ಇದೊಂದು ಗ್ರೀಕ್ ದೇಶದ ಮಾತು.ಏಕಿಲಸ್ ಎಂಬ ರಾಜ ಅನೇಕ ಮಂದಿ ರಾಜರನ್ನು ಸೋಲಿಸಿ ಸತತವಾಗಿ ಗೆಲುವುಗಳನ್ನು ಸಾಧಿಸಿದನಂತೆ.ಅದೊಂದು ದಿನ ತಾಯಿಯ ಹತ್ತಿರಕ್ಕೆ ಕರೆದು “ಮಗು, ನಿನ್ನನ್ನು ಯಾರೂ ಸೋಲಿಸಲಾರರು. ಕತ್ತಿ, ಖಡ್ಗಗಳು, ಬಿಲ್ಲುಬಾಣಗಳಿಂದಲೂ ಕೂಡಾ ನಿನ್ನನ್ನು ಯಾರು ಏನೂ ಮಾಡಲಾಗುವುದಿಲ್ಲ.ಆದರೆ, ಒಂದು ವಿಷಯವನ್ನು ನೆನಪಿನಲ್ಲಿ ಟ್ಟುಕೊ. ನಿನ್ನ ಬಾಲ್ಯದಲ್ಲಿ ಮೃತ್ಯುಂಜಯನನ್ನಾಗಿ ಮಾಡಬೇಕೆಂದು ಸ್ಪಿಕ್ಸ್ ಎಂಬ ನದಿಯಲ್ಲಿ ಮುಳುಗಿಸಿದೆ. ಆದರೆ ನಿನ್ನ ಕಾಲಿನ ತೊಡೆಯನ್ನು ನನ್ನ ಕೈಯಿಂದ ಹಿಡಿದು ಕೊಂಡಿದ್ದರಿಂದ ಅದು ಒದ್ದೆಯಾಗಲಿಲ್ಲ. ಆದ್ದರಿಂದ ನಿನ್ನ ತೊಡೆಯನ್ನು ಹೊರತುಪಡಿಸಿ ದಂತೆ ಮಿಕ್ಕೆಲ್ಲವೂ ಶಕ್ತಿಯವಾದವು. ಆದ್ದರಿಂದ ಯಾರೂ ತೊಡೆಗೆ ಬಾಣ ಹೊಡೆಯದ ಹಾಗೆ ಎಚ್ಚರಿಕೆ ವಹಿಸು” ಎಂದು ತಿಳಿಸಿದಳು.
ಅಲ್ಲಿಯತನಕ ಧೈರ್ಯವಾಗಿದ್ದ ಎಕಿಲಸ್, ಯುದ್ಧಗಳಲ್ಲಿ ತನ್ನ ತೊಡೆ ಕುರಿತಂತೆಯೇ ಅತಿಯಾಗಿ ಭಯಪಡುತ್ತಿದ್ದ. ಅದೇ ಮಾತನ್ನು ಅಂತರಂಗದ ಗೆಳೆಯರೊಂದಿಗೂ ಹೇಳಿಕೊಳ್ಳುತ್ತಿದ್ದನಂತೆ ಅದನ್ನು ತಿಳಿದುಕೊಂಡ ಒಬ್ಬ ವೀರನು ಅದೇ ಜಾಗಕ್ಕೆ ಒಂದು ಬಾಣವನ್ನು ಹೂಡಿ ಕೊಂದುಬಿಟ್ಟನಂತೆ.ಅಲ್ಲಿಯ ತನಕ ಎಲ್ಲವೂ ಚೆನ್ನಾಗಿದ್ದು ಒಂದು ಸಣ್ಣ ಸಮಸ್ಯೆ ಕುರಿತು ಅತಿಯಾಗಿ ಭಯಪಡುವವರನ್ನು ಗ್ರೀಕ್ ದೇಶದಲ್ಲಿ “ಎಕಿಲಸ್ ಹೀಲ್ ಪೇರೆಂಟ್ಸ್” ಎನ್ನುತ್ತಾರೆ ನಮ್ಮ ಜನರಲ್ಲಿ ಬಹಳ ಬುದ್ಧಿವಂತರು ಹಾಗೂ ಮೇಧಾವಿಗಳಿದ್ದೂ ಕೂಡಾ ಇಂಗ್ಲೀಷ್ ಅಥವಾ ಹಿಂದಿ ಭಾಷೆ ಕುರಿತು ಅಥವಾ ಬೇರಾವುದೋ ಒಂದು ಸಣ್ಣ ಪ್ರವರ್ತನಾ ಲೋಪ ಅಥವಾ ಅಂಗವಿಕಲತೆ ಕುರಿತು ಯೋಚಿಸುವವರಲ್ಲಾ ಇದೇ ವರ್ಗ ಸೇರುತ್ತಾರೆ.
ತಮ್ಮ ಮಕ್ಕಳನ್ನು ಮೊಮ್ಮಕ್ಕಳನ್ನು ನೋಡಿಕೊಳ್ಳಲು ಭಾರತದಿಂದ ಅಮೆರಿಕ ಹಾಗೂ ಇತರ ದೇಶಗಳಿಗೆ ಹೋಗುತ್ತಿರುವ ಅದೆಷ್ಟೋ ಮಂದಿ ಅಜ್ಜಿಯಂದಿರು, ಆಂಗ್ಲ ಭಾಷೆಯ ಅರಿವಿಲ್ಲದೆ ಅಮ್ಮ, ಅಜ್ಜಿಯರುಕೇವಲ ಆರೇ ತಿಂಗಳಲ್ಲಿ ಅಲ್ಲಿನ ದೊರೆ ಸಾನಿಗಳಿಗಿಂತ ಚೆನ್ನಾಗಿ ಇಂಗ್ಲೀಷ್ ಮಾತನಾಡುತ್ತಾರೆ. ಇದಕ್ಕೆ ಕಾರಣವೆಂದರೆ ಅಲ್ಲಿ ಅದು ಅನಿವಾರ್ಯವಾದ್ದರಿಂದ. ಅದೇ ರೀತಿಯಾಗಿ ಇಲ್ಲಿನ ಇಂಗ್ಲಿಷ್ ಬಂದಿದ್ದರು ಆಂಗ್ಲ ಪತ್ರಿಕೆಗಳನ್ನು ಓದುತ್ತಾ ಡಿಕ್ಷನರಿ ಓದುತ್ತಾ.ಪ್ರತಿದಿನ ಎರಡು-ಮೂರು ಹೊಸ ಪದಗಳನ್ನು ಕಲಿತುಕೊಳ್ಳುತ್ತ, ಟಿ.ವಿ.ಯಲ್ಲಿ ಇಂಗ್ಲಿಷ್ ಚಾನೆಲ್ ಗಳನ್ನು ವೀಕ್ಷಿಸುತ್ತಾ, ಸಿನಿಮಾ ನೋಡುವ ಅಭ್ಯಾಸ ಇರುವವರು ಸಿನಿಮಾಗಳನ್ನು ನೋಡುತ್ತಾ ಒಬ್ಬ ಆತ್ಮೀಯ ಗೆಳೆಯನೊಂದಿಗೆ ಇಂಗ್ಲೀಷಿನಲ್ಲಿ ಮಾತನಾಡುತ್ತಾ,, ಒಬ್ಬರ ತಪ್ಪುಗಳನ್ನು ಮತ್ತೊಬ್ಬರು ತಿಳಿದುಕೊಳ್ಳುತ್ತಿದ್ದಾರೆ ಆರು ತಿಂಗಳಲ್ಲಿ ಯಾವುದೇ ಭಾಷೆಯಾದರೂ ಬಂದೇ ಬರುತ್ತದೆ.
ಕೋತಿಗಳಿಂದ ಪ್ರಯೋಗ :
ಟಾಂಜಾನಿಯಾ ದೇಶದಲ್ಲಿನ ಕಿಲಿ ಮಂಜಾರೋ ಎಂಬ ಪರ್ವತ ಪ್ರಾಂತ್ಯದಲ್ಲಿ ವಿಜ್ಞಾನಿಗಳು ಕೋತಿಗಳೊಂದಿಗೆ ಒಂದು ಪ್ರಯೋಗ ಮಾಡಿದರು. ಆ ಕೋತಿಗಳನ್ನು ಒಂದು ಬೋನಿನಲ್ಲಿಟ್ಟು ಎರಡು ಲಿವರ್ ಗಳನ್ನು ಏರ್ಪಾಡು ಮಾಡಿದರು. ಅವುಗಳ ಪೈಕಿ ಒಂದನ್ನು ಎಳೆದರೆ ಆಹಾರ ಅಂದರೆ ಒಂದು ಬಾಳೆಹಣ್ಣು ಬೀಳುತ್ತದೆ. ಎರಡನೆಯದನ್ನು ಎಳೆದರೆ ಶಾಕ್ ಹೊಡೆಯುತ್ತದೆ.ಮೊದಲಿಗೆ ಒಂದು ಕೋತಿ, ಮೊದಲನೆಯದನ್ನು ಎಳೆಯಿತು. ಒಂದು ಬಾಳೆಹಣ್ಣು ಬಿತ್ತು. ನಂತರ ಎರಡನೇ ಕೋತಿ ಎರಡನೇ ಲಿವರ್ ಎಳೆಯಲು ಹೋಗಿ ಭಯಂಕರವಾಗಿ ಕಿರುಚುತ್ತಾ ಬಿತ್ತು ಅಷ್ಟೇ. ಉಳಿದೆಲ್ಲಾ ಕೋತಿಗಳು ಅದರ ಸುತ್ತಲೂ ಸೇರಿ ಸೇವೆಗಳನ್ನು ಮಾಡುತ್ತಾ ಸುಮ್ಮನಾದವು. ಮತ್ತೆ ಆ ಎರಡು ಲಿವರ್ ಗಳ ಸಹವಾಸಕ್ಕೆ ಹೋಗಲಿಲ್ಲ. ಮೂರು ದಿನಗಳ ಕಾಲ ಅವು ಹಸಿವಿನಿಂದ ಕಂಗಾಲಾದವು. ನಂತರ ವಿಜ್ಞಾನಿಗಳು ಅವುಗಳನ್ನು ಬಿಡುಗಡೆ ಮಾಡಿದರು.
ಮುದ್ದು ಮಾತುಗಳು :
ಮಕ್ಕಳನ್ನು ಮುದ್ದು ಮಾಡುವಾಗ ಮಾತನಾಡುವ ಮಾತುಗಳನ್ನು ಕೂಡಾ ತಾಯಿ-ತಂದೆಯರು ಅಜ್ಜಿ, ತಾತಂದಿರು ಸೆನ್ಸಾರ್ ಮಾಡಿಕೊಳ್ಳಬೇಕು. “ಬುಜ್ಜಿಮುಂಡೆ! ರೌಡಿ ನನ್ಮಗನೇ!ತುಂಟ ಭಡವಾ ರಾಕ್ಷಸ ನನ್ನ ಮಗನೇ!” ಗಳಂತಹ ಮಾತುಗಳನ್ನ ಹಾಡಬಾರದು.
ಇತ್ತೀಚೆಗೆ ನನ್ನ ಬಳಿಗೆ ಕೌನ್ಸಿಲಿಂಗ್ ಗೆ ಬಂದ ಒಬ್ಬ ಮಹಿಳೆ ತನ್ನ ಮೂರು ವರ್ಷದ ಮಗ ತನ್ನನ್ನು “ಬುಜ್ಜಿಮುಂಡೆ!ಗಜ್ಜಿ ಮುಂಡೆ ”ಎಂದು ಕರೆಯುತ್ತಿದ್ದಾನೆಂದು,ತನ್ನ ಅತ್ತೆ ಮಾವಂದಿರು ನನ್ನನ್ನು ಆ ರೀತಿಯಾಗಿ ಕರೆಯುವುದರಿಂದಲೇ ಅವನೂ ಆ ರೀತಿಯಾಗಿ ತಯಾರಾಗಿದ್ದಾನೆಂದು, ಅದನ್ನು ನಮ್ಮ ಹಿರಿಯರಿಗೆ ಹೇಳಲಾಗುವುದಿಲ್ಲವೆಂದು, ಸಾಲದಕ್ಕೆ ಅವನು ಆ ರೀತಿಯಾಗಿ ಅಂದಾಗ ನಮ್ಮ ಅತ್ತೆ ಮಾವಂದಿರು ಬಿದ್ದುಬಿದ್ದು ನಗುತ್ತ ಸಂತೋಷ ಪಡುತ್ತಾರೆಂದು ದೂರು ನೀಡಿದಳು. ಅಂತಹ ಅತ್ತೆ ಮಾವಂದಿರು, ತಾಯಿ ತಂದೆಯರು ಈ ರೀತಿ ಮಾತನಾಡುವುದರಿಂದ ಮುಂದೆ ಸಮಸ್ಯೆಗಳು ಬರುತ್ತವೆ ಯೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನಾಳೆ ಅವರನ್ನು ಕೂಡಾ ಮುದುಕಿ ಮುಂಡೆ ಎನ್ನಬಹುದು.
ಮಕ್ಕಳೊಂದಿಗೆ ಮಾತನಾಡುವಾಗ ಭಾವವೇಶಗಳ ಸಮತೋಲನೆಯಿರಬೇಕು. “ನೀನೊಬ್ಬಳು ಗಯ್ಯಾಳಿ “, “ನೀನೇ ರಾಕ್ಷಸಿ ”,ನನ್ನ ಪಾಲಿಗೆ ಯಮನಾಗಿ ಬಂದಿದ್ದೀಯಾ…….!” ಗಳಂತಹ ಬೈಗುಳಗಳನ್ನು ಬಿಟ್ಟು ಕೋಮಲವಾಗಿ ಬೆದರಿಸಬೇಕು.
ಸಾಧ್ಯವಾದರೆ “ಮೈ ಡಿಯರ್ ಡಾಕ್ಟರ್ ”,ಹಾಯ್ ಪ್ರೊಫೆಸರ್, ಏಯ್ ಸೂಪರ್ ಮ್ಯಾನ್, “ಏನಪ್ಪಾ ಸೆಂಟಿಸ್ಟ್” ಎಂದು ಆಗಾಗ್ಗೆ ತಮಾಷೆಯಾಗಿ ಕರೆದು ನೋಡಿ. ನಮ್ಮ ದೇಶದಲ್ಲಿ ಸಿಂಧಿಯವರಲ್ಲಿ “ಇಂಜಿನಿಯರ್, ಕಾಂಟ್ರಾಕ್ಟ್,ಡಾಕ್ಟರ್” ಗಳಂತಹ ಹೆಸರುಗಳಿವೆ.