ಮನೆ ಅಪರಾಧ ಗೇಟ್ ತೆರೆಯಲು ಹೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಹಲ್ಲೆ: ದಸರಾ ವಸ್ತು ಪ್ರದರ್ಶನದ ಸೆಕ್ಯೂರಿಟಿ...

ಗೇಟ್ ತೆರೆಯಲು ಹೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಹಲ್ಲೆ: ದಸರಾ ವಸ್ತು ಪ್ರದರ್ಶನದ ಸೆಕ್ಯೂರಿಟಿ ಸೂಪರ್ ವೈಸರ್ ವಿರುದ್ಧ ದೂರು ದಾಖಲು

0

ಮೈಸೂರು: ಗೇಟ್ ತೆರೆಯಲು ಹೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ ದಸರಾ ವಸ್ತು ಪ್ರದರ್ಶನದ ಸೆಕ್ಯೂರಿಟಿ ಸೂಪರ್ ವೈಸರ್ ಚಂದ್ರು ವಿರುದ್ಧ ಮೊಕದ್ದಮೆ ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪರಿಸರವಾದಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಭಾನು ಮೋಹನ್ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ  ಪ್ರವವ ಸಂಖ್ಯೆ 0196/2022 ಐಪಿಸಿ ಸೆಕ್ಷನ್ 504, 323 ಹಾಗೂ 354 ರಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನವೆಂಬರ್ 6 ರಂದು ಸಂಜೆ 5.15ಕ್ಕೆ ದಸರಾ ವಸ್ತು ಪ್ರದರ್ಶನದ ಆವರಣದಲ್ಲಿರುವ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ ಭಾಗವಹಿಸಲು ಹೋಗಿದ್ದ  ಭಾನುಮೋಹನ್  ಹಾಗೂ ಅವರ ಕುಟುಂಬದವರು ವಸ್ತು ಪ್ರದರ್ಶನದ ಉತ್ತರ ಭಾಗದ ಪಶ್ಚಿಮದ ಕಡೆಯಿರುವ  ಗೇಟ್ ತೆರೆಯಲು ಹೇಳಿದಾಗ ಅಲ್ಲಿದ್ದ ಸೆಕ್ಯೂರಿಟಿ ಸಿಬ್ಬಂದಿಗೆ ಗೇಟ್ ತೆರೆಯುವಂತೆ ಮನವಿ ಮಾಡಿಕೊಂಡಾಗ ಸಿಬ್ಬಂದಿ ಸೂಪರ್ ವೈಸರ್ ತಿಳಿಸಿದರೆ ಮಾತ್ರ ಗೇಟ್ ತೆರೆಯುವುದಾಗಿ ತಿಳಿಸಿದ್ದು, ಸೂಪರ್ ವೈಸರ್ ಚಂದ್ರು ಕೊಠಡಿಗೆ ತೆರಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಗೇಟ್ ತೆರೆಯುವಂತೆ ಮನವಿ ಮಾಡಿದ್ದು, ಈ ವೇಳೆ ಚಂದ್ರು ಎಂಬ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಏಕವಚನದಲ್ಲಿ ಮಾತನಾಡಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ.

ಈ ಸಂದರ್ಭ ಸ್ಥಳಕ್ಕೆ ಬಂದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಸಮಾಧಾನ ಪಡಿಸಿ  ಕಾರ್ಯಕ್ರಮದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಆದರೆ ಭಾನು ಮೋಹನ್ ಕೆನ್ನೆ ಊದಿಕೊಂಡು ನೋವು ಕಾಣಿಸಿಕೊಂಡಿದ್ದರಿಂದ ಕೆ.ಆರ್.ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಘಟನೆಯಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಾಕಷ್ಟು ನೋವುಂಟಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಘಟನೆ ಕುರಿತು ನಜರಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸೆಕ್ಯೂರಿಟಿ ಸೂಪರ್ ವೈಸರ್  ಚಂದ್ರು ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಸೆಕ್ಯೂರಿಟಿ ಏಜೆನ್ಸಿ ಅವರು ಅಕ್ರಮವಾಗಿ ಟೆಂಡರ್ ಪಡೆದು ಹಲವಾರು ವರ್ಷಗಳಿಂದ ವಸ್ತುಪ್ರದರ್ಶನ ಪ್ರಾಧಿಕಾರದಲ್ಲಿ ಠಿಕಾಣಿ ಹೂಡಿದ್ದು, ಮಾಲೀಕರ ಕುಮ್ಮಕ್ಕಿನಿಂದಲೇ ಸೆಕ್ಯೂರಿಟಿ ಗಾರ್ಡ್ ಹಾಗೂ ಇತರೆ ಸಿಬ್ಬಂದಿಗಳು ಸಾರ್ವಜನಿಕರ ಮೇಲೆ ದೌರ್ಜನ್ಯ ನಡೆಸುತ್ತಿರುವ ಪ್ರಕರಣಗಳು ಹಲವಾರು ಬಾರಿ ಬೆಳಕಿಗೆ ಬಂದಿದೆ. ಆದರೆ ಪ್ರಾಧಿಕಾರದ ಅಧಿಕಾರಿಗಳು ಈ ಎಲ್ಲಾ ಘಟನೆಗಳನ್ನು ಕಂಡರೂ ಕಾಣದಂತೆ ಬೇಜವಬ್ದಾರಿಯಿಂದ ವರ್ತಿಸುತ್ತಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಆದ್ದರಿಂದ ಇನ್ನು ಮುಂದಾದರೂ ಪ್ರಾಧಿಕಾರದ ಅಧಿಕಾರಿಗಳು ಎಚ್ಚೆತ್ತುಕೊಂಡು  ಸೆಕ್ಯೂರಿಟಿ ಏಜೆನ್ಸಿಯವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಹಿಂದಿನ ಲೇಖನನಾಲ್ಕು ವರ್ಷಗಳ ಬಳಿಕ ಕಾನೂನು ಆಯೋಗ ರಚನೆ: ಅಧ್ಯಕ್ಷರಾಗಿ ನ್ಯಾ. ರಿತು ರಾಜ್ ಅವಸ್ಥಿ ನೇಮಕ
ಮುಂದಿನ ಲೇಖನಕಾಂಗ್ರೆಸ್‌ನಂತೆ ಬಿಜೆಪಿ ಪಕ್ಷವು ಎಂದಿಗೂ ಓಲೈಕೆ ರಾಜಕಾರಣ ಮಾಡಿಲ್ಲ: ಸಚಿವ ಡಾ.ಕೆ.ಸುಧಾಕರ್‌