ಮನೆ ರಾಜಕೀಯ ಯಾರು ಜೆಡಿಎಸ್ ಪಕ್ಷ ಬಿಟ್ಟರು ಚಿಂತೆ ಇಲ್ಲ: ಹೆಚ್ ಡಿಕೆ

ಯಾರು ಜೆಡಿಎಸ್ ಪಕ್ಷ ಬಿಟ್ಟರು ಚಿಂತೆ ಇಲ್ಲ: ಹೆಚ್ ಡಿಕೆ

0

ರಾಮನಗರ: ಯಾರು ಜೆಡಿಎಸ್ ಪಕ್ಷ ಬಿಟ್ಟರೂ ಚಿಂತೆ‌ ಇಲ್ಲ. ಪಕ್ಷದ ಕಾರ್ಯಕರ್ತರಿಗೆ ನಾಯಕರನ್ನು ಬೆಳೆಸುವ ಶಕ್ತಿ‌‌ ಇದೆ ಎಂದು ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಚನ್ನಪಟ್ಟಣದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ.ಎಸ್. ಪುಟ್ಟರಾಜು ಹಾಗೂ ಇತರೆ ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ಕುರಿತು ಪ್ರತಿಕ್ರಿಯಿಸಿ ‘ಸಿದ್ದರಾಮಯ್ಯ ಯಾರನ್ನು ಭೇಟಿ ಮಾಡುತ್ತಾರೋ ಅದನ್ನು ಕಟ್ಟಿಕೊಂಡು ನನಗೇನು ಆಗಬೇಕಿಲ್ಲ. ನನಗೆ ನನ್ನ ಪಕ್ಷ, ಕಾರ್ಯಕರ್ತರು ಮುಖ್ಯ ಎಂದರು.

ಕಾರ್ಯಕರ್ತರಿಂದ ಮುಖಂಡರು ಉದ್ಭವ ಆಗ್ತಾರೆ. ಬಹಳಷ್ಟು ಜನ ಮುಖಂಡರು ಜೆಡಿಎಸ್ ನಲ್ಲಿ ಬೆಳೆದಿದ್ದಾರೆ. ನಂತರ ಪಕ್ಷವನ್ನ ಬಿಟ್ಟು ಹೋಗಿದ್ದಾರೆ. ಜೆಡಿಎಸ್ ಕಾರ್ಯಕರ್ತರಿಗೆ ಮುಖಂಡರನ್ನ ಬೆಳೆಸೋ ಶಕ್ತಿಯಿದೆ. 2023 ಕ್ಕೆ ಜೆಡಿಎಸ್ ಶಕ್ತಿ ಏನೆಂದು ತಿಳಿಯಲಿದೆ ಎಂದರು.

ಸಿ.ಎಂ‌. ಇಬ್ರಾಹಿಂ ಜೆಡಿಎಸ್ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿ ‘ಅವರು ದೇವೇಗೌಡರ ಗರಡಿಯಲ್ಲಿ ಪಳಗಿದವರು. ದೇವೇಗೌಡರ ಆಸೆಯಂತೆ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ಹೀಗಾಗಿ ಪಕ್ಷಕ್ಕೆ ಬರುತ್ತೇನೆ ಎಂದಿದ್ದಾರೆ. ಅವರನ್ನು ಸ್ವಾಗತಿಸುತ್ತೇನೆ’ ಎಂದರು.‘ಬಿಎಸ್ ಯಡಿಯೂರಪ್ಪ ಅವರ ಮೊಮ್ಮಗಳ ಆತ್ಮಹತ್ಯೆ ಆಘಾತಕಾರಿ ಸಂಗತಿ. ಈ ನೋವು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಕೊಡಲಿ’ ಎಂದರು.

ರಾಮನಗರದಿಂದ ನನ್ನನ್ನು ಖಾಲಿ ಮಾಡಿಸೋಕೆ ಡಿಕೆಶಿ ಟಾರ್ಗೆಟ್:

ಕುಮಾರಸ್ವಾಮಿಯನ್ನೇ ರಾಮನಗರದಿಂದ ಖಾಲಿ ಮಾಡಿಸೋಕೆ ಡಿಕೆಶಿ ಟಾರ್ಗೆಟ್ ಮಾಡಿದ್ದಾರೆ.. ರಾಮನಗರಕ್ಕೂ ನನಗೂ ಇರುವ ಸಂಬಂಧ ಸಾವಿರಾರು ಬಾರಿ ಹೇಳಿದ್ದೇನೆ. ರಾಮನಗರ ಜಿಲ್ಲೆಯನ್ನೇ ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ.ಇದು ತಾಯಿ ಮಗನ ಸಂಬಂಧ ಎಂದರು. ಅವ್ರು ಹಣ, ದಬ್ಬಾಳಿಕೆ ಮೂಲಕ‌ ಕುಮಾರಸ್ವಾಮಿ ಬಗ್ಗು ಬಡಿಯುತ್ತೇನೆ ಅಂದುಕೊಂಡಿದ್ದಾರೆ.

ಅದಕ್ಕೆ ಅವ್ರು 10 ಜನುಮ ಎತ್ತಿ ಬರಬೇಕು. ಜಿಲ್ಲೆಯ ಜನತೆಗೂ ದೇವೇಗೌಡರ ಕುಟುಂಬಕ್ಕೂ ಪೂರ್ವ ಜನ್ಮದ ಸಂಬಂಧ. ಪಾದಯಾತ್ರೆ ಬಳಿಕೆ ಜೆಡಿಎಸ್ ಭದ್ರ ಕೋಟೆ ಚಿದ್ರ ಮಾಡಲು ಹೊರಟ್ಟಿದ್ದಾರೆ ಅಂದ್ರೆ ಅದು ಆಗಲ್ಲ.. ಅವ್ರು ಇನ್ನೂ 10 ಬಾರಿ ಪಾದಯಾತ್ರೆ ಮಾಡ್ಲಿ. ಇದು ದುರಾಂಕಾರದಲ್ಲಿ ಮಾತನಾಡುತ್ತಿಲ್ಲ. ಅವ್ರ ನಡವಳಿಕೆ ಏನು ಎಂಬುದನ್ನ ಅರ್ಥ ಮಾಡಿಕೊಂಡಿದ್ದೇನೆ. ಜಿಲ್ಲೆಯ ಜನರು ಬಹಳ ಲೆಕ್ಕಾಚಾರ ಮಾಡಿ ತಿರ್ಮಾನ ತೆಗೆದುಕೊಳ್ಳುತ್ತಾರೆ. ನಮ್ಮ ದುಡಿಮೆ, ಪ್ರೀತಿ ವಿಶ್ವಾಸ ಇದ್ರೆ ಮಾತ್ರ ಉಳಿಯಲು ಸಾಧ್ಯ. ಇದಲ್ಲದೇ ಹಣಕ್ಕೆ ಜನರು ಮಾರು ಹೋಗಲ್ಲ‌ ಎಂಬುದು ನನ್ನ ವಿಶ್ವಾಸ  ಎಂದು ಹೇಳಿದರು.

ಹಿಂದಿನ ಲೇಖನಸಂಸದ ಪ್ರತಾಪ್‌ ಸಿಂಹ ವಿರುದ್ಧ ಶಾಸಕ ಎಲ್. ನಾಗೇಂದ್ರ ವಾಗ್ದಾಳಿ
ಮುಂದಿನ ಲೇಖನಲಿಂಗ ಸಮಾನತೆ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಿದೆ: ಪ್ರೊ.ಜಿ.ಹೇಮಂತ್ ಕುಮಾರ್