ಮನೆ ಶಿಕ್ಷಣ ರಂಗಾಯಣದಲ್ಲಿ ರಂಗ ಶಿಕ್ಷಣ ತರಬೇತಿ ಕೋರ್ಸ್‌ಗೆ ಅರ್ಜಿ ಆಹ್ವಾನ

ರಂಗಾಯಣದಲ್ಲಿ ರಂಗ ಶಿಕ್ಷಣ ತರಬೇತಿ ಕೋರ್ಸ್‌ಗೆ ಅರ್ಜಿ ಆಹ್ವಾನ

0

ಮೈಸೂರು (Mysuru)- ರಂಗಾಯಣದಲ್ಲಿ 2022-23ನೇ ಸಾಲಿನ 10 ತಿಂಗಳ ರಂಗ ಶಿಕ್ಷಣ ಡಿಪ್ಲೊಮ ಕೋರ್ಸ್‍ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ರಂಗಶಿಕ್ಷಣ ಕೋರ್ಸ್‌ನಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಜೂನ್‌ 17 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ರಂಗತರಬೇತಿ ಕೋರ್ಸ್‍ಗೆ ಸೇರಬಯಸುವ ವಿದ್ಯಾರ್ಥಿಗಳು ಕನಿಷ್ಠ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆ ಹೊಂದಿರಬೇಕು. ಅಪ್ಲಿಕೇಶನ್‌ ಸಲ್ಲಿಸಲು 18 ರಿಂದ 28 ವಯೋಮಿತಿ ಹೊಂದಿರಬೇಕು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರತಿ ತಿಂಗಳು ರೂ.3,000 ವಿದ್ಯಾರ್ಥಿ ವೇತನ ಜೊತೆಗೆ ಮಾಸಿಕ ರೂ.2,000 ಊಟೋಪಚಾರದ ಭತ್ಯೆ ಪಾವತಿಸಲಾಗುವುದು.



ಆಸಕ್ತ ಅಭ್ಯರ್ಥಿಗಳು www.rangayana.org ವೆಬ್‌ಸೈಟ್‌ನಲ್ಲಿ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು ಅಥವಾ ರಂಗಾಯಣ ಕಚೇರಿಯಲ್ಲಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.

ಸಾಮಾನ್ಯ ವರ್ಗ ರೂ.200 (ಅರ್ಜಿ ಶುಲ್ಕ ರೂ.200 ಮತ್ತು ರಂಗಕೈಪಿಡಿ ಅಂಚೆ ವೆಚ್ಚ ರೂ.30ಸೇರಿ ಒಟ್ಟು ರೂ.230) ಎಸ್‌ಸಿ / ಎಸ್‌ಟಿ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.150 ಡಿ.ಡಿ.ಯನ್ನು ಉಪ ನಿರ್ದೇಶಕರು, ರಂಗಾಯಣ, ಕಲಾಮಂದಿರ ಆವರಣ, ವಿನೋಬಾ ರಸ್ತೆ, ಮೈಸೂರು-570005 ಇವರ ಹೆಸರಿನಲ್ಲಿ ಪಡೆದು ಪಾವತಿಸಬೇಕು. ರಂಗಾಯಣದ ವಿಳಾಸಕ್ಕೆ ಜೂನ್‌ 17 ರ ಸಂಜೆ 5-30ರೊಳಗೆ ತಲುಪುವಂತೆ ಅಂಚೆಯ ಮೂಲಕ ಕಳುಹಿಸಬಹುದು ಅಥವಾ ಅಭ್ಯರ್ಥಿ ನೇರವಾಗಿ ಕಚೇರಿಗೆ ತಲುಪಿಸಬಹುದು.

ಸಂದರ್ಶನದ ದಿನಾಂಕವನ್ನು ಅಭ್ಯರ್ಥಿಗಳಿಗೆ ಪತ್ರದ ಮೂಲಕ ತಿಳಿಸಲಾಗುವುದು. ಗರಿಷ್ಟ 15 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶವಿರುತ್ತದೆ. ಇತರೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821-2512639, 9448938661 ಗೆ ಸಂಪರ್ಕಿಸಬಹುದು.

ಕರ್ನಾಟಕ ಸರ್ಕಾರದಿಂದ ಮೈಸೂರಿನಲ್ಲಿ ಸ್ಥಾಪಿತವಾದ ರಂಗಾಯಣ ರೆಪರ್ಟರಿಯು ಕಳೆದ 13 ವರ್ಷಗಳ ಹಿಂದೆ ಸ್ಥಾಪಿಸಿದ ಭಾರತೀಯ ರಂಗವಿದ್ಯಾಲಯ ಪೂರ್ಣ ಪ್ರಮಾಣದ ರಂಗ ಶಿಕ್ಷಣವನ್ನು ನೀಡುವ ಸಂಸ್ಥೆಯಾಗಿರುತ್ತದೆ.

ಹಿಂದಿನ ಲೇಖನವೈದ್ಯರನ್ನು ಹನಿಟ್ರ್ಯಾಪ್‌ ನಲ್ಲಿ ಸಿಲುಕಿಸಿ 50 ಲಕ್ಷ ರೂ. ವಂಚಿಸಿದ್ದ ಮೂವರ ಬಂಧನ
ಮುಂದಿನ ಲೇಖನಥೈರಾಯ್ಡ್ ಸಮಸ್ಯೆ ಇರುವವರು ಸೇವಿಸಬೇಕಾದ ಆಹಾರಗಳು