ಮನೆ ರಾಜಕೀಯ ಸಂಸದ ಪ್ರತಾಪ್‌ ಸಿಂಹ ವಿರುದ್ಧ ಶಾಸಕ ಎಲ್. ನಾಗೇಂದ್ರ ವಾಗ್ದಾಳಿ

ಸಂಸದ ಪ್ರತಾಪ್‌ ಸಿಂಹ ವಿರುದ್ಧ ಶಾಸಕ ಎಲ್. ನಾಗೇಂದ್ರ ವಾಗ್ದಾಳಿ

0

ಮೈಸೂರು: ಮೈಸೂರಿನಲ್ಲಿ ಗ್ಯಾಸ್ ಪೈಪ್‌ಲೈನ್ ಯೋಜನೆ ವಿಚರವಾಗಿ ಸಂಸದರು ಹಾಗೂ ಶಾಸಕರ ನಡುವಿನ ಹಗ್ಗಜಗ್ಗಾಟ ಮುಂದುವರೆದಿದ್ದು, ಶುಕ್ರವಾರ ಸಂಸದ ಪ್ರತಾಪ್ ಸಿಂಹ ವಿರುದ್ಧ ಶಾಸಕ ಎಲ್‌ ನಾಗೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ನಾಗೇಂದ್ರ, ನಾವು, ನಮ್ಮ ಕಾರ್ಯಕರ್ತರು ಹಾಗೂ ಮೈಸೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್‌ಗಳೆಲ್ಲಾ ಓಡಾಡಿ ಪ್ರತಾಪ್‌ ಸಿಂಹ ಅವರಿಗೆ ಮತ ಹಾಕಿಸಿದ್ದೇವೆ. ಪಕ್ಷದ ಕಾರ್ಯಕರ್ತರು, ಕಾರ್ಪೋರೇಟರ್‌ಗಳು ಇಲ್ಲದಿದ್ದರೆ ಅವರು ಗೆಲ್ಲೋಕೆ ಆಗುತ್ತಾ? ಎಂದು ಕಿಡಿಕಾರಿದರು.
ಶಾಸಕರಿಗಿಂತ ಹೆಚ್ಚಿನ ಅಂತರದಲ್ಲಿ ಮತ ಗಳಿಸಿದ್ದೇನೆ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಖಾರವಾಗಿಯೇ ಪ್ರತಿಕ್ರಿಯಿಸಿದ ಶಾಸಕ ನಾಗೇಂದ್ರ, ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಹೀಗಾಗಿ ಹೆಚ್ಚಿನ‌ ಲೀಡ್‌ನಲ್ಲಿ ಗೆದ್ದಿದ್ದಾರೆ. ನಾನು ಕೂಡ ಈ ಬಾರಿ ಒಂದು ಲಕ್ಷ ಅಂತರದಲ್ಲಿ ಗೆಲುವು ಸಾಧಿಸಲಿದ್ದು, ನನ್ನ ಕ್ಷೇತ್ರದಲ್ಲಿ ಅಷ್ಟರ ಮಟ್ಟಿಗೆ ಕೆಲಸ ಮಾಡಿದ್ದೇನೆ. ಹೀಗಾಗಿ ಕೆಲಸದಿಂದ ಜನರ ವಿಶ್ವಾಸ ಗಳಿಸಬೇಕೆ ಹೊರತು ಮಾತಿನಿಂದಲ್ಲ ಎಂದು ಹೇಳಿದರು.

ಒಂದು ಮತದ ಅಂತರದಲ್ಲಿ ಗೆದ್ದರು ವಿಧಾನ ಸಭೆಗೆ ಸೇರಿಸುತ್ತಾರೆ. 1 ಲಕ್ಷ ಮತಗಳ ಅಂತರದಲ್ಲಿ ಗೆದ್ದರೂ ಸೇರಿಸುತ್ತಾರೆ. ಲೀಡ್ ಪ್ರಶ್ನೆ ಅಲ್ಲ. ಜನರಿಗೆ ಸ್ಪಂದಿಸುವುದು ಮುಖ್ಯ ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಇಂತಹ ಯೋಜನೆಗಳನ್ನು ಚುನಾಯಿತ ಪ್ರತಿನಿಧಿಗಳಿಗೆ ಗೊತ್ತಿಲ್ಲದಂತೆ ಮಾಡಿದರೆ ಆಗುತ್ತದೆಯೇ ಎಂದು ಪ್ರಶ್ನಿಸಿದರು.

ಯೋಜನೆಗೆ ಸಹಕಾರವಿದೆ. ಆದರೆ ರಸ್ತೆ ವೆಚ್ಚ ಭರಿಸುವವರು ಯಾರು ?:

ಯೋಜನೆಗೆ ನಾವು ಸಹಕಾರ ನೀಡುತ್ತೇವೆ. ಸುಮಾರು 500 ಕಿಮೀ ರಸ್ತೆ ಅಗೆಯುತ್ತಾರೆ ಎಂಬ ಮಾಹಿತಿ ಇದೆ. ನಮ್ಮ ಕ್ಷೇತ್ರದಲ್ಲಿ ಕಳೆದ ಮೂರು ಮುಕ್ಕಾಲು ವರ್ಷದಿಂದ 300-400 ಕೋಟಿ ರೂ ಖರ್ಚು ಮಾಡಿ ರಸ್ತೆ ಮಾಡಿದ್ದೇವೆ.  ಆದರೆ ಅವರು 99 ಕೋಟಿ ಕಟ್ಟುತ್ತಾರೆ. ಯೋಜನೆ ನಂತರ ರಸ್ತೆಯ ವೆಚ್ಚವನ್ನು ಭರಿಸುವವರು ಯಾರು ಎಂಬ ಜಿಜ್ಞಾಸೆ ನಮಗಿದೆ ಎಂದು ಹೇಳಿದರು.

ನಗರ ಪಾಲಿಕೆಗೆ ನಾನು ಪತ್ರ ಬರೆದಿದ್ದೇನೆ. ರಸ್ತೆ ಅಗೆದು ಪ್ರತಿ ಮನೆಗೆ ಸಂಪರ್ಕ ಕೊಡಲಾಗುತ್ತದೆ. ಇದು ಕೇಬಲ್ ಅಲ್ಲ. ಈ ಬಗ್ಗೆ  ಪ್ರತಿಯೊಬ್ಬ ಸಾರ್ವಜನಿಕನಿಗೂ ಮಾಹಿತಿ ನೀಡಬೇಕು. ಮಾಹಿತಿ ನೀಡದಿದ್ದರೆ ವಿಶಾಖ ಪಟ್ಟಣದಲ್ಲಿ 14 ಮಂದಿ ಸಾವನ್ನಪ್ಪಿದ ಘಟನೆ ಇಲ್ಲಿಯೂ ಮರುಕಳಿಸಿದರೆ ಯಾರು ಹೊಣೆ ? ಆ ಕಂಪನಿಯವನು ಹೊಣೆಯಾಗುತ್ತಾನಾ ? ಎಂಬುದು ನನ್ನ ಪ್ರಶ್ನೆ ಎಂದರು.

ಹಿಂದಿನ ಲೇಖನಫೀಲ್ಡ್  ಮಾರ್ಷಲ್  ಕಾರ್ಯಪ್ಪ ಅವರ 123ನೇ ಜಯಂತಿ
ಮುಂದಿನ ಲೇಖನಯಾರು ಜೆಡಿಎಸ್ ಪಕ್ಷ ಬಿಟ್ಟರು ಚಿಂತೆ ಇಲ್ಲ: ಹೆಚ್ ಡಿಕೆ