ಮನೆ ಕಾನೂನು ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಯುವತಿಗೆ ವಂಚನೆ: ಎಫ್ ಐ ಆರ್ ದಾಖಲು

ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಯುವತಿಗೆ ವಂಚನೆ: ಎಫ್ ಐ ಆರ್ ದಾಖಲು

0

ಬೆಂಗಳೂರು: ಯುವತಿಗೆ ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Join Our Whatsapp Group

ತಮಿಳು ನಟ ರಾಘವ್ ಲಾರೆನ್ಸ್ ಅವರ 25ನೇ ಸಿನಿಮಾ ಹಂಟರ್​ನಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಯುವತಿಯನ್ನು ವಂಚಿಸಲಾಗಿದೆ. ಈ ಘಟನೆ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಕನ್ನಡದ ನಂದಿತಾ ಕೆ ಶೆಟ್ಟಿ ಎಂಬ ಯುವತಿ ಸಿನಿಮಾದಲ್ಲಿ ನಟಿಸಲು ಅವಕಾಶಕ್ಕಾಗಿ ಕಾಯುತ್ತಿದ್ದರು. ಇದೇ ವೇಳೆ ಇನ್ಸ್ಟಾಗ್ರಾಮ್​ ನಲ್ಲಿ ಮೂವಿ ಆ್ಯಡ್ ಲಿಂಕ್ ಮೂಲಕ ಸುರೇಶ್ ಕುಮಾರ್ ಎಂಬಾತನ ಪರಿಚಯವಾಗಿದೆ. ತಾನು ಹಂಟರ್ ಮೂವಿ ಕಾಸ್ಟಿಂಗ್ ಡೈರೆಕ್ಟರ್ ಎಂದು ವಂಚಕ ಸುರೇಶ್ ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ಹಂತ ಹಂತವಾಗಿ 1.71 ಲಕ್ಷ ಪಡೆದಿದ್ದಾನೆ.

ಆರ್ಟಿಸ್ಟ್ ಕಾರ್ಡ್, ಅಗ್ರಿಮೆಂಟ್ ಸ್ಟಾಂಪ್ ಡ್ಯೂಟಿ, ವಿದೇಶದಲ್ಲಿ ಶೂಟಿಂಗ್ ಇರುತ್ತೆ ಪಾಸ್ ಪೋರ್ಟ್, ಟಿಕೆಟ್ ಚಾರ್ಜ್ ಅಂತ ಹಣ ಪಡೆದು ವಂಚಿಸಿದ್ದಾನೆ. ವಂಚಕನ ಮಾತು ನಂಬಿ ಹಂತ ಹಂತವಾಗಿ ಆನ್ ಲೈನ್ ಮೂಲಕ ಹಣ ಪಾವತಿಸಿದ್ದ ನಂದಿತಾ, ಅನುಮಾನ ಬಂದು ಕ್ರಾಸ್ ಚೆಕ್ ಮಾಡಿದಾಗ ಅಸಲಿ ವಿಚಾರ ಬಯಲಾಗಿದೆ.

ಸದ್ಯ ಈಗ ಈ ಬಗ್ಗೆ ಕೋಣನಕುಂಟೆ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದು ಎಫ್ ಐ ಆರ್ ದಾಖಲಾಗಿದೆ.