ಮನೆ ಯೋಗಾಸನ ಶೀರ್ಷ ಪಾದಾಸನ

ಶೀರ್ಷ ಪಾದಾಸನ

0

 ‘ಶೀರ್ಷ’ ವೆಂದರೆ ತಲೆ, ಪಾದ ಅಡಿ ಹೆಜ್ಜೆ ಬೆನ್ನನ್ನು ಬಗ್ಗಿಸಿ ಮಾಡುವ ಭಂಗಿಗಳಲೆಲ್ಲ ಈ ಆಸನದ ಭಂಗಿಯು ಬಲು ಕಠಿಣವಾದುದು ‘ಶ್ರೀರ್ಷಾಸನ’ದಲ್ಲಿ ತಲೆಯ ಮೇಲೆ ಸಮತೋಲಿಸುವಾಗ ಇದನ್ನು ಅಭ್ಯಾಸಿಸಬೇಕು ಇದರಲ್ಲಿ ತಲೆಯಮೇಲೆ ನಿಲ್ಲುವ ಭಂಗಿಯನ್ನು ಮಾಡಿ ಮುಗಿಸಿದ ಬಳಿಕ ಬೆನ್ನೆನ್ನು ಬಿಲ್ಲಿನಂತೆ ಬಗ್ಗಿಸಿ, ಆಮೇಲೆ ಪಾದಗಳನ್ನು ಕೆಳಗಿಳಿಸಿ ಹಿಮ್ಮಡಿಗಳನ್ನು ಕತ್ತಿನ ಹಿಂಬದಿಯ ಮೇಲೊರಗಿಸಿ, ಆನಂತರ ಕೈಗಳಿಂದ ಕಾಲುನುಂಗಟಗಳನ್ನು ಹಿಡಿದು, ಅದನ್ನು ತಲೆಯ ಹಿಂಬದಿಗೆ ಮುಟ್ಟಿಸಬೇಕು.

Join Our Whatsapp Group

 ಅಭ್ಯಾಸ ಕ್ರಮ :

1. ಮೊದಲು ಒಂದು ಜಮಖಾನವನ್ನು ಹಾಸಿ, ಅದರಮೇಲೆ ಮೊಣಕಾಲೂರಿ ಕುಳಿತು ‘ಸಲಾಂಬ ಶೀರ್ಷಾಸನ’ದ ಭಂಗಿಗೆ ಬರಬೇಕು.

2. ಬಳಿಕ, ಮಂಡಿಗಳನ್ನು ಬಾಗಿಸಿದ ಮೇಲೆ ಕಾಲುಗಳನ್ನು ಬೆನ್ನಹಿಂದೆ ಬಗ್ಗಿಸಬೇಕು ಆಮೇಲೆ ಉಸಿರನ್ನು ಹೊರಕ್ಕೆಬಿಟ್ಟು ಬೆನ್ನೆಲುಬನ್ನು ಹಿಗ್ಗಿಸಿ, ಪೃಷ್ಠಗಳನ್ನು ಕುಗ್ಗಿಸಿ ಹಿಂದಕ್ಕೆಳೆದು ತೊಡೆಗಳನ್ನು ಪಾದಗಳಲ್ಲೂ ಕೆಳಗಿಳಿಸಿ ಅವನ್ನು ತಲೆಯ ಹಿಂಬದಿಗೆ ಮುಟ್ಟಿಸಬೇಕು. ಈಗ ಮೊಣ ಕೈಗಳನ್ನು ಸರಿಸದಿಯೇ ಕೈ ಮಣಿಕಟ್ಟುಗಳನ್ನು ನೆಲದಿಂದ ತುಸು ಮೇಲೆತ್ತಿ, ಕೈಗಳಿಂದ ಕಾಲ ಹೆಬ್ಬೆರಳುಗಳನ್ನು ಹಿಡಿದುಕೊಳ್ಳಬೇಕು ಆದರೆ,ಕೈಬೆರಳ ಬಿಗಿವನ್ನು ಮಾತ್ರ ಸಡಿಲಿಸಬಾರದು. ಆಮೇಲೆ ಎದೆಯನ್ನು ಮುಂದೂಡಿ ಆ ಭಂಗಿಯಲ್ಲಿ ಸಾಧ್ಯವಾದಷ್ಟು ಕಾಲ ನೆಲೆಸಬೇಕು.

3. ಇತರ ಬಾಗುವ ಭಂಗಿಗಳಲ್ಲಿ ಬೆನ್ನೆಲುಗಳನ್ನು ಹಿಗ್ಗಿಸಲು ಏನಾದರೂ ನೆರವನ್ನು ಪಡೆಯಲು ಸಾಧ್ಯ. ಆದರೆ ಈ ಆಸನದ ಭಂಗಿಯಲ್ಲಿ ಬೇಕಾದ ಕಮಾನು ಬಗ್ಗಿಸಲು ಬೆನ್ನೆಲುಬು ತಾನಾಗಿಯೇ ಚಲಿಸಬೇಕಾಗುತ್ತದೆ.

4. ಈ ಭಂಗಿಯಲ್ಲಿ ಬೆನ್ನೆಲುಬು, ಎದೆ ಭುಜಗಳು ಮತ್ತು ಕತ್ತು ಸಂಪೂರ್ಣವಾಗಿ ಹಿಗ್ಗಬೇಕಾಗಿರುವುದರಿಂದಲೂ ಕಿಬ್ಬೊಟ್ಟೆಯು ಕುಗ್ಗುವುದರಿಂದಲೂ ಸಾಮಾನ್ಯ ರೀತಿಯಿಂದ ಉಸಿರಾಟ ನಡೆಸುವುದು ಕಷ್ಟ ‘ಶೀರ್ಷಾಸನ ಒಂದರ’ ಭಂಗಿಗೆ ಹಿಂದಿರುಗಿ ಕೆಳಕ್ಕೆ ಇಳಿಬಿಟ್ಟು ವಿಶ್ರಾಂತಿ ಪಡೆಯಬೇಕು. ಇಲ್ಲವೇ ‘ಊರ್ಧ್ವ ಧನುರಾಸನ’ವನ್ನು ಆಭ್ಯಸಿಸಿ, ‘ತಾಡಾಸನ’ಕ್ಕೆ ಬಂದು ನಿಲ್ಲಬೇಕು. ಅಥವಾ ‘ವಿಪರೀತಚಕ್ರಾಸನ’ದ ಕ್ರಮವನ್ನು ಅನುಸರಿಸಬೇಕು.

 ಪರಿಣಾಮಗಳು  :

        ‘ಶೀರ್ಷಾಸನ ಒಂದರ’ಲ್ಲಿಯ ಪರಿಣಾಮಗಳ ಜೊತೆಗೆ, ಈ ಆಸನದಿಂದ ಇಡೀ ಬೆನ್ನದಂಡಿಯ ಎಲುಬುಗಳಿಗೆ ವ್ಯಾಯಾಮವು ದೊರಕುವುದು. ಇದರಲ್ಲಿ ಬೆನ್ನೆಲುಬಿರುವ ಭಾಗಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಕ್ತವೊದಗುವುದರಿಂದ ನರಗಳು ಬಲಯುತವಾಗುವುವು. ಇದರಲ್ಲಾಗುವ ಹಿಗ್ಗಿನಿಂದ ಕಿಬ್ಬೊಟ್ಟೆಯೋಳಗಿನ ಅಂಗಗಳಿಗೆ ಹೆಚ್ಚು ಲವಲವಿಕೆಯುಂಟಾಗುವುದು.