ಮನೆ ಸಾಹಿತ್ಯ ಹೃದಯದಿಂದ ಕ್ಷಮಿಸಿ

ಹೃದಯದಿಂದ ಕ್ಷಮಿಸಿ

0

ಕಾಲೇಜು ಶಿಕ್ಷಣ ಕೈಬಿಟ್ಟ ಕೆಲ ಹುಡುಗರು ಗುಂಪೊಂದು ಸುಲಭವಾಗಿ ಹಣಗಳಿಸುವ ಮಾರ್ಗವನ್ನು ಹುಡುಕುತ್ತಿದ್ದರು.  ಸಣ್ಣಪುಟ್ಟ ಕಳ್ಳತನದೊಂದಿಗೆ ಕೈಚಳಕ ಆರಂಭಿಸಿದ ಅವರು ಕಾಲಕ್ರಮೇಣ ದೊಡ್ಡದರೋಡೆಕೋರರಾಗಿ ಬೆಳೆದರು.

ಒಮ್ಮೆ ಅವರು ಆಶ್ರಮವೊಂದರಲ್ಲಿ ಕನ್ನಗಳ್ಳತನ ಮಾಡಿ ಎಲ್ಲವನ್ನೂ ದೋಚಿಕೊಂಡು ಇನ್ನೇನು ಪರಾರಿಯಾಗಬೇಕೆನ್ನುವಷ್ಟರಲ್ಲಿ ಮಠದ ಧರ್ಮ ಗುರು ಅವರ ದಾರಿಯಲ್ಲಿ ಪ್ರತ್ಯಕ್ಷರಾದರು. ಆ ದುಷ್ಕರ್ಮಿಗಳು ತಾವು ಸಿಕ್ಕಿಬಿದ್ದಂದು ಪೇಚಾಡುತ್ತಾ ಆ ಮುದುಕ ತಮ್ಮನ್ನು ಇನ್ನೂ ಪೊಲೀಸರ ವಶಕೊಪ್ಪಿಸುವನೆಂದು ಚಿಂತಿಸ ತೊಡಗಿದರು. ಕೈಯೆಲ್ಲೊಂದು ಚೀಲ ಹಿಡಿದಿದ್ದ ಆವೃದ್ದ ಅವರಿಗೆ ಹೀಗೆ ಹೇಳಿದರು.

ಪ್ರಶ್ನೆಗಳು :-

1.ಕಳ್ಳರ ಗುಂಪಿಗೆ ಆ ವೃದ್ದ ಏನು ಹೇಳಿದರು ?

2. ಈ ಕಥೆಯ ಪರಿಣಾಮವೇನು ?

ಉತ್ತರಗಳು :-

1.”ಈ ಚೀಲ ನೀವೇಕೆ ಇಲ್ಲೇ ಬಿಟ್ಟಿರಿ ?ನಿಮಗೆ ಉಪಯೋಗಕ್ಕೆ ಬರುವುದಾದರೆ ಇದನ್ನು ಕೊಂಡೊಯ್ಯಿರಿ.” ಆ ಸನ್ಯಾಸಿ    ಪ್ರಾಮಾಣಿಕವಾಗಿಯೇ ಹೇಳುತ್ತಿರುವುದನ್ನು ಅರಿತರು. ತಾವು ಮಾಡಿದ ಪಾಪ ಕೃತ್ಯಕ್ಕೆ ಮರುಗಿ ಅವರೆಲ್ಲರೂ ಮಠದ ಶಿಷ್ಯರಾದರು

2. ಕ್ಷಮೆ ಎಲ್ಲರನ್ನು ಗೆಲ್ಲುತ್ತದೆ ಕ್ಷಮ ಗುಣವನ್ನು ನಾವು ಸತತವಾಗಿ ರೂಡಿಸಿಕೊಳ್ಳಬೇಕು. ಕ್ಷಮೆ ಸಾಧು-ಸಂತರ ಸದ್ಗುಣವಾಗಿರುತ್ತದೆ.

ಹಿಂದಿನ ಲೇಖನರಾಗಿಗುಡ್ಡದಲ್ಲಿ ನಡೆದ ಘಟನೆ ಪೂರ್ವ ನಿಯೋಜಿತ ಕೃತ್ಯ: ನಳಿನ್ ಕುಮಾರ್ ಕಟೀಲ್
ಮುಂದಿನ ಲೇಖನಅರಣ್ಯ ಒತ್ತುವರಿ ತೆರವಿಗೆ ಕ್ರಮ ವಹಿಸಲು ಈಶ್ವರ ಖಂಡ್ರೆ ಸೂಚನೆ