ಬೆಂಗಳೂರು: ಪ್ರತಾಪ್ ಸಿಂಹ ಯಾವ ಪ್ರತಿಭಟನೆ ಮಾಡುವುದು ಬೇಕಿಲ್ಲ. ಎಲ್ಲ ಬೇಡಿಕೆ ಈಡೇರಿಸುತ್ತೇವೆ ಎಂದು ನೂತನ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ.
ಗ್ಯಾರಂಟಿಗಳ ಜಾರಿ ಬಗ್ಗೆ ಜೂನ್ 1ರವರೆಗೆ ಕಾಯುತ್ತೇವೆ. ಷರತ್ತುಗಳು ಇಲ್ಲದೆ ಗ್ಯಾರಂಟಿಗಳನ್ನು ಜಾರಿಮಾಡಬೇಕು. ಒಂದು ವೇಳೆ ಷರತ್ತು ವಿಧಿಸಿದರೆ ಜೂನ್ 1ರಿಂದ ಹೋರಾಟ ಮಾಡುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದರು.
ಈ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ನೂತನ ಸಚಿವ ರಾಮಲಿಂಗಾರೆಡ್ಡಿ, ಮೈಸೂರು ಪ್ರತಾಪ್ ಸಿಂಹ ಯಾವ ಪ್ರತಿಭಟನೆ ಮಾಡುವುದು ಬೇಕಿಲ್ಲ. ನಮ್ಮ ಸರ್ಕಾರ ಬಂದು ಒಂದು ವಾರ ಆಗಿದೆ. ನಾವು ಎಲ್ಲ ಬೇಡಿಕೆ ಈಡೇರಿಕೆ ಮಾಡ್ತೀವಿ. ಕಳೆದ ಬಿಜೆಪಿ ಸರ್ಕಾರ 600 ಭರವಸೆ ನೀಡಿತ್ತು ಇದರಲ್ಲಿ 60 ಅಷ್ಟೇ ಈಡೇರಿಸಿದೆ. ಪ್ರಧಾನಿ ಪ್ರತಿಯೊಬ್ಬರಿಗೂ 15 ಲಕ್ಷ ನೀಡುವುದಾಗಿ ಹೇಳಿದ್ರು. ಎಲ್ಲರ ಖಾತೆಗೂ ಹಣ ಹಾಕಿದ್ರಾ ಅಂತಾ ರಾಮಲಿಂಗಾರೆಡ್ಡಿ ಪ್ರಶ್ನೆ ಮಾಡಿದ್ದಾರೆ.
ಬಹುತೇಕ ಇಂದು ಸಂಪುಟ ವಿಸ್ತರಣೆ ಆಗುತ್ತೆ. 99% ನಾಳೆ ಸಚಿವರು ಪ್ರಮಾಣವಚನ ಸ್ವೀಕಾರ ಮಾಡಬಹುದು ಎಂದರು.
ಇಂದಿರಾ ಕ್ಯಾಂಟೀನ್ ಆರಂಭ ಮಾಡಿದ್ದೆ ಕಾಂಗ್ರೆಸ್ ಸರ್ಕಾರ. ಪ್ರತಿ ವಿಧಾನಸಭಾ ಕ್ಷೇತ್ರ ಹಾಗೂ ಆಸ್ಪತ್ರೆಯಲ್ಲಿ ಕ್ಯಾಂಟೀನ್ ಆರಂಭ ಮಾಡಲಾಗಿದೆ. ಬಿಜೆಪಿ ಸರ್ಕಾರ ಬಂದ ನಂತರ ಹಣ ನೀಡದೇ ಮುಚ್ಚಿ ಹೋಗಿತ್ತು. ಬೆಂಗಳೂರಿಗೆ ಬೇರೆ ಬೇರೆ ಊರಿಂದ ಜನರು ಬರ್ತಾರೆ. ಬೆಂಗಳೂರಿಗರಿಗೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಆಗಲಿ ಅಂತಾ ಐದು ರೂಪಾಯಿಗೆ ತಿಂಡಿ, ಹತ್ತು ರೂಪಾಯಿಗೆ ಊಟ ನೀಡಲಾಗುತ್ತಿದೆ. ನೀರಿನ ಸಮಸ್ಯೆ ಇತ್ತು ಈಗ ಅದನ್ನ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸರ್ಕಾರ ಮುಂದೆ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಅಧಿಕಾರಿಯನ್ನ ನೇಮಕ ಮಾಡಿದ್ರೆ ಒಳ್ಳೆಯದು. ಸ್ವಚ್ಚತೆ ಕಾಪಾಡಲು, ಊಟ ನಿರ್ವಹಣೆ, ಟೋಕನ್ನ ಎಲ್ಲವನ್ನೂ ನಿರ್ವಹಣೆಗೆ ಅಧಿಕಾರಿಯ ನೇಮಕವಾದ್ರೆ ಉತ್ತಮ. ಕ್ವಾಲಿಟಿ, ಕ್ವಾಂಟಿಟಿ ಚೆನ್ನಾಗಿ ಮಾಡುತ್ತೇವೆ. ಇಂದಿರಾ ಕ್ಯಾಂಟೀನ್ ಹೆಸರು ಬಿಜೆಪಿ ಅವರಿಗೆ ಸಹಿಸಿಕೊಳ್ಳಲು ಆಗ್ತಿಲ್ಲ. ಇಂದಿರಾಗಾಂಧಿ ಹೆಸರು ಅಂದ್ರೆ ಅವರಿಗೆ ಯಾಕಿಷ್ಟು ಬೇಸರ ಗೊತ್ತಿಲ್ಲ ಎಂದರು.
ಮನುಷ್ಯನಿಗೆ ಹಣ ಮುಖ್ಯನಾ?…. ಇಲ್ಲ ಗುಣ ಮುಖ್ಯಾನಾ?……
ನಾಡ ದೇವತೆ…. ಶ್ರೀ ಚಾಮುಂಡೇಶ್ವರಿ…🙏🏻
ನಮ್ಮ ರಾಜ್ಯದ ಭವಿಷ್ಯ ಚಿಂತಾ ಜನಕವಾಗಿದೆ ಪುಗಸಟ್ಟೆ ಕೊಡುವ ಅವಾಂತರ
ನಿಮ್ಹಾನ್ಸ್ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಅಪ್ಪ ಬರಿಮಾತಲ್ಲ ಊಹೆಗೂ ನಿಲುಕದ ಆಕಾಶ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.