ಮನೆ ಸುದ್ದಿ ಜಾಲ ಟಾಟಾ ಗ್ರೂಪ್ ಗೆ ಏರ್ ಇಂಡಿಯಾ ಹಸ್ತಾಂತರ ಮಾಡಲು ವೇದಿಕೆ ಸಜ್ಜು: ಸರ್ಕಾರದಿಂದ ಅಧಿಸೂಚನೆ

ಟಾಟಾ ಗ್ರೂಪ್ ಗೆ ಏರ್ ಇಂಡಿಯಾ ಹಸ್ತಾಂತರ ಮಾಡಲು ವೇದಿಕೆ ಸಜ್ಜು: ಸರ್ಕಾರದಿಂದ ಅಧಿಸೂಚನೆ

0

ನವದೆಹಲಿ: ಟಾಟಾ ಗ್ರೂಪ್ ಗೆ ಏರ್ ಇಂಡಿಯಾ ವೈಮಾನಿಕ ಸಂಸ್ಥೆಯನ್ನು ಹಸ್ತಾಂತರಿಸುವ ವೇದಿಕೆ ಸಜ್ಜುಗೊಂಡಿದ್ದು, ನಾನ್ ಕೋರ್ ಅಸೆಟ್ಸ್ ನ ವರ್ಗಾವಣೆಗಾಗಿ ಏರ್ ಇಂಡಿಯಾ ಹಾಗೂ ವಿಶೇಷ ಉದ್ದೇಶದ ವಾಹನ AIAHL ನಡುವೆ ಒಪ್ಪಂದಕ್ಕೆ ಭಾರತ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಸರ್ಕಾರ ಕಳೆದ ಅಕ್ಟೋಬರ್ ನಲ್ಲಿ ಟಾಟಾ ಸಮೂಹದೊಂದಿಗೆ 18,000 ಕೋಟಿ ರೂಪಾಯಿಗಳಿಗೆ ಷೇರು ಮಾರಾಟ ಒಪ್ಪಂದಕ್ಕೆ ಸರ್ಕಾರ ಮುಂದಾಗಿತ್ತು. ಟಾಟಾ ಸಮೂಹ 1932 ರಲ್ಲಿ ಸ್ಥಾಪಿಸಿದ್ದ ವೈಮಾನಿಕ ಸಂಸ್ಥೆಯನ್ನು ಈಗ ಮರಳಿ ಸರ್ಕಾರದಿಂದ ಪಡೆಯುತ್ತಿದೆ. ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಒಪ್ಪಂದದ ನಗದು ವರ್ಗಾವಣೆಯಾಗಲಿದೆ. ಟಾಟಾ ಸಂಸ್ಥೆ 2,700 ಕೋಟಿ ರೂಪಾಯಿ ನಗದು ಪಾವತಿ ಮಾಡಲಿದ್ದು, ಏರ್ ಇಂಡಿಯಾ ಸಂಸ್ಥೆಯ 15,300 ಕೋಟಿ ರೂಪಾಯಿ ಸಾಲದ ಹೊರೆಯನ್ನು ಹೊರಲಿದೆ.

ಹಿಂದಿನ ಲೇಖನಮೈಸೂರಿಗೆ ಹೆಲಿಟೂರಿಸಂ ಬೇಡ: ವಾಟಾಳ್ ನಾಗರಾಜ್
ಮುಂದಿನ ಲೇಖನಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರ ಹೆಚ್ಚುತ್ತಿದೆ: ಸಿಎಂಗೆ ಗಣ್ಯರ ಬಹಿರಂಗ ಪತ್ರ