ಮನೆ ಆರೋಗ್ಯ ಥೈರಾಯ್ಡ್ ಸಮಸ್ಯೆ ಇರುವವರು ಸೇವಿಸಬೇಕಾದ ಆಹಾರಗಳು

ಥೈರಾಯ್ಡ್ ಸಮಸ್ಯೆ ಇರುವವರು ಸೇವಿಸಬೇಕಾದ ಆಹಾರಗಳು

0

ಥೈರಾಯ್ಡ್ ಸಮಸ್ಯೆಯ ಲಕ್ಷಣಗಳು ಯಾವುದು, ಇದರ ನಿಯಂತ್ರಣ, ಈ ವೇಳೆ ಸೇವಿಸಬೇಕಾದ ಆಹಾರ ವಿವರ ಇಲ್ಲಿದೆ …

ಪದೇ ಪದೇ ಆಯಾಸವಾಗುವುದು, ಕೂದಲು ಉದುರುವುದು, ಅನಿಯಮಿತ ಮುಟ್ಟು ಸಮಸ್ಯೆ, ಆಗಾಗ ನಡುಕ ಉಂಟಾಗುವುದು, ಇಲ್ಲಾಂದರೆ ಬೆವರುವಿಕೆ ಜಾಸ್ತಿ ಇರುವುದು, ಅನಿರೀಕ್ಷಿತವಾಗಿ ತೂಕ ಏರಿಕೆ ಆಗುವುದು, ಸಣ್ಣ ಸಣ್ಣ ವಿಷ್ಯಕ್ಕೂ ಕೋಪ ಬರುವುದು, ಇವೆಲ್ಲಾ ಥೈರಾಯ್ಡ್ ಗ್ರಂಥಿಯ ಸಾಮಾನ್ಯ ಲಕ್ಷಣಗಳು, ಹೀಗಾಗಿ ಒಂದು ವೇಳೆ ಇಂತಹ ಸಮಸ್ಯೆಗಳು ನಿಮ್ಮಲ್ಲಿಯೂ ಇದ್ದರೆ, ಕೂಡಲೇ ವೈದ್ಯರ ಸಲಹೆಗಳನ್ನು ಪಡೆದು ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು.

ದೇಹದ ಜೀವ ರಾಸಾಯನಿಕ ಪ್ರಕ್ರಿಯೆಯನ್ನು ಥೈರಾಯ್ಡ್ ಗ್ರಂಥಿಗಳು ಸರಿಯಾಗಿ ನಿರ್ವಹಿಸ ಬೇಕಾದರೆ, ಇದಕ್ಕೆ ಅಯೋಡಿನ್‌ ಅಂಶ ಇರುವ ಆಹಾರ ಪದಾರ್ಥಗಳ ಅವಶ್ಯಕತೆ ಹೆಚ್ಚಿರುತ್ತದೆ ಹೀಗಾಗಿ ಅಯೋಡಿನ್ ಪ್ರಮಾಣ ಹೆಚ್ಚಿರುವ ಆಹಾರಗಳ ಸೇವನೆ ಜಾಸ್ತಿ ಮಾಡಬೇಕು. ಡೈರಿ ಉತ್ಪನ್ನಗಳು, ಮೊಸರು, ಸ್ಟ್ರಾಬೆರಿ ಹಣ್ಣುಗಳು, ಆಲೂಗಡ್ಡೆ ಇಂತಹ ಆಹಾರಗಳನ್ನು ಹೆಚ್ಚಾಗಿ ಸೇವಿಸಬಹುದು.

ಸಾಮಾನ್ಯವಾಗಿ ದೇಹದಲ್ಲಿ ಸೆಲೆನಿಯಂ ಎಂಬ ಖನಿಜಾಂಶದ ಕೊರತೆ ಉಂಟಾದಾಗ, ಥೈರಾಯ್ಡ್ ಗ್ರಂಥಿಯ ಕ್ಷಮತೆಯಲ್ಲಿ ಏರುಪೇರು ಕಂಡು ಬರುತ್ತದೆ. ಹೀಗಾಗಿ ಸೆಲೆನಿಯಂ ಅಂಶ ಹೇರಳವಾಗಿ ಸಿಗುವ ಬಿಳಿ ಅಣಬೆಗಳನ್ನು ಮಿತವಾಗಿ ಸೇವನೆ ಮಾಡುವ ಅಭ್ಯಾಸ ಮಾಡಿ ಕೊಂಡರೆ, ಒಳ್ಳೆಯದು.

ಇನ್ನು ಬೆಳ್ಳುಳ್ಳಿಯಲ್ಲೂ ಕೂಡ ಸೆಲೆನಿಯಂ ಅಂಶ ಹೆಚ್ಚಾಗಿ ಕಂಡುಬರುವುದರಿಂದ, ಇದನ್ನು ಕೂಡ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು. ಇದರಿಂದ ಆರೋಗ್ಯ ವೃದ್ದಿ ಆಗುವುದರ ಜೊತೆಗೇ ಥೈರಾಯ್ಡ್ ಗ್ರಂಥಿಯ ಕ್ಷಮತೆ ಕೂಡ ಹೆಚ್ಚಾಗುತ್ತದೆ.

ಹಸಿರೆಲೆ ಸೊಪ್ಪುಗಳು ಆರೋಗ್ಯಕ್ಕೆ ಒಳ್ಳೆಯದು ಎಂಬುದು ನಮಗೆಲ್ಲಾ ಗೊತ್ತೇ ಇದೆ. ಅದರಲ್ಲೂ ಪಾಲಕ್ ಮತ್ತು ಬಸಲೆ ಸೊಪ್ಪಿನಂತಹ ದಪ್ಪ ಹಾಗೂ ಗಾಢ ಹಸಿರು ಎಲೆಗಳಲ್ಲಿ, ಸಾಕಷ್ಟು ಪ್ರಮಾಣದಲ್ಲಿ ವಿಟಮಿ ನ್ನುಗಳು, ಪ್ರೋಟೀನುಗಳು, ಖನಿಜಾಂಶಗಳು ಹಾಗೂ ಮುಖ್ಯ ವಾಗಿ ಒಮೆಗಾ 3 ಕೊಬ್ಬಿನ ಆಮ್ಲಗಳು ಯಥೇಚ್ಛವಾಗಿ ಸಿಗುವುದರಿಂದ ದೇಹದ ಆರೋಗ್ಯವನ್ನು ವೃದ್ದಿಸುವ ಜೊತೆಗೆ ಥೈರಾಯ್ಡ್ ಗ್ರಂಥಿಯ ಕ್ಷಮತೆಯನ್ನೂ ಹೆಚ್ಚಿಸಲು ನೆರವಾಗುತ್ತದೆ.

ಒಂದು ವೇಳೆ ನೀವು ನಾನ್ ವೆಜ್ ತಿನ್ನುವವರಾಗಿದ್ದರೆ, ಮಿತವಾಗಿ ಮೀನು ತಿನ್ನುವ ಅಭ್ಯಾಸ ಇಟ್ಟು ಕೊಂಡರೆ, ಸಮಸ್ಯೆ ನಿವಾರಣೆ ಮಾಡಬಹುದಾಗಿದೆ. ಸಾಮಾನ್ಯವಾಗಿ ಮೀನಿನಲ್ಲಿ ಅಧಿಕ ಪ್ರಮಾಣದಲ್ಲಿ ಒಮೆಗಾ-3 ಕೊಬ್ಬಿನಾಮ್ಲ ಕಂಡುಬರುವುದರಿಂದ, ಈ ಸಮಸ್ಯೆಯನ್ನು ನಿವಾರಿಸುವಲ್ಲಿ ಸಹಾಯ ವಾಗುತ್ತದೆ. ಸಾಲ್ಮನ್, ಟ್ಯೂನ, ಅಥವಾ ಸಾರ್ಡೀನ್ ನಂತಹ ಮೀನುಗಳು ಸೇವನೆ ಮಾಡಿದರೆ ಒಳ್ಳೆಯದು.

ತೆಂಗಿನ ಎಣ್ಣೆಯಲ್ಲಿರುವ ಕೊಬ್ಬಿ ನಾಂಶವು ಥೈರಾಯ್ಡ್ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ದೈನಂದಿನ ಅಡುಗೆಗೆ ಮಿತವಾಗಿ ತೆಂಗಿನ ಎಣ್ಣೆ ಬಳಸುವ ಅಭ್ಯಾಸ ಮಾಡಿಕೊಳ್ಳಿ. ಇನ್ನು ತಜ್ಞರೇ ಹೇಳುವ ಪ್ರಕಾರ ತಜ್ಞರ ಪ್ರಕಾರ ತೆಂಗಿನ ಎಣ್ಣೆಯಲ್ಲಿ ಇರುವಂತಹ ಕೊಬ್ಬಿನಾಂಶವು ಥೈರಾಯ್ಡ್ ಗ್ರಂಥಿಯ ಕ್ಷಮತೆಯನ್ನೂ ಹೆಚ್ಚಿಸಲು ನೆರವಾಗುತ್ತದೆ.