ಮನೆ ರಾಜ್ಯ ಕಬ್ಬಿನ ಬಾಕಿ ಹಣ ಬಡ್ಡಿ ಸಮೇತ ರೈತರಿಗೆ ಪಾವತಿಸಲು ಕ್ರಮ ಕೈಗೊಳ್ಳಿ: ಕುರುಬೂರು ಶಾಂತಕುಮಾರ ಒತ್ತಾಯ

ಕಬ್ಬಿನ ಬಾಕಿ ಹಣ ಬಡ್ಡಿ ಸಮೇತ ರೈತರಿಗೆ ಪಾವತಿಸಲು ಕ್ರಮ ಕೈಗೊಳ್ಳಿ: ಕುರುಬೂರು ಶಾಂತಕುಮಾರ ಒತ್ತಾಯ

0

ಬೆಳಗಾವಿ: ಪ್ರಸಕ್ತ ಸಾಲಿನ ಕಬ್ಬಿನ ಎಫ್ ಆರ್ ಪಿ ದರ 10.25 ಇಳುವರಿಗೆ 3400 ನ್ಯಾಯ ಸಮ್ಮತವಲ್ಲ. ಬೆಳಗಾವಿಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ ಆರೋಪಿಸಿದ್ದಾರೆ.

Join Our Whatsapp Group

ಕಬ್ಬಿನ ಬಾಕಿ ಬಡ್ಡಿ ಹಣ ಸಮೇತ ರೈತರಿಗೆ ಕೂಡಲೇ ಪಾವತಿಸಲು ಕ್ರಮಕೈಗೊಳ್ಳಬೇಕು ಎಂದು  ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

ಬರಗಾಲದಿಂದ ಕಬ್ಬಿನ ಇಳುವರಿ ಶೇಕಡ 30ರಷ್ಟು ಕಡಿಮೆಯಾಗಿರುವಾಗಲೇ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಾಗಿ ಕಬ್ಬಿನ ಎಪ್ಆರ್‌ಪಿ ಬೆಲೆ ನಿಗದಿ ಮಾಡಿರುವುದು ನ್ಯಾಯ ಸಮ್ಮತವಲ್ಲ. ಸಕ್ಕರೆ ಕಾರ್ಖಾನೆಗಳು ಇಳುವರಿ ಕಡಿಮೆ ತೋರಿಸುವ ಕಾರಣ ಹೆಚ್ಚಿನ ಬೆಲೆ ಸಿಗಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರ ರೈತರ ಗಾಯದ ಮೇಲೆ ತುಪ್ಪ ಸವರಿ ಬರೆ ಎಳೆದಿದೆ.

ರಾಜ್ಯ ಸರ್ಕಾರ ರೈತರಿಗೆ ನೀಡುವ ಸವಲತ್ತುಗಳನ್ನು ಆಪ್ ಗಳ ಮೂಲಕ ವಿತರಿಸುತ್ತಿದೆ. ಆದರೆ 25000 ಕೋಟಿ ಹಣಕಾಸಿನ ವೈವಾಟು ನಡೆಸುವ ಸಕ್ಕರೆ ಕಾರ್ಖಾನೆಗಳ.ವ್ಯವಹಾರ ಆಪ್ ಮೂಲಕ ಏಕೆ ಮಾಡುತ್ತಿಲ್ಲ ಎಂದು ಪ್ರಶ್ನೆ.

ಸಕ್ಕರೆ ಇಳುವರಿ ಸಂದೇಶ ನೀಡುವ ಆಪ್ ನ್ನು ಸಿದ್ದಗೊಳಿಸ ಲಾಗಿದ್ದರೂ. ರಾಜ್ಯ ಸರ್ಕಾರ ಯಾಕೆ ಜಾರಿ ಮಾಡಿಲ್ಲ. ಸಕ್ಕರೆ ಕಾರ್ಖಾನೆಗಳ ಒತ್ತಡಕ್ಕೆ ಮಣಿದು ರೈತರಿಗೆ ವ್ಯವಸ್ಥಿತ ವಂಚನೆ ನಡೆಸಲು ಸಹಕಾರ ನೀಡುತ್ತಿದೆ ಎಂದು ಆರೋಪ.

ಕಳೆದ ಎಂಟು ತಿಂಗಳಿಂದ ಸಕ್ಕರೆ ಕಾರ್ಖಾನೆಗಳು ಸುಮಾರು 700 ಕೋಟಿ ರೂ ಕಬ್ಬಿನ ಹಣ ರೈತರಿಗೆ ಪಾವತಿಸಿಲ್ಲ. ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಇಂಥ ಕಾರ್ಖಾನೆಗಳನ್ನು ಸರ್ಕಾರ ಮುಟ್ಟುಗೂಲು ಹಾಕಿಕೊಳ್ಳಲಿ.

ಕೇಂದ್ರ ಸರ್ಕಾರ ಬರ. ಮಳೆಹಾನಿ. ಅತಿವೃಷ್ಟಿ ಹಾನಿ ಮಳೆ ವಿಪತ್ತು ನಷ್ಟ ಪರಿಹಾರದ. ಎನ್ ಡಿಆರ್‌ಎಫ್ ಮಾನದಂಡ ತಿದ್ದುಪಡಿ ಮಾಡಿ ಬೆಳೆ ನಷ್ಟದ ಸಂಪೂರ್ಣ ಹಣ ನೀಡಬೇಕು. ಇಲ್ಲದಿದ್ದರೆ ಬರ. ಅತಿವೃಷ್ಟಿ ಮಳೆ ಹಾನಿ. ಒಳಗಾದ ರೈತರ ಬೆಳೆ ಸಾಲ ಸಂಪೂರ್ಣ ಮನ್ನ ಮಾಡುವ ನೀತಿ ಜಾರಿಗೆ ತರಬೇಕು ಎಂದು ಒತ್ತಾಯ ಮಾಡಿದ್ದಾರೆ.

ಹಿಂದಿನ ಲೇಖನತಲೆಮಾರಿನ ಅಂತರ
ಮುಂದಿನ ಲೇಖನನೀಟ್​ ಪರೀಕ್ಷೆ ಅಕ್ರಮ ಪ್ರಕರಣ, ಕೌನ್ಸೆಲಿಂಗ್ ಮುಂದುವರೆಯುತ್ತೆ: ಸುಪ್ರೀಂಕೋರ್ಟ್