Saval TV on YouTube
ಹೊಸಪೇಟೆ (ವಿಜಯನಗರ): ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ‘ಸ್ವದೇಶ ದರ್ಶನ್’ 2.0 ಯೋಜನೆಗೆ ವಿಶ್ವಪ್ರಸಿದ್ಧ ಹಂಪಿ, ಸಾಂಸ್ಕೃತಿಕ ನಗರಿ ಮೈಸೂರು ಆಯ್ಕೆ ಮಾಡಲಾಗಿದೆ.
ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಸ್ವದೇಶ ದರ್ಶನ್ ಯೋಜನೆಯ ಅಡಿಯಲ್ಲಿ ದೇಶದ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದ 36 ಪ್ರಸಿದ್ಧ ಸ್ಥಳಗಳನ್ನು ಈ ಯೋಜನೆಗೆ ಆಯ್ಕೆ ಮಾಡಿದೆ. ಇದರಲ್ಲಿ ರಾಜ್ಯದ ಹಂಪಿ, ಮೈಸೂರಿಗೆ ಸ್ಥಾನ ಸಿಕ್ಕಿದೆ.