ಮನೆ ಸಾಹಿತ್ಯ ಸಂತೋಷ ಕ್ರಿಯಾಶೀಲತೆಯಿಂದ ಬರಬೇಕು

ಸಂತೋಷ ಕ್ರಿಯಾಶೀಲತೆಯಿಂದ ಬರಬೇಕು

0

ಒಂದೂರಿನಲ್ಲಿ ಒಬ್ಬ ಸೋಮಾರಿ ಇದ್ದನಂತೆ. ಅವನು ಹೊಳೆಯ ಬದಿಯಲ್ಲಿ ಇರುವ ಮರದ ನೆರಳಲ್ಲಿ ಹಾಯಾಗಿ ಮಲಗಿಕೊಂಡು ಜೀವನವನ್ನು ಕಳೆಯುತ್ತಿದ್ದನಂತೆ.ಒಂದು ದಿವಸ ಅವನು ಹೀಗೆ ಮಲಗಿಕೊಂಡಿದ್ದಾಗ ಒಬ್ಬ ಹಿರಿಯ ವ್ಯಕ್ತಿ ಮರದ ಪಕ್ಕದ ದಾರಿಯಲ್ಲಿ ಸಾಗಿ ಬಂದರಂತೆ.

Join Our Whatsapp Group

ಸೋಮಾರಿಯನ್ನು ನೋಡಿ, “ಅಯ್ಯಾ,  ಯಾಕೆ ಹೀಗೆ ಸೋಮಾರಿಯಾಗಿ ಮಲ್ಕೊಂಡಿರ್ತಿಯಾ?”ಎಂದು ಕೇಳಿದರಂತೆ.ಆಗ ಸೋಮಾರಿ, “ಏನು ಮಾಡಬೇಕು ಹೇಳಿ?”ಎಂದು ಕೇಳಿದ. “ನಿನ್ನಂದೀಗ ದುಡಿಯುವ ವಯಸ್ಸು.ಚೆನ್ನಾಗಿ ದುಡಿ” ಎಂದರು ಹಿರಿಯರ ವ್ಯಕ್ತಿ “ದುಡಿದರೇನು ಉಪಯೋಗ?”ಸೋಮಾರಿ.“ದುಡಿದರೆ ಸಂಬಳ ಸಿಗುತ್ತದೆ. ಸಂಬಳದಿಂದ ಆದಾಯ ಬರುತ್ತದೆ” ಹಿರಿಯರ. “ಆದಾಯದಿಂದೇನು ಉಪಯೋಗ?” ಸೋಮಾರಿ.“ಆದಾಯ ಬಂದರೆ ನೀನೂ ಮನೆ, ಮಠ, ಆಸ್ತಿ ಎಲ್ಲ ಮಾಡಿಕೊಳ್ಳಬಹುದು” ಹಿರಿಯರ “ಅದರಿಂದೇನು ಉಪಯೋಗ?”ಸೋಮಾರಿ. ನೀನೂ ಒಬ್ಬ ಜವಾಬ್ದಾರಿಯುತ ವ್ಯಕ್ತಿಯೆಂದು ಭಾವಿಸಿ ಯಾರಾದರೂ ನಿನಗೆ ಹುಡುಗಿ ಕೊಟ್ಟು ಮದುವೆ ಮಾಡುತ್ತಾರೆ ”ಹಿರಿಯರ “ಮದುವೆಯಾಗುವುದರಿಂದ ಏನು ಉಪಯೋಗ?”ಸೋಮಾರಿ. “ಮಕ್ಕಳಾಗುತ್ತವೆ ”ಹಿರಿಯ  “ಮಕ್ಕಳಾಗಿ?” ಸೋಮಾರಿ. ಆ ಮೇಲೆ ಮಕ್ಕಳ ಲಾಲನೆ,ಪಾಲನೆ,ಶಿಕ್ಷಣ ಎಲ್ಲ” ಹಿರಿಯರ. “ನಂತರ?” ಸೋಮಾರಿ “ನಂತರ ಏನು ಮಕ್ಕಳು ಉದ್ಯೋಗ ಮಾಡುತ್ತಾರೆ ಆ ಮೇಲೆ ನೀನು  ಹಾಯಾಗಿ ಮಲಗಿ ಕಾಲ ಕಳೆಯುಬಹುದು ”ಎಂದರು.

ಹಿರಿಯ ವ್ಯಕ್ತಿ.ಆಗ ಸೋಮಾರಿಯು, “ಅಯ್ಯೋ ಸ್ವಾಮಿ, ಅದಕ್ಕಾಗಿ ಇಷ್ಟೆಲ್ಲ ಮಾಡಬೇಕಾ. ನಾನೀಗ ಮಾಡುತ್ತಿರುವುದು ಅದೇ ಕೆಲಸವನ್ನು ಎಂದನಂತೆ. ಇವನ ಬಳಿ ಮಾತನಾಡಿ ಉಪಯೋಗವಿಲ್ಲ ಎಂದುಕೊಂಡು  ಹಿರಿಯ ವ್ಯಕ್ತಿ ಹೊರಟು ಹೋದನಂತೆ.

     ಸೋಮಾರಿಯ ಮಾತಿನಲ್ಲಿ ತರ್ಕವಿದೆ.   ತರ್ಕಬದ್ಧವಾಗಿ ಅದು ಸತ್ಯ. ಆದರೆ ಜೀವನಕ್ಕೆ ಒಂದು ವಿಧಾನವಿದೆ. ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು.ಭಗವದ್ಗೀತೆಯಲ್ಲಿ ಕೃಷ್ಣನು, “ನನಗೆ ಬೇಕೆನಿಸಿದರೆ ಪಡೆಯಲು ಆಗದೆ ಇರುವುದು ಯಾವುದೂ ಇಲ್ಲ ನಾನು ಮಾಡಬೇಕಾದ್ದೂ ಯಾವುದೂ ಇಲ್ಲ. ಆದರೂ ನಾನು ನನ್ನ ಕೆಲಸವನ್ನು ಮಾಡುತ್ತಿರುತ್ತೇನೆ. ಯಾಕೆಂದರೆ ನಾನು ನನ್ನ ಕೆಲಸವನ್ನು ಮಾಡದೆ ಇದ್ದರೆ ಜಗತ್ತು ನಿಂತು ಬಿಡುತ್ತದೆ” ಎನ್ನುತ್ತಾನೆ.ನಿಜವಾಗಿ ಏನೆನ್ನು ಮಾಡದೆ ಸಂತೋಷವಾಗಿರಲು ಸಾಧ್ಯವಿಲ್ಲ.ಒಂದು ದಿನ ಎಚ್ಚರವಾಗಿದ್ದು ಸುಮ್ಮನೆ ಮಲಗಿದ್ದರೆ ಹುಚ್ಚು ಹಿಡಿದಂತಾಗಿಬಿಡುತ್ತದೆ. ಸಂತೋಷವನ್ನು ಕೂಡ ಕ್ರಿಯಾಶೀಲತೆಯಿಂದಲೇ ದೊರಕಿಸಿಕೊಳ್ಳಲು ಸಾಧ್ಯ. ಆದ್ದರಿಂದ ಸೋಮಾರಿಗಳಾಗಬಾರದು. ಕ್ರಿಯಾಶೀಲರಾಗಿ ಸಂತೋಷವನ್ನು ಪಡೆಯಬೇಕು.

ಹಿಂದಿನ ಲೇಖನವಾರಾಣಸಿ ಲೋಕಸಭಾ ಕ್ಷೇತ್ರ: 1.5 ಲಕ್ಷ ಮತಗಳ ಅಂತರದಿಂದ ಪ್ರಧಾನಿ ಮೋದಿ ಗೆಲುವು
ಮುಂದಿನ ಲೇಖನಬಾಗಲಕೋಟೆ ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ್ ಗೆಲುವು