ಬೆಟ್ಟದ ನೆಲ್ಲಿಕಾಯಿಯಿಂದ ತಯಾರಿಸಿದ ಸತ್ವಕ್ಕೆ ಸರ್ಜರಿಯಿಂದ ಉಂಟಾದ ಮತ್ತು ನರಗಳಿಂದ ಉಂಟಾದ ನೋವನ್ನು ನಿವಾರಣೆ ಮಾಡುವ ಸಾಮರ್ಥ್ಯವಿದೆಯೆಂದು ಇಲಿಗಳಿಗೆ ಕೊಟ್ಟು ನಡೆಸಿದ ಪರೀಕ್ಷೆಯಿಂದ ತಿಳಿದುಬಂದಿದೆ. ಒಟ್ಟಾರೆ ನೋವು ನಿವಾರಕ ಗುಣವಿದೆಯೆಂದು ದೃಢಪಟ್ಟಿದೆ.
ನ್ಯೂ ಮೋನಿಯಾ ರೋಗದಿಂದ ಕಾಪಾಡುವ ಗುಣ :
ಕ್ಲೆಬ್ಸಿಯಲ್ಲ ನ್ಯುಮೋನಿಯೇ
ಎಂಬ ಬ್ಯಾಕ್ಟೀರಿಯಾ ನ್ಯುಮೋನಿಯ ರೋಗವನ್ನುಂಟು ಮಾಡುತ್ತದೆ.ಬೆಟ್ಟದ ನೆಲ್ಲಿಕಾಯಿಯ ಚೂರ್ಣವನ್ನು 15 – 30 ದಿನಗಳವರೆಗೆ ಸೇವಿಸಲು ಕೊಟ್ಟು ತಯಾರಿ ಮಾಡಿದ ಇಲಿಗಳಿಗೆ ಈ ರೋಗಕಾರಕ ಬ್ಯಾಕ್ಟೀರಿಯಗಳ ಸಂಪರ್ಕ ಉಂಟು ಮಾಡಿದಾಗ, ನ್ಯುಮೋನಿಯಾ ರೋಗ ಉಂಟಾಗಲಿಲ್ಲವೆಂದು ವರದಿಯಾಗಿದೆ. ಒಟ್ಟಾರೆ ಬೆಟ್ಟದ ನೆಲ್ಲಿಕಾಯಿಯ ಚೂರ್ಣ ಇಲಿಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಉದ್ವಿಪಗೊಳಿಸಿ ನ್ಯುಮೋನಿಯ ರೋಗ ಉಂಟಾಗದಂತೆ ಮಾಡುತ್ತದೆ ಎಂಬ ಅಂಶ ಬೆಳಕಿಗೆ ಬಂದಿದೆ. ಈ ದಿಕ್ಕಿನಲ್ಲಿ ಉನ್ನತ ಮಟ್ಟದ ಅಧ್ಯಯನದ ಅವಶ್ಯಕತೆಯಿದೆಯೆಂಬ ಅಭಿಪ್ರಾಯಕ್ಕೆ ಬರಲಾಗಿದೆ.
ಪಿತ್ತ ಜನಾಂಗವನ್ನು ಕಾಪಾಡುವ ಗುಣ :
ಕಾರ್ಬನ್ ಟೆಟ್ರಕ್ಲೊರೈಡ್, ಮದ್ಯಸಾರ, ಹೆಕ್ಸಕ್ಲೊರೊ ಸೈಕ್ಲೊಹೆಕ್ಸೇನ್, ಕ್ಷಯ ರೋಗದ ಚಿಕಿತ್ಸೆಗೆ ಉಪಯೋಗಿಸುವ ಔಷಧಿಗಳು ಹಾಗೂ ಇನ್ನೂ ಮುಂತಾದ ರಾಸಾಯನಿಕ ವಿಷ ವಸ್ತುಗಳು, ಪಿತ್ತಜನಾಂಗದ ಮೇಲೆ ಉಂಟು ಮಾಡುವ ಪ್ರತಿಕೂಲ ಪರಿಣಾಮಗಳನ್ನು ತಡೆಯುವ ಸಾಮರ್ಥ್ಯ ಬೆಟ್ಟದ ನೆಲ್ಲಿಕಾಯಿ ಸತ್ವಕ್ಕೆ ಇದೆಯೆಂದು ಪ್ರಾಣಿಗಳ ಮೇಲೆ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ ಅಡಕವಾಗಿರುವ ಟ್ಯಾನಿನ್ಸ್ ಫ್ಲೇವೊನಾಯ್ಡ್ ಮತ್ತು ಆೄಂಟಿ ಆಕ್ಸಿಡೆಂಟ್ ಗುಣವೂ ಕಾರಣವೆನ್ನಲಾಗಿದೆ, ಪ್ರಯೋಗ ಶಾಲೆಯಲ್ಲಿ ತಯಾರಿಸಿದ ಶುದ್ಧ ಆಸ್ಕಾರ್ಬಿಕ್ ಆಮ್ಲ ಪಿತ್ತ ಜನಕಾಂಗವನ್ನು ಹಾಗೂ ಮೂತ್ರಪಿಂಡವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆಯೆಂದು ಕಂಡುಬಂದಿದೆ.
ಪ್ಯಾರಾಸಿಟ ಮಾಲ್ ಔಷಧಿಯನ್ನು ಜ್ವರ ಮತ್ತು ನೋವನ್ನು ನಿವಾರಿಸಲು ಉಪಯೋಗಿಸಲಾಗುತ್ತದೆ. ವೈದ್ಯರು ನಿಗದಿ ಪಡಿಸಿದ ಪ್ರಾಮಾಣಕ್ಕಿಂತ ಹೆಚ್ಚು ಪ್ರಮಾಣ ಸೇವಿಸಿದರೆ ಪ್ಯಾರಸಿಟಮಾಲ್ ಪಿತ್ತಜನಾಕಾಂಗದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ.ಇಂತಹ ಸಂದರ್ಭದಲ್ಲಿ ಬೆಟ್ಟದ ನೆಲ್ಲಿಕಾಯಿಯ ಚೂರ್ಣ ಸೇವಿಸಿದರೆ ಪ್ರತಿಕೂಲ ಪರಿಣಾಮದ ಪ್ರಭಾವ ಕಡಿಮೆಯಾಗುತ್ತದೆಯೆಂದು ಇಲಿಗಳ ಮೇಲೆ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ.
ನೀರು ಮತ್ತು ಮಧ್ಯಸಾರದ ಮಿಶ್ರಣ ಉಪಯೋಗಿಸಿ ಬೆಟ್ಟದ ನೆಲ್ಲಿಕಾಯಿ ಮರದ ಕಾಂಡದ ತೊಗಟೆಯಿಂದ ತಯಾರಿಸಿದ ಸತ್ವಕ್ಕೆ, ಎಥನಾಲ್ ಉಂಟುಮಾಡುವ ಹಾನಿಯಿಂದ ಪಿತ್ತಜನಾಂಗವನ್ನು ಕಾಪಾಡುವ ಗುಣವಿದೆಯೆಂದು ವರದಿಯಾಗಿದೆ. ಸತ್ವದ ಈ ಗುಣಕ್ಕೆ ಅದರಲ್ಲಿ ಅಡಕವಾಗಿರುವ ಎಲ್ಲಾಜಿಕ್ ಮತ್ತು ಗ್ಯಾಲಿಕ್ ಆಮ್ಲಗಳು ಕಾರಣ ವೆನ್ನಲಾಗಿದೆ.ಜೊತೆಗೆ ಸತ್ವದ ಆೄಂಟಿಆಕ್ಸಿಡೆಂಟ್ ಗುಣವು ಕಾರಣವೆಂದು ಕಂಡುಬಂದಿದೆ.
ಎಥನಾಲ್ ದ್ರಾವಣ ಉಪಯೋಗಿಸಿ ಬೆಟ್ಟದ ನೆಲ್ಲಿಕಾಯಿ ಮರದ ಎಲೆಯಿಂದ ತಯಾರಿಸಿದ ಸತ್ವಕ್ಕೆ ಪ್ಲಾಸ್ಮೋಡಿಯಂ ಬರ್ಫಿ ಎಂಬ ಕ್ರಿಮಿ ಉಂಟು ಮಾಡುವ ಹಾನಿಯಿಂದ ಪಿತ್ತಜನಾಂಗವನ್ನು ಕಾಪಾಡುವ ಗುಣವಿದೆಯೆಂದು ಇಲಿಗಳ ಮೇಲೆ ನಡೆಸಿದ ಪ್ರಯೋಗದಿಂದ ತಿಳಿದುಬಂದಿದೆ.
ಅಧಿಕ ಕೊಬ್ಬಿನಾಂಶ ಉಂಟುಮಾಡುವ ಹಾನಿಯಿಂದ ಪಿತ್ತಜನಕಾಂಗವನ್ನು ಕಾಪಾಡುವ ಗುಣ :
ಮಧ್ಯಸಾರ ಸೇವಿಸದ ವ್ಯಕ್ತಿಗಳಲ್ಲಿ ಅಧಿಕ ಪ್ರಮಾಣದ ಕೊಬ್ಬು ಪಿತ್ತಜನಕಾಂಗದಲ್ಲಿ ಶೇಖರಣೆಯಾಗಿ ಪಿತ್ತ ಜನಕಾಂಗ ಗಾತ್ರದಲ್ಲಿ ದೊಡ್ಡದಾಗಿ ಪ್ಯಾಟಿ ಲಿವರ್ ಕಾಯಿಲೆಯುಂಟಾಗುತ್ತದೆ .ಈ ಕಾಯಿಲೆಯನ್ನು ವಾಸಿ ಮಾಡುವ ಗುಣ,ನೀರು ಉಪಯೋಗಿಸಿ ಬೆಟ್ಟದ ನೆಲ್ಲಿಕಾಯಿಯ ಸತ್ವಕ್ಕೆ ಇದೆ ಯೆಂದು ಇಲಿಗಳ ಮೇಲೆ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ.
ಬೊಜ್ಜು ಬೆಳೆಯದಂತೆ ತಡೆಯುವ ಗುಣ :
ಬೊಜ್ಜು ಬೆಳೆಯುವುದರಿಂದ ದೇಹದ ಬಾಹ್ಯ ಸೌಂದರ್ಯ ಕೆಡುತ್ತದೆ. ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾಗುವುದರಿಂದ ಹೃದಯ ಸಂಬಂಧಂದ ಕಾಯಿಲೆಗೆ ನಾಂದಿಯಾಗುತ್ತದೆ ಆದುದರಿಂದ ದೇಹದ ಆರೋಗ್ಯದ ದೃಷ್ಟಿಯಿಂದ ಬೊಜ್ಜು ಬೆಳೆಯದಂತೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸಂಶೋಧನೆ ಕೈಗೊಳ್ಳಲಾಗಿದೆ ಅಧಿಕ ಕೊಬ್ಬಿನಾಂಶವಿರುವ ಆಹಾರವನ್ನು 42 ದಿನಗಳವರೆಗೆ ಸೇವಿಸಲು ಕೊಟ್ಟು ಬೊಜ್ಜು ಬೆಳೆಯುವಂತೆ ಮಾಡಿದ ಗಂಡು ಮಿಸ್ಟಾರ್ ಇಲಿಗಳಿಗೆ, ನೀರು ಉಪಯೋಗಿಸಿ ಬೆಟ್ಟದಲ್ಲಿ ನೆಲ್ಲಿಕಾಯಿಯಿಂದ ತಯಾರಿಸಿದ ಸತ್ವವನ್ನು ಕೊಬ್ಬಿನಾಂಶವಿರುವ ಆಹಾರವನ್ನು ಇಲಿಗಳಿಗೆ ಕೊಡಲು ಪ್ರಾರಂಭಿಸಿದ ಎಂಟು ದಿನಗಳ ನಂತರ ಆರಂಭಿಸಿ 50 ದಿನಗಳವರೆಗೆ ಸೇವಿಸಲು ಕೊಡಲಾಯಿತು ಅವಧಿಯ ನಂತರ ಸ್ಕೂಲ್ ಕಾಯವನ್ನು ಅಳತೆ ಮಾಡುವ ಪರೀಕ್ಷೆ ವಿವಿಧ ಪರೀಕ್ಷೆ ನಡೆಸಿದಾಗ,ನೀರು ಉಪಯೋಗಿಸಿ ಬೆಟ್ಟದ ನೆಲ್ಲಿಕಾಯಿಯಿಂದ ತಯಾರಿಸಿದ ಸತ್ವಕ್ಕೆ ಬೊಜ್ಜು ಬೆಳೆಯದಂತೆ ತಡೆಯುವ ಗುಣವಿದೆಯೆಂದದು ದೃಢಪಟ್ಟಿದೆ.