ಮನೆ ರಾಜ್ಯ ಗುಂಡ್ಲುಪೇಟೆ: ಪುಂಡಾನೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆ

ಗುಂಡ್ಲುಪೇಟೆ: ಪುಂಡಾನೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆ

0

ಗುಂಡ್ಲುಪೇಟೆ(ಚಾಮರಾಜನಗರ): ರೈತರಿಗೆ ಉಪಟಳ ನೀಡುತ್ತಿದ್ದ ಪುಂಡಾನೆಯನ್ನು ಅರಣ್ಯಾಧಿಕಾರಿ ನಿರಂತರವಾಗಿ ಕಾರ್ಯಾಚರಣೆ ನಡೆಸುವ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Join Our Whatsapp Group

ತಾಲೂಕಿನ ಗೋಪಾಲಸ್ವಾಮಿ ಬೆಟ್ಟ ವಲಯ ವ್ಯಾಪ್ತಿಯ ಹಿರೀಕೆರೆ ಭಾಗದಲ್ಲಿ ರೈತರ ಜಮೀನುಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದ ಪುಂಡಾನೆಯು ಫಸಲನ್ನು ತಿಂದು ತಿಳಿದು ನಾಶ ಮಾಡುತ್ತಿತ್ತು. ಇದರಿಂದ ಬೇಸತ್ತಿದ್ದ ರೈತರು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿ ಪುಂಡಾನೆ ಸೆರೆಗೆ ಒತ್ತಾಯಿಸಿದ್ದರು. ನಂತರ ಆನೆ ಸೆರೆಗೆ ಹೀರಿಕೆರೆ ಭಾಗದಿಂದ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆಯವರು ರಾಂಪುರ ಆನೆ ಶಿಬಿರದ ಪಾರ್ಥಸಾರಥಿ, ಗಣೇಶ ಹಾಗೂ ದುಬಾರೆ ಆನೆ ಶಿಬಿರದ 4 ಆನೆಗಳ ಸಹಾಯದಿಂದ 45 ಸಿಬಂದಿಗಳನ್ನು ಒಳಗೊಂಡ ತಂಡ ಸತತ‌ 25 ದಿನಗಳ ಕಾಲ ಕೂಂಬಿಂಗ್ ನಡೆಸಿ ಕೊನೆಗೂ ಆನೆ ಸೆರೆ ಹಿಡಿದಿದ್ದಾರೆ.

ಈ ಕುರಿತು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಪ್ರತಿಕ್ರಿಯೆ ನೀಡಿ, ರೈತರ ಜಮೀನುಗಳ ಮೇಲೆ ಲಗ್ಗೆಯಿಟ್ಟು ಫಸಲು ನಾಶ ಮಾಡುತ್ತಿದ್ದ ಸುಮಾರು 40 ವರ್ಷದ ಪುಂಡಾನೆಯನ್ನು ಸತತವಾಗಿ ಕೂಂಬಿಂಗ್ ನಡೆಸಿ ಸೆರೆ ಹಿಡಿಯಲಾಗಿದೆ. ಆನೆಯನ್ನು ಅರಣ್ಯದ ಮಧ್ಯೆ ಭಾಗದಲ್ಲಿ ಬಿಡಲು ಚರ್ಚಿಸಲಾಗುತ್ತಿದ್ದು, ಮೇಲಾಧಿಕಾರಿಗಳ ಸೂಚನೆಯಂತೆ ಕ್ರಮ ವಹಿಸಲಾಗುವುದು ಎಂದು ಮಾಹಿತಿ ನೀಡಿದರು.

ಹಿಂದಿನ ಲೇಖನಸಿಡಿಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ: ಇಬ್ಬರು ಮಹಿಳೆಯರಿಗೆ ಗಾಯ
ಮುಂದಿನ ಲೇಖನವಾಕ್ಸಮರ ಅಂತ್ಯಗೊಳಿಸಿ ಸಂಧಾನಕ್ಕೆ ಮುಂದಾಗಿ: ರೂಪ-ರೋಹಿಣಿಗೆ ಸುಪ್ರೀಂಕೋರ್ಟ್‌ ಸಲಹೆ