ ಸೇವಿಸಬೇಕು (ಸ್ವಯಂ ಚಿಕಿತ್ಸೆ ಮಾಡುವುದು ಅಪಾಯಕಾರಿ)

•       ಮಕ್ಕಳಿಗೆ ಆಸ್ಪರಿನ್ ಕೊಡಕೂಡದು

•       ಆಸ್ಪಿರಿನ್ ಅಥವಾ ಆಸ್ಪಿರಿನ್ ಅಂಶವಿರುವ ಔಷಧಿಗಳನ್ನು ಫ್ಲೂ ಪೀಡಿತ 21 ತಿಂಗಳ ಒಳಗಿನ ಮಕ್ಕಳಿಗೆ ಕೊಡಕೂಡದು ಹಾಗೇನಾದರೂ ಸೇವಿಸಿದಲ್ಲಿ Reyes Syndrome ಎನ್ನುವ ನರ ದೌರ್ಬಲ್ಯ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು.

•       ಇಷ್ಟ ಬಂದಂತೆ ಔಷಧಗಳನ್ನು ತೆಗೆದುಕೊಳ್ಳಬಾರದು:

•       ಫ್ಲೂ ಬಂದಾಗ ನೆಗಡಿಯ ಔಷಧಿಗಳನ್ನೋ, ಔಷಧಿ ಅಂಗಡಿಯಾತ ಕೊಡುವ ಔಷಧಿಗಳನ್ನು ಸೇವಿಸಕೂಡದು ಇದರಿಂದ ತಕ್ಷಣಕ್ಕೆ ಶಮನವಾದರೂ ಮುಂದೇ ರೋಗದ ಸ್ಥಿತಿ ಗಂಭೀರವಾಗಬಹುದು. 

ಉಪ್ಪು ನೀರಿನಿಂದ ಮುಕ್ಕಳಿಸುವುದು:

ಫ್ಲೂ ಆದಾಗ ಗಂಟಲಲ್ಲಿ ಹುಣ್ಣಾಗುವ ಸಾಧ್ಯತೆ ಇದೆ. ಅರ್ಧ ಗ್ಲಾಸ್ ನೀರಿಗೆ ಒಂದು ಸ್ಪೂನ್ ಉಪ್ಪು ಹಾಕಿ ಮುಕ್ಕಳಿಸಿದರೆ ಸ್ವಲ್ಪ ಶಮನವಾಗುತ್ತದೆ. ಆದರೆ ನೀರನ್ನು ಸೋಡಿಯಂ ಜಾಸ್ತಿ ಇರುತ್ತದೆ.

ಬಿಸಿ ಶಾಖ ಕೊಡುವುದು:

ಫ್ಲೂ ಆದಾಗ ಮೈ ಕೈ ನೋವು ಆಯಾಸೆ ಇರುವುದರಿಂದ ಉಪಶಮನ ಪಡೆಯಲು ಶಾಕೋಪಚಾರ ಮಾಡಿಕೊಳ್ಳ ಬಹುದು.

ಗಾಳಿಯಾಡುವುದು:

ರೋಗಿ ಇರುವ ಕೋಣೆ ಸದಾ ಗಾಳಿ ಆಡುವಂತಿರಬೇಕು ಅವರಿಗೆ ಚಳಿಯಾಗದಂತೆ ಕುತ್ತಿಗೆಯವರೆಗೂ ಬೆಚ್ಚಗೆ  ಹೊದಿಸಿರಬೇಕು.

ಬೆನ್ನು ನೀವುವುದು:

ಫ್ಲೂ ರೋಗಿಯನ್ನು ಮೃದುವಾಗಿ ಮಸಾಜ್ ಮಾಡುವಂತೆ ಬೆನ್ನನ್ನು ನಿವಬೇಕು ಆತನ ರೋಗನಿರೋಧಕ ಶಕ್ತಿ ಜಾಗೃತವಾಗಿ ಹೋರಾಡಲು ಶಕ್ತಿಯುತವಾಗುತ್ತದೆ.

ಲಘು ಆಹಾರ

ಫ್ಲೂ ಇರುವಾಗ ಜೀರ್ಣಶಕ್ತಿ ಕುಂಠಿತವಾಗುತ್ತದೆ. ಸಾಮಾನ್ಯ ಸ್ಥಿತಿಗೆ ಮರಳುವಾಗ ದ್ರವರೂಪದ ಆಹಾರದಿಂದ ಅರೆ ಘನ ರೂಪದ ಪದಾರ್ಥಗಳನ್ನು ಕೊಡಬೇಕು ಆಗ ರೋಗಿಗೆ ಬ್ರೆಡ್, ಹಾಲು, ಮೃದುವಾದ ಅನ್ನ, ತಿಳಿಸಾರು ಕೊಡುವುದು ಸೂಕ್ತ. ಇದನ್ನು ಡಾಕ್ಟರ್ ಸಲಹೆ ಮೇರೆಗೆ ಕೊಡಬೇಕು.