ಮನೆ ಸುದ್ದಿ ಜಾಲ ನಕ್ಸಲ್ ನಿಗ್ರಹ ದಳ ಸಿಬ್ಬಂದಿಗಳಿಗೆ ವಿಶೇಷ ಆಹಾರ ಭತ್ಯೆ ಹೆಚ್ಚಿಸಿ ಆದೇಶ.

ನಕ್ಸಲ್ ನಿಗ್ರಹ ದಳ ಸಿಬ್ಬಂದಿಗಳಿಗೆ ವಿಶೇಷ ಆಹಾರ ಭತ್ಯೆ ಹೆಚ್ಚಿಸಿ ಆದೇಶ.

0

ಬೆಂಗಳೂರು: ನಕ್ಸಲ್ ನಿಗ್ರಹ ದಳ (ಎ ಎನ್ ಎಫ್) ಯೋಧರು ಹಾಗೂ ಆಂತರಿಕ ಭದ್ರತಾ ವಿಭಾಗ ದಲ್ಲಿ ಪ್ರಶಿಕ್ಷಣಾರ್ಥಿಗಳಾಗಿ, ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ, ನೀಡಲಾಗುತ್ತಿರುವ ವಿಶೇಷ ಆಹಾರ ಭತ್ಯೆ ದರವನ್ನು,  ರೂಪಾಯಿ ೧೩೦ ರಿಂದ ೩೦೦ ರೂ ಗಳಿಗೆ ಹೆಚ್ಚಿಸಿ ಸರಕಾರ ಆದೇಶ ಹೊರಡಿಸಿದೆ.

ಈ ಸಂಬಂಧ, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ಆಂತರಿಕ ಭದ್ರತಾ ವಿಭಾಗ, ಸರಕಾರಕ್ಕೆ ಸಲ್ಲಿಸಿದ್ದ ಕೋರಿಕೆಯನ್ನು ಪುರಸ್ಕರಿಸಿ, ಸರಕಾರವು ವಿಶೇಷ ಆಹಾರ ಭತ್ಯೆಯನ್ನು ಪರಿಷ್ಕರಿಸಿದೆ.

ವಿಶೇಷ ಆಹಾರ ಹೆಚ್ಚುವರಿ ಭತ್ಯೆ,  ಎ ಎನ್  ಎಫ್ ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಆಂತರಿಕ ಭದ್ರತಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ, ಸಿಸಿಟಿ ಮತ್ತು ಗರುಡ ಪಡೆಯ ಯೋಧರಿಗೂ ಅನ್ವಯವಾಗುವಂತೆ ಆದೇಶ ಹೊರಡಿಸಲಾಗಿದೆ.

ಸರಕಾರ ಹೊರಡಿಸಿರುವ ಭತ್ಯೆ ಹೆಚ್ಚಳ ಆದೇಶ, ನಿಮ್ಹಾನ್ಸ್ ಆಸ್ಪತ್ರೆಹ ಆಹಾರ ತಜ್ಞರು ನಿಗದಿಪಡಿಸಿರುವ ೫೬೦೦ kcal ನೀಡುವ ಪೌಷ್ಟಿಕ ಆಹಾರ ವನ್ನು,  ಭದ್ರತಾ ಪಡೆಗಳಿಗೆ ಒದಗಿಸಲು ಸಹಾಯಕವಾಗುತ್ತದೆ.

ಹಿಂದಿನ ಲೇಖನಶಿಕ್ಷಕರಿಗೆ ಗುರುತಿನ ಚೀಟಿ ವಿತರಣೆ ಕಾರ್ಯ ಶ್ಲಾಘನೀಯ: ಸಚಿವ ಕೆ.ಗೋಪಾಲಯ್ಯ
ಮುಂದಿನ ಲೇಖನಕುಂಬಳಕಾಯಿ ಕಳ್ಳ ಎಂದರೆ ನೀವೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತೀರಿ?: ಎಂ.ಪಿ.ರೇಣುಕಾಚಾರ್ಯ