ಮನೆ ಅಪರಾಧ ಹರಿಯಾಣ: ಕತ್ತು ಸೀಳಿ ಖ್ಯಾತ ಮಾಡೆಲ್ ಶೀತಲ್ ಬರ್ಬರ ಹತ್ಯೆ

ಹರಿಯಾಣ: ಕತ್ತು ಸೀಳಿ ಖ್ಯಾತ ಮಾಡೆಲ್ ಶೀತಲ್ ಬರ್ಬರ ಹತ್ಯೆ

0

ಚಂಡೀಗಢ: ಹರಿಯಾಣದ ಮನರಂಜನಾ ಲೋಕದಲ್ಲಿ ತೀವ್ರ ಭೀತಿಯ ವಾತಾವರಣವನ್ನು ಮೂಡಿಸಿರುವ ಭಯಾನಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹರಿಯಾಣ ಮೂಲದ ಖ್ಯಾತ ಮಾಡೆಲ್ ಶೀತಲ್ ಅವರ ಶವ ಸೋನಿಪತ್ ಜಿಲ್ಲೆಯ ಕಾಲುವೆೆಯಲ್ಲಿ ಪತ್ತೆಯಾಗಿದೆ. ಶೀತಲ್ ಅವರ ಕತ್ತು ಸೀಳಿದ ಸ್ಥಿತಿಯಲ್ಲಿ ಶವ ಪತ್ತೆಯಾದ ಹಿನ್ನಲೆಯಲ್ಲಿ ಇದು ನಿಶ್ಚಿತವಾಗಿ ಹತ್ಯೆ ಪ್ರಕರಣ ಎಂಬುದು ದೃಢವಾಗಿದೆ.

ಚಿಕ್ಕದಾದರೂ ಜನಪ್ರಿಯತೆ ಗಳಿಸಿದ್ದ ಶೀತಲ್ ಹರಿಯಾಣವಿ ಮ್ಯೂಸಿಕ್ ವಿಡಿಯೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅವರು ತಮ್ಮ ಸಹೋದರಿ ನೇಹಾ ಜೊತೆ ಪಾಣಿಪತ್‌ನಲ್ಲಿ ವಾಸವಾಗಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಜೂನ್ 14 ರಂದು ಶೀತಲ್ ಅವರು ಶೂಟಿಂಗ್‌ಗೆ ಅಹರ್ ಗ್ರಾಮದತ್ತ ತೆರಳಿದ್ದರು. ಆದರೆ ಆಗಿನಿಂದ ಮನೆಗೆ ಮರಳದೇ ಇರುವುದು ಕುಟುಂಬದ ಸದಸ್ಯರಲ್ಲಿ ಆತಂಕ ಹುಟ್ಟುಹಾಕಿದ್ದು, ಸಹೋದರಿ ನೇಹಾ ಪಾಣಿಪತ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಪೊಲೀಸರ ತನಿಖೆ ಪ್ರಾರಂಭವಾದ ಬಳಿಕ ಶೋಧ ಕಾರ್ಯಾಚರಣೆ ನಡೆದಿದ್ದು, ಕೊನೆಗೆ ಶವವನ್ನು ಸೋನಿಪತ್ ಜಿಲ್ಲೆಯ ಖಾಂಡಾ ಗ್ರಾಮದ ಸಮೀಪದ ಕಾಲುವೆಯಲ್ಲಿ ಪತ್ತೆ ಹಚ್ಚಲಾಯಿತು. ಶೀತಲ್ ಅವರ ಶವವು ಸಂಪೂರ್ಣವಾಗಿ ಹಲ್ಲೆಗೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದು, ಕತ್ತು ತೀವ್ರವಾಗಿ ಸೀಳಲಾಗಿತ್ತು ಎಂದು ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿದೆ.

ಪೊಲೀಸರು ಶೀತಲ್ ಅವರ ಕೊನೆಯ ಮೊಬೈಲ್ ಲೋಕೇಶನ್, ಸಂಪರ್ಕಗಳ ಮಾಹಿತಿ, ಹಾಗೂ ಅವರು ಭೇಟಿ ಮಾಡಿದ ವ್ಯಕ್ತಿಗಳ ವಿಚಾರಣೆ ಆರಂಭಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ತೀವ್ರಗೊಳಿಸಿದ್ದು, ಶೀತಲ್ ಅವರನ್ನು ಕೊಲ್ಲಲು ಪ್ರೇರಣೆ ಏನು? ವ್ಯಕ್ತಿಗತ ದ್ವೇಷವೋ ಅಥವಾ ಉದ್ಯೋಗ ಸಂಬಂಧಿತ ಸಮಸ್ಯೆಯೋ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಾರೆ.

ಈ ಹೃದಯವಿದ್ರಾವಕ ಘಟನೆ ಹರಿಯಾಣ ಹಾಗೂ ಇಡೀ ದೇಶದ ಮನರಂಜನೆಯ ಉದ್ಯಮದಲ್ಲಿ ಮಹಿಳಾ ಕಲಾವಿದರ ಸುರಕ್ಷತೆಯ ಕುರಿತು ಗಂಭೀರ ಚರ್ಚೆಗೆ ದಾರಿ ಮಾಡಿಕೊಡುತ್ತಿದೆ. ಮಹಿಳಾ ಕಲಾವಿದರು, ವಿಶೇಷವಾಗಿ ಮಾಡೆಲ್‌ಗಳು ಮತ್ತು ನಟಿಯರು, ಶೂಟಿಂಗ್ ಸಂದರ್ಭದಲ್ಲಿ ಅಥವಾ ಪ್ರಯಾಣದ ಸಂದರ್ಭಗಳಲ್ಲಿ ಭದ್ರತೆ ಇಲ್ಲದೆ ಓಡಾಡಬೇಕಾಗುತ್ತಿರುವ ಪರಿಸ್ಥಿತಿ ಇದೀಗ ಪ್ರಶ್ನೆಯಾಗಿದೆ.