ಅಳೆತ್ತರದ ಗಟ್ಟಿ ಕಾಂಡದ ಕ್ಷುಪ್ತ. ತೇಗದ ಎಲೆಯಂತೆ ದೊರೆಗಾದ ಮತ್ತು ಅಂಚು ದಂತುರವಾದ ಎಲೆಗಳಿರುತ್ತದೆ. ಪ್ರತಿ ಗಿಣ್ಣಿನಿಂದ ಮೂರು ಎಲೆ. ಕೆಳಭಾಗದ ಎಲೆಗಳು ಗಾತ್ರದಲ್ಲಿ ದೊಡ್ಡದಾಗಿ ತುದಿಯಲ್ಲಿ ಕಿರಿಯವು, ಮಂಜರಿಯಲ್ಲಿ ಕೂಡ ಅಂತಹುದೇ ರಚನೆ. ಕೆಳಗಿನ ಭಾಗದಲ್ಲಿ ಬಲಿತು ಅರಳುತ್ತಾ ಕ್ರಮೇಣ ರಥದೋಪಾದಿ ಮೇಲ್ತುದಿಯ ಹೂಗಳು ಅರಳುತ್ತದೆ. ಇದರ ಹೂಗಳು ಬಿಳಿ ನೀಲಿ ಬಣ್ಣದಾಗಿರುತ್ತದೆ. ಬಲಿತ ಪುಷ್ಪ ಪಾತ್ರೆಯಲ್ಲಿ ಕಾಲಿಂಚು ವ್ಯಾಸದ ಹಸಿರು ಕಾಯಿ. ಕ್ರಮೇಣ ನೀಲಿ ಬಣ್ಣ ತಾಳುತ್ತದೆ. ಬಳಕೆಯಾಗುವ ಭಾಗ ಸಸ್ಯ ಬೇರೆ ಎಲೆ, ಗಿಡದ ಅಂಟು ಸಹ ಬಳಕೆಯಾಗುತ್ತದೆ. ಬೀಜ ಕೂಡ ಬಳಸುತ್ತಾರೆ.
ಒಟ್ಟಿನಲ್ಲಿ ಘಟ್ಟ ಸಾಲಿನಿಂದ ಹಿಡಿದು ಬಯಲು ಸೀಮೆ, ಹುಲ್ಲುಗಾವಲು ಪರ್ಯಾಂತ ಬೆಳೆಯುವ ಭಾರಂಗಿಯ ಬಳಕೆ ಬಹು ರೂಪದ್ದು. ಬ್ರಾಹ್ಮಣ ಯಸ್ಟಿಕಾ, ಘಂಜೀ, ಭೃಗುಬವಾ, ಬ್ರಾಹ್ಮಮೀ, ಅಂಗಾರವರಲ್ಲಿ, ಖರಶಾಕ ಎಂಬ ಮುಂತಾದ ಸಂಸ್ಕೃತ ಹೆಸರುಗಳಿಂದ ಈ ಸಸ್ಯ ಪ್ರಭೇದ ವೇದಕಾಲದಿಂದಲೂ ಔಷಧಿ ಸಸ್ಯವಾಗಿ ಬಳಕೆಯಾಗುತ್ತದೆ.
ಭಾರಂಗಿ ಬಳಸಿ ವಿಶೇಷ ರೀತಿಯ ಮಧ್ಯ ತಯಾರಿಸಿ ಅದನ್ನು ಗಂಡಮಾಲೆ ಅರ್ಬುದ, ಅಂಡವೃದ್ಧಿ, ಶಸ್ತ್ರಗಳಿಂದ ಗಾಯಕ್ಕೆ ಹಚ್ಚುವ ಉಲ್ಲೇಖ ಸುಶ್ರುತ ಸಂಹಿತೆಯಲ್ಲಿದೆ. ಇದರ ಬೀಜಗಳಿಂದ ಹೊಸ ಸಸಿ ಕೃಷಿ ಮಾಡಬಹುದು.
ಔಷಧೀಯ ಗುಣಗಳು :-
* ರೋಗನಿರೋಧಕ ಶಕ್ತಿ ವರ್ಧಿಸಲು ಮುಪ್ಪು ಮುಂದೂಡಲು ಭಾರಂಗಿ ಬೀಜದ ಪುಡಿಯನ್ನು ತುಪ್ಪದಲ್ಲಿ ಹುರಿದು ಸೇವಿಸುವುದರಿಂದ ಲಾಭ.
* ಕೆಲವೊಂದು ಪ್ರಾಂತ್ಯದಲ್ಲಿ ಭಾರಂಗಿ ಎಲೆಯನ್ನು ರೋಗದಲ್ಲಿ ಬಳಸುವ ವಾಡಿಕೆಯಿಂದ ಪ್ರಯೋಜನ ಪಡೆಯುತ್ತಾರೆ.
* ಅರೆದ ಎಲೆ ಮತ್ತು ಚಿಗುರುಗಳ ಲೇಪನದಿಂದ ವಿಷಸರ್ಪಸುತ್ತು ಹಾಗೂ ಘೆಂಫಿಗಸ್ ಎಂಬ ಚರ್ಮದ ಗಾದರಿ ಗುಳ್ಳೆಯ ಉರಿ ನೋವು ಕಡಿಮೆಯಾಗುತ್ತದೆ.
* ಶುಂಠಿ ಪುಡಿ ಮತ್ತು ಬೇರಿನ ಪುಡಿ ಕೊಡಿಸಿ ಜೇನು, ಬಿಸಿ ನೀರಿನ ಸೇವನೆಯಿಂದ ಕಫ ,ಕೆಮ್ಮು, ಉಬ್ಬಸದ ತೀವ್ರತೆಗೆ ಕಡಿವಾಣ, ನಿತ್ಯ ಸೇವನೆಯಿಂದ ತೊಂದರೆ ಪರಿಹಾರವಾಗುತ್ತದೆ.
* ಕುರ, ಉರಿಯೂತದ ನೋವು ಪರಿಹಾರಕ್ಕೆ ಬಲಿತ ಎಲೆಗೆ ತುಪ್ಪ ಅಥವಾ ಹರಳೆಣ್ಣೆ ಬಳಿದು ಬಿಸಿ ಬಿಸಿಯಾಗಿ ಶಾಖ ಕೊಡುವ ಪೊಲ್ಟಿಸು ಕಟ್ಟುವ ವಿಧಾನವಿದೆ.
* ಎಳೆಯ ಮಕ್ಕಳಲ್ಲಿ ಕೆಮ್ಮು, ಕಫ, ಗುರು-ಗುರು ಸಪ್ಪಳವಿದ್ದಾಗ ಬೇರನ್ನ ಜೇನು ಜೊತೆ ತೆಗೆದು ಕಾಲು ಚಮಚಯಿಂದ ಅರೆದು ಚಮಚ ಪ್ರಮಾಣದಲ್ಲಿ ವಯಸ್ಸು ಮತ್ತು ತೂಕದನೂ ಸಾರ ಖಾಲಿ ಹೊಟ್ಟೆಯಲ್ಲಿ ನೆಕ್ಕಿಸಬಹುದು.
* ಭಾರಂಗಿಯ ಬೇರು ಪುಡಿ ಕೆಮ್ಮು, ದಮ್ಮಿನಲ್ಲಿ ಜೇನು ಸಂಗಡ ಸೇವನೆಯಿಂದ ಲಾಭವಿದೆ. ಅರ್ಧ ಚಮಚ ಚೂರ್ಣ ಸೇವನೆ ಸಾಕು.