ಮನೆ ಅಪರಾಧ ಮೈಸೂರು: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆಯ ಬಂಧನ, ಇಬ್ಬರ ರಕ್ಷಣೆ

ಮೈಸೂರು: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆಯ ಬಂಧನ, ಇಬ್ಬರ ರಕ್ಷಣೆ

0

ಮೈಸೂರು: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆಯನ್ನು  ಮೈಸೂರು ಪೊಲೀಸರು ಬಂಧಿಸಿ, ಇಬ್ಬರು ಮಹಿಳೆಯರ ರಕ್ಷಣೆ ಮಾಡಿರುವ ಘಟನೆ ಮೈಸೂರಿನ ವಿಜಯನಗರದಲ್ಲಿ ನಡೆದಿದೆ.

ಸಂಘಟಿತ ಅಪರಾಧ ಮತ್ತು ರೌಡಿ ಪ್ರತಿಬಂಧಕ ದಳ ಮತ್ತು ವಿಜಯನಗರ ಪೊಲೀಸರು ಮಾಹಿತಿ ಮೇರೆಗೆ ವಿಜಯನಗರ 4ನೇ ಹಂತ 2ನೇ ಫೇಸ್, ಮನೆ ನಂ 2429  ಮೇಲೆ ದಾಳಿ ಮಾಡಿ, ಮಹಿಳೆಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಒಬ್ಬ ಮಹಿಳೆಯನ್ನು ಬಂಧಿಸಿದ್ದಾರೆ. ಇದೇ ವೇಳೆ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿದ್ದು, ವೇಶ್ಯಾವಾಟಿಕೆಗೆ ಬಳಕೆಯಾಗಿದ್ದ 31,500/- ರೂ ನಗದು ಹಣ, ಒಂದು ಮೊಬೈಲ್ ಫೋನ್, ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

Advertisement
Google search engine

ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರು ನಗರದ ಡಿಸಿಪಿ ಗೀತ ಪ್ರಸನ್ನ ಹಾಗೂ ಸಿಸಿಬಿ ಘಟಕದ ಎಸಿಪಿ ಸಿ.ಕೆ ಅಶ್ವಥನಾರಾಯಣ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಪಿ.ಐ ಎ.ಮಲ್ಲೇಶ್, ವಿಜಯನಗರ ಪೊಲೀಸ್ ಠಾಣೆಯ ಪಿ.ಐ ಬಾಲಕೃಷ್ಣ, ಸಿಬ್ಬಂದಿಗಳಾದ ರಾಧೇಶ್, ಜೋಸೆಫ್, ಮಮತಾ, ಕೆ.ಜಿ ಶ್ರೀನಿವಾಸ್ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಹಿಂದಿನ ಲೇಖನಶ್ರೀಲಂಕಾ ಸರಣಿಗೂ ಮುನ್ನವೇ ಭಾರತ ತಂಡದಿಂದ ಇಬ್ಬರು ಸ್ಟಾರ್ ಆಟಗಾರರು ಔಟ್
ಮುಂದಿನ ಲೇಖನಸಿಸಿಎಸ್‌ಎಸ್‌ ಪ್ರಶಸ್ತಿಯ 7 ವಿಭಾಗಕ್ಕೆ ‘ಗರುಡ ಗಮನ ವೃಷಭ ವಾಹನ’ಚಿತ್ರ ನಾಮನಿರ್ದೇಶನ