ಮನೆ ರಾಜಕೀಯ ಚುನಾವಣೆ ‌ಹೊಸ್ತಿಲಲ್ಲಿ ಅತಿಥಿ‌ ಉಪನ್ಯಾಸಕರ ಮೂಗಿಗೆ ತುಪ್ಪ: ಡಾ.ಬಿ.ಜೆ. ವಿಜಯ್‌ಕುಮಾರ್

ಚುನಾವಣೆ ‌ಹೊಸ್ತಿಲಲ್ಲಿ ಅತಿಥಿ‌ ಉಪನ್ಯಾಸಕರ ಮೂಗಿಗೆ ತುಪ್ಪ: ಡಾ.ಬಿ.ಜೆ. ವಿಜಯ್‌ಕುಮಾರ್

0

ಮೈಸೂರು(Mysuru): ದಕ್ಷಿಣ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಜೂನ್ 13ರಂದು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಎಂದು ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್ ಆರೋಪಿಸಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಚೆಗೆ ಮೈಸೂರಿನಲ್ಲಿ ಅತಿಥಿ ಉಪನ್ಯಾಸಕರ ಸಭೆ ನಡೆಸಿದ ಸಚಿವರು ಪಕ್ಷದ ಅಭ್ಯರ್ಥಿ ಗೆಲ್ಲಿಸಿದರೆ ಕೆಲಸ ಕಾಯಂ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ‌ ಮೂಲಕ ಮಾದರಿ ನೀತಿಸಂಹಿತೆ ಉಲ್ಲಂಘಿಸಿದ್ದಾರೆ. ಚುನಾವಣಾ ಅಧಿಕಾರಿ ಇದನ್ನು ಗಂಭೀರವಾಗಿ ಪರಿಗಣಿಸಿ, ಸಚಿವರ ವಿರುದ್ಧ ನೀತಿ ಸಂಹಿತೆ‌ ಉಲ್ಲಂಘನೆ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಅತಿಥಿ ಉಪನ್ಯಾಸಕರು ಹಲವು ದಶಕಗಳಿಂದ ಅಭದ್ರತೆಯಲ್ಲಿದ್ದಾರೆ. ಹಲವರು ವಯೋಮಿತಿ ಮೀರಿದವರಾಗಿದ್ದಾರೆ. ಸಂಕಷ್ಟದಲ್ಲಿರುವ ಅವರನ್ನು ಚುನಾವಣೆ ವೇಳೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆಸೆ ಹುಟ್ಟಿಸುವ ಕೆಲಸವನ್ನು ಸಚಿವರು ಮಾಡಿದ್ದಾರೆ. ಇದು ಖಂಡನೀಯ. ಸಚಿವರಿಗೆ ಅಷ್ಟು ಕಾಳಜಿ ಇದ್ದರೆ ಚುನಾವಣೆಗೆ ಮುನ್ನವೇ ಅತಿಥಿ ಉಪನ್ಯಾಸಕರ ಕೆಲಸ ಕಾಯಂ ಮಾಡಲಿಲ್ಲವೇಕೆ? ಎಂದು ಕೇಳಿದರು.

ಚುನಾವಣಾಧಿಕಾರಿಯು ಪ್ರಕರಣ ದಾಖಲಿಸದೆ ಇದ್ದಲ್ಲಿ ಪಕ್ಷದಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹಿಂದಿನ ಲೇಖನಬಿಜೆಪಿ, ಆರ್‌ ಎಸ್‌ ಎಸ್‌ ಅವರಿಂದ ಅಸ್ಪೃಶ್ಯತೆ ಮುಂದುವರಿಕೆ: ಶಾಂತರಾಜು
ಮುಂದಿನ ಲೇಖನರಾಜ್ಯಸಭೆ ಚುನಾವಣೆ: ಬಿಜೆಪಿಯ 75, ಕಾಂಗ್ರೆಸ್‌ನ 23, ಜೆಡಿಎಸ್‌ನ 7 ಶಾಸಕರಿಂದ ಮತ ಚಲಾವಣೆ