ಮನೆ ದೇವಸ್ಥಾನ ಅ.13 ರಿಂದ ಹಾಸನಾಂಬೆಯ ದರ್ಶನ ಪ್ರಾರಂಭ

ಅ.13 ರಿಂದ ಹಾಸನಾಂಬೆಯ ದರ್ಶನ ಪ್ರಾರಂಭ

0

ಹಾಸನ(Hassan):  ವರ್ಷಕೊಮ್ಮೆ ತೆರಯುವ ಹಾಸನಾಂಬೆ ದೇಗುಲದ ಗರ್ಭಗುಡಿ ಬಾಗಿಲನ್ನು ಈ ಬಾರಿ ಅಕ್ಟೋಬರ್​​ 13 ಮಧ್ಯಾಹ್ನ 12.30 ಕ್ಕೆ ತೆರೆಯಲಾಗುತ್ತದೆ.

ಅ.13ರಿಂದ ಅ.27ರವರೆಗೆ ಹಾಸನಾಂಬೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಇಂದು ತಹಶೀಲ್ದಾರ್ ನಟೇಶ್ ಸಮ್ಮುಖದಲ್ಲಿ ಅರ್ಚಕರು ದೇವಿಯ ಆಭರಣಗಳನ್ನು ಜಿಲ್ಲಾ ಖಜಾನೆಯಿಂದ ದೇಗುಲಕ್ಕೆ ತಂದಿದ್ದಾರೆ. ಪೊಲೀಸ್ ಬಿಗಿ ಬಂದೋಬಸ್ತ್​​​ನಲ್ಲಿ ದೇವಿಯ ಒಡವೆಗಳನ್ನು ಬೆಳ್ಳಿ ರಥದಲ್ಲಿ ದೇವಸ್ಥಾನಕ್ಕೆ ತಂದಿದ್ದಾರೆ.

 ಒಟ್ಟು 15 ದಿನಗಳ ಕಾಲ ಹಾಸನಾಂಬ ದೇವಾಲಯ ಓಪನ್​ ಮಾಡಲಾಗುತ್ತೆ. ಮೊದಲ ಮತ್ತು ಕೊನೆಯ ದಿನ ಹಾಗೂ ಗ್ರಹಣದ ದಿನ ಸಾರ್ವಜನಿಕರಿಗೆ ದರ್ಶನ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಮಹಾಮಾರಿ ಕೊರೊನಾ ಹಿನ್ನೆಲೆ ಕಳೆದ ಮೂರು ವರ್ಷ ಹಾಸನಾಂಬೆ ಉತ್ಸವ ಸರಳವಾಗಿ ನಡೆದಿತ್ತು. ಈ ಬಾರಿ ಅದ್ಧೂರಿಯಾಗಿ ಹಾಸನಾಂಬೆ ಉತ್ಸವ ಆಚರಣೆಗೆ ನಿರ್ಧಾರ ಮಾಡಲಾಗಿದೆ. ಆಶ್ವೀಜ ಮಾಸದ ಮೊದಲ‌ ಗುರುವಾರ ಗರ್ಭಗುಡಿ ಬಾಗಿಲು ತೆರೆಯಲಿದೆ. ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಆಗಮಿಸಿ ಲಕ್ಷಾಂತರ ಭಕ್ತರು ದರ್ಶನ ಪಡೆಯಲಿದ್ದಾರೆ.