ಮನೆ ಮನರಂಜನೆ “ನಾಲ್ಕನೇ ಆಯಾಮ’ ಸಿನಿಮಾ ವಿಮರ್ಶೆ

“ನಾಲ್ಕನೇ ಆಯಾಮ’ ಸಿನಿಮಾ ವಿಮರ್ಶೆ

0

ಬಾಲ್ಯದಲ್ಲಿ ನಡೆದ ಘಟನೆಯಿಂದ ಮಾನಸಿಕವಾಗಿ ತೊಂದರೆಗೀಡಾಗಿರುವ ನಾಯಕಿ. ಆಕೆಯನ್ನು ಆ ಕಾಯಿಲೆಯಿಂದ ಆಕೆಗೆ ಗೊತ್ತಿಲ್ಲದಂತೆ ಹೊರ ತರಲು ಮುಂದಾಗುವ ನಾಯಕ. ಅದಕ್ಕಾಗಿ ಒಂದು ಉಪಾಯ ಮಾಡುವ ನಾಯಕ. ಇದಕ್ಕೆ ಸಾಥ್‌ ನೀಡುವ ನಾಯಕನ ಫ್ರೆಂಡ್ಸ್‌… ಇದು ಈ ವಾರ ತೆರೆಗೆ ಬಂದಿರುವ “ನಾಲ್ಕನೇ ಆಯಾಮ’ ಸಿನಿಮಾದ ಒನ್‌ ಲೈನ್‌.

Join Our Whatsapp Group

ನಾಲ್ಕನೇ ಆಯಾಮ ಒಂದು ಯೂತ್‌ಫ‌ುಲ್‌ ಕಥೆ. ಹೆಚ್ಚು ಪಾತ್ರಗಳಿಲ್ಲದೇ ಐದಾರು ಪಾತ್ರಗಳ ಸುತ್ತವೇ ಇಡೀ ಸಿನಿಮಾ ಸಾಗುತ್ತದೆ. ಆರಂಭದಲ್ಲಿ ಲವ್‌ಸ್ಟೋರಿಯಾಗಿ ಶುರುವಾಗುವ ಈ ಚಿತ್ರ ನೋಡ ನೋಡುತ್ತಿದ್ದಂತೆ ಹಾರರ್‌ನತ್ತ ಮಗ್ಗುಲು ಬದಲಿಸುತ್ತದೆ. ಅಲ್ಲಿಂದ ಅಸಲಿ ಆಟ ಶುರು.

ಕಥೆಗೆ ಟ್ವಿಸ್ಟ್‌ ಕೊಡುವ ಹಾರರ್‌ ಸನ್ನಿವೇಶದಲ್ಲಿ ಪ್ರೇಕ್ಷಕರಿಗೊಂದು ಟ್ವಿಸ್ಟ್‌ ನೀಡಿದ್ದಾರೆ ನಿರ್ದೇಶಕರು. ಹಾರರ್‌ ಸಿನಿಮಾದಲ್ಲಿ ಭಯಬೀಳಿಸಲು ಬಳಸುವ ಎಲ್ಲಾ ತಂತ್ರಗಳನ್ನು ಬಳಸಿಕೊಂಡೇ ಈ ಸಿನಿಮಾದ ಕಥೆ ಸಾಗುತ್ತದೆ. ಆದರೆ, ಚಿತ್ರದ ಕ್ಲೈಮ್ಯಾಕ್ಸ್‌ ಮಾತ್ರ ಭಿನ್ನವಾಗಿದೆ.

ನಿರ್ದೇಶಕರಿಗೆ ಸಿನಿಮಾದ ಬಗ್ಗೆ ಒಂದು ಸ್ಪಷ್ಟತೆ ಇದೆ. ಹಾಗಾಗಿಯೇ ಸಿನಿಮಾ ಸರಾಗವಾಗಿ ಸಾಗುತ್ತದೆ. ಹೀರೋ ಬಿಲ್ಡಪ್‌, ವಿಲನ್‌ಗಳ ಅಬ್ಬರ, ಪಂಚಿಂಗ್‌ ಡೈಲಾಗ್‌ಗಳ ಶಿಳ್ಳೆಯಿಂದ ಈ ಸಿನಿಮಾ ಮುಕ್ತ. ಕಥೆಯನ್ನು ಟ್ರ್ಯಾಕ್‌ಗೆ ತರಲು ಹೆಚ್ಚು ಸಮಯ ತೆಗೆದುಕೊಳ್ಳದಿರುವುದರಿಂದ ಸಿನಿಮಾ ಅನವಶ್ಯಕ ದೃಶ್ಯಗಳಿಂದ ಮುಕ್ತವಾಗಿದೆ.

ಗೌತಮ್‌ ಈ ಚಿತ್ರದಲ್ಲಿ ನಾಯಕನ ಜೊತೆ ನಿರ್ದೇಶನದ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ಎರಡನ್ನೂ ತೂಗಿಸಿಕೊಂಡು ಹೋಗಿದ್ದಾರೆ. ಉಳಿದಂತೆ ರಚನಾ ಇಂದರ್‌, ಅಮಿತ್‌ ಗೌಡ ಯಶಸ್ವಿನಿ ಎಂ, ಬಲ ರಾಜವಾಡಿ, ವಿನ್ಸೆಂಟ್‌, ಮಂಜು ಸ್ವಾಮಿ, ಚಂದ್ರಕಲಾ ಮೋಹನ್‌ ನಟಿಸಿದ್ದಾರೆ.

ಹಿಂದಿನ ಲೇಖನಶ್ರೀಕಂಠೇಶ್ವರನ ಭಕ್ತರಿಗೆ ಮತದಾನ ಅರಿವು
ಮುಂದಿನ ಲೇಖನಮಳೆ ನೀರು ಗಿಡ ಮರಗಳ ಬೇರಿಗೆ ಹರಿಯಲು ಅನುವು ಮಾಡಿಕೊಡುವ “ಫ್ರೀ ದ ಟ್ರೀ” ಅಭಿಯಾನಕ್ಕೆ ಚಾಲನೆ