ಮನೆ ರಾಜಕೀಯ ರಾಗಿಗುಡ್ಡದಲ್ಲಿ ನಡೆದ ಘಟನೆ ಪೂರ್ವ ನಿಯೋಜಿತ ಕೃತ್ಯ: ನಳಿನ್ ಕುಮಾರ್ ಕಟೀಲ್

ರಾಗಿಗುಡ್ಡದಲ್ಲಿ ನಡೆದ ಘಟನೆ ಪೂರ್ವ ನಿಯೋಜಿತ ಕೃತ್ಯ: ನಳಿನ್ ಕುಮಾರ್ ಕಟೀಲ್

0

ಶಿವಮೊಗ್ಗ: ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದಿರುವುದು ಪೂರ್ವ ನಿಯೋಜಿತ ಕೃತ್ಯ. ಸದರಿ ಪ್ರಕರಣವನ್ನು ನ್ಯಾಯಾಂಗ ತನಿಖೆ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ ಪ್ರದೇಶದಲ್ಲಿ ಎರಡು ಗಂಟೆಗಳ ಕಾಲ ಮನೆಗಳ ಭೇಟಿ ನೀಡಿ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಪಡೆದಿದ್ದೇನೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ರಾಜ್ಯದಲ್ಲಿ ನಾಲ್ಕೈದು ಘಟನೆಯಾಗಿದೆ ಎಂದರು.

ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಶಾಂತಿ ರೀತಿಯಿಂದ ನಡೆದಿದೆ. ಗಣೇಶೋತ್ಸವ ಮುಗಿದ ಮೇಲೆ ಈದ್ ಮಿಲಾದ್ ಆಚರಣೆ ವೇಳೆ ಕೇಲವು ಕಟೌಟ್ ಗಳನ್ನು ಹಾಕಿದ್ದಾರೆ. ಟಿಪ್ಪು ಪೋಟೋ, ಕತ್ತಿಯ ಪೊಟೋ, ಔರಂಗಜೇಬನ ಪೋಟೋ ಹಾಕಿದ್ದಾರೆ. ಸಾಬ್ರ ಸಾಮ್ರಾಜ್ಯ ಎಂದು ಹಾಕಿದ್ದಾರೆ. ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಈ ಕಟೌಟ್ ಹಾಕಲಾಗಿದೆ. ಸರ್ಕಾರದ ಹಾಗೂ ಪೊಲೀಸ್ ಇಲಾಖೆಯ ವೈಪಲ್ಯವಿದು. ಪೊಲೀಸ್ ಇಲಾಖೆ ಸಂಪೂರ್ಣ ವೈಫಲ್ಯ ಕಂಡಿದೆ. ಎಸ್ಪಿಯ ಮೇಲೆಯೇ ಕಲ್ಲು ತೂರಾಟವಾಗಿದೆ, ಎಸ್ಪಿಗೆ ರಕ್ಷಣೆ ಇಲ್ಲವಾದರೆ ಸಾರ್ವಜನಿಕರ ಕಥೆ ಏನು ಎಂದು ಪ್ರಶ್ನಿಸಿದರು.

ಆ ಪ್ರದೇಶದಲ್ಲಿ ಹೋದಾಗ ಮೂರು ವಿಷಯಗಳು ಸ್ಪಷ್ಟವಾಗಿದೆ. ಟಾರ್ಗೆಟ್ ಮಾಡಿ ಹಲ್ಲೆ ಮಾಡಲಾಗಿದೆ. ಗಣೇಶ ಹಬ್ಬದಲ್ಲಿ ಭಾಗಿಯಾದವರ ಮೇಲೆ ಹಲ್ಲೆಯಾಗಿದೆ, ಆ ಪ್ರದೇಶ ಮಹಿಳೆಯರನ್ನು ಟಾರ್ಗೆಟ್ ಮಾಡಲಾಗಿದೆ. ಈ ಘಟನೆಗೆ ಮೊದಲು ಮುಸ್ಲಿಂ ಮಹಿಳೆಯರಿಂದ ರಸ್ತೆ ಅಡ್ಡಗಟ್ಟಲಾಗಿದೆ. ಇದೊಂದು ಪೂರ್ವ ನಿಯೋಜಿತ ಕೃತ್ಯ. ಮುಸ್ಲಿಂ ಮನೆಯ ಒಂದೇ ಮನೆಯ ಮೇಲೆ ಹಲ್ಲೆ ಆಗಿಲ್ಲ. ಹಿಂದೂಗಳ ಮನೆಗಳನ್ನು ಟಾರ್ಗೆಟ್ ಮಾಡಿ ದಾಳಿ ಮಾಡಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ ಅವರನ್ನು ಮಾತಾಡಿಸಿದ್ದೇವೆ. ರಕ್ಷಣೆ ನೀಡಿದವರ ಮೇಲೆಯೇ ಪ್ರಕರಣ ದಾಖಲಿಸುವ ಕೆಲಸ ಆಗಿದೆ ಎಂದರು.

ದಾರಿಯಲ್ಲಿ ಹೋಗುತ್ತಿದ್ದ ಕ್ರೈಸ್ತ ವ್ಯಕ್ತಿಯ ಮೇಲೆಯು ಕೇಸ್ ಹಾಕಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಬಂದು ಹೋದ ಮೇಲೆ ಹಿಂದೂಗಳ ಮೇಲೆ ಕೇಸ್ ಹಾಕಲಾಗಿದೆ. ಕಾಂಗ್ರೆಸ್ ಒತ್ತಡದಿಂದ ಪ್ರಕರಣ ದಾಖಲಿಸಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅನೇಕ ಕಡೆಗಳಲ್ಲಿ ಪಾಕಿಸ್ತಾನದ ಧ್ವಜ ಹಿಡಿದು ಘೋಷಣೆ ಕೂಗಿದವರ ಮೇಲೆ ಪ್ರಕರಣ ದಾಖಲಿಸಿಲ್ಲ. ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣ, ಹುಬ್ಬಳ್ಳಿ ಪ್ರಕರಣಗಳಲ್ಲಿ ಬಂಧಿತರನ್ನು ಬಿಡುಗಡೆ ಮಾಡಲು ಅವರ ನಾಯಕರೇ ಪತ್ರ ಬರೆಯುತ್ತಾರೆ. ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಆತಂಕವಾದಿಗಳು ತರಬೇತಿ ಪಡೆದಿದ್ದರು. ಆದರೆ ಇದೇ ಆತಂಕವಾದಿಗಳ ಪರವಾಗಿ ಡಿಸಿಎಂ ಡಿಕೆಶಿ ಒಂದು ಹೇಳಿಕೆ ನೀಡಿದ್ದರು. ಹಾಗಾಗಿ ಅವರಿಗೆ ಧೈರ್ಯ ಬಂದಿದೆ. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರವಾಗಿದೆ. ಪೊಲೀಸ್ ಇಲಾಖೆಯವರ ಕೈ ಕಟ್ಟಿ ಹಾಕುವ ಕೆಲಸ ಈ ಸರ್ಕಾರ ಮಾಡಿದೆ. ಮತ ಬ್ಯಾಂಕಿನ ಆಸೆಗಾಗಿ ಅಲ್ಪಸಂಖ್ಯಾತರ ಒಲೈಕೆ ಮಾಡುತ್ತಿದೆ. ಹಿಂದೂಗಳ ಪರವಾಗಿ ನಾವಿದ್ದೇವೆ ಎಂದು ನಳಿನ್ ಕಟೀಲ್ ಹೇಳಿದರು.

ಕಾಂಗ್ರೆಸ್ ಸರ್ಕಾರ ಮೊದಲು ಬಂದಾಗ ಟಿಪ್ಪು ಜಯಂತಿ ನಡೆದಿತ್ತು. ಈಗ ಔರಂಗಜೇಬ್ ಬಂದಿದ್ದಾನೆ. ಈ ಸರ್ಕಾರ ಕೇವಲ ಹಿಂದೂ ವಿರೋಧಿ ಮಾತ್ರವಲ್ಲ, ಮಹಿಳಾ ವಿರೋಧಿ ಸರ್ಕಾರವು ಹೌದು. ಒಂದೇ ಒಂದು ಮುಸ್ಲಿಂ ಮನೆಗಳ ಮೇಲೆ ದಾಳಿ ನಡೆದಿಲ್ಲ. ಕಾಂಗ್ರೆಸ್ ಪಕ್ಷವೇ ಭಯೋತ್ಪಾದಕ ಸರ್ಕಾರ. ಹಾದಿ ತಪ್ಪಿಸುವ ಕೆಲಸವನ್ನು ಸರ್ಕಾರ ಮಾಡುತ್ತದೆ. ನಾಳೆ ನಮ್ಮ ಮೇಲೂ ಕೇಸ್ ದಾಖಲಿಸಬಹುದು. ಎಸ್ಡಿಪಿಐ ಪಿತಾಮಹ ಕಾಂಗ್ರೆಸ್. ಈ ರಾಜ್ಯದಲ್ಲಿ ಆತಂಕ ಸೃಷ್ಟಿಯಾದರೆ ಕಾಂಗ್ರೆಸ್ ಸರ್ಕಾರವೇ ಕಾರಣ. ಮನೆ ಹಾನಿಯಾದವರಿಗೆ ಸರ್ಕಾರ ಪರಿಹಾರ ಕೊಡಬೇಕು ಎಂದರು.

ಹಿಂದಿನ ಲೇಖನಲೈಂಗಿಕ ಕಾರ್ಯಕರ್ತೆ ಹತ್ಯೆ: ಮಂಡ್ಯದ ವ್ಯಕ್ತಿಗೆ ಜೀವಾವಧಿ ಶಿಕ್ಷೆ
ಮುಂದಿನ ಲೇಖನಮಳೆ ಕೊರತೆ: 4800 ಕೋಟಿ ರೂ. ಪರಿಹಾರ ಕೇಳಿದ್ದೇವೆ ಎಂದ ಕಂದಾಯ ಸಚಿವ ಕೃಷ್ಣಭೈರೇಗೌಡ