ಮನೆ ಸುದ್ದಿ ಜಾಲ ಮೈಸೂರಿಗೆ ಹೆಲಿಟೂರಿಸಂ ಬೇಡ: ವಾಟಾಳ್ ನಾಗರಾಜ್

ಮೈಸೂರಿಗೆ ಹೆಲಿಟೂರಿಸಂ ಬೇಡ: ವಾಟಾಳ್ ನಾಗರಾಜ್

0

ಮೈಸೂರು: ಹೆಲಿ ಟೂರಿಸಮ್ ಮಾಡಿದರೆ ನೈಸರ್ಗಿಕ ಸಂಪತ್ತು ಹಾಳಾಗುವುದು. ಹೀಗಾಗಿ ಯಾವುದೇ ಕಾರಣಕ್ಕೂ ಮೈಸೂರಿಗೆ ಹೆಲಿಟೂರಿಸಂ ಬೇಡ ಎಂದು ಆಗ್ರಹಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.

ಹೆಲಿ ಟೂರಿಸಂ ವಿರೋಧಿಸಿ ನಗರದ ಲಲಿತ್ ಮಹಲ್ ಪ್ಯಾಲೇಸ್ ಮುಂಭಾಗ ಪ್ರತಿಭಟನೆ ನಡೆಸಿದ ಅವರು, ಸುತ್ತ ಮುತ್ತ ಹಲವಾರು ವೀಕ್ಷಣೆ ಮಾಡುವ ಪ್ರದೇಶಗಳಿವೆ. ಶ್ರೀರಂಗಪಟ್ಟಣ ಪಕ್ಷಿಧಾಮ, ಚಾಮುಂಡಿಬೆಟ್ಟ, ಮೃಗಾಲಯ ಹಾಗೂ ಹಲವು ವೀಕ್ಷಿಸುವ ಸ್ಥಳಗಳಿವೆ.

ಪ್ರಾಣಿ ಪಕ್ಷಿಗಳಿಗೆ ತೊಂದರೆ ಮಾಡುವುದು ಸರಿಯಲ್ಲ. ಹೆಲಿ ಟೂರಿಸಂ ಮಾಡಿದರೆ ಪಕ್ಷಿಗಳಿಗೆ ತೊಂದರೆ ಉಂಟಾಗುತ್ತದೆ. ಹೆಲಿ ಟೂರಿಸಮ್ ಮಾಡಿದರೆ ನೈಸರ್ಗಿಕ ಸಂಪತ್ತು ಹಾಳಾಗುವುದು. ಮರಗಳ ಹನನವಾಗಲಿವೆ. ಯಾವುದೇ ಕಾರಣಕ್ಕೂ ಮೈಸೂರಿಗೆ ಹೆಲಿಟೂರಿಸಂ ಬೇಡ ಎಂದರು.

ಹಿಂದಿನ ಲೇಖನಅಧಿಕಾರಕ್ಕಾಗಿ ಜೆಡಿಎಸ್ ಯಾರ ಮನೆ ಬಾಗಿಲನ್ನೂ ಬಡಿದಿಲ್ಲ, ಮುಂದೆ ಬಡಿಯುವುದೂ ಇಲ್ಲ: ಹೆಚ್.ಡಿ.ಕೆ
ಮುಂದಿನ ಲೇಖನಟಾಟಾ ಗ್ರೂಪ್ ಗೆ ಏರ್ ಇಂಡಿಯಾ ಹಸ್ತಾಂತರ ಮಾಡಲು ವೇದಿಕೆ ಸಜ್ಜು: ಸರ್ಕಾರದಿಂದ ಅಧಿಸೂಚನೆ