ಮನೆ ಆರೋಗ್ಯ ಹಾರ್ಟ್ ಫೇಲ್ಯೂರ್: ಭಾಗ 5

ಹಾರ್ಟ್ ಫೇಲ್ಯೂರ್: ಭಾಗ 5

0

★ಕೆಲವು ಸಂದರ್ಭಗಳಲ್ಲಿ ಹೃದಯದ ಶ್ರಮದ ಹೊರೆಯನ್ನು ತಗ್ಗಿಸುವ ಔಷಧಿಗಳನ್ನು (Vasodilator Drugs)ಹೃದಯದ ಸಂಕೋಚನ, ವಿಕಸನಗಳನ್ನು ಸಕ್ರಮಗೊಳಿಸುವ Digitals Drugs ಸಹ ಕೊಡಿಲಾಗುತ್ತದೆ.

Join Our Whatsapp Group

ಹೃದಯದ ವೈಫಲ್ಯ( ಹಾರ್ಟ್ ಫೆಲ್ಯೂರ್) ಹಟಾತ್ತಾಗಿ ಬಂದು, ಲಕ್ಷಣಗಳು ಮತಷ್ಟು ತೀವ್ರವಾಗಿರುವಾಗ ರೋಗಿಯ ಮನದ ಹೊಯ್ದಾಟವನ್ನು ಹೋಗಲಾಡಿಸಲು, ಏದುಸಿರನ್ನು  ತಗ್ಗಿಸಲು  ವೈದ್ಯರು ತುತ್ತು ಚಿಕಿತ್ಸೆಗೆ ಮೊದಲು ಮಾರ್ಫಿನ್ ಇಂಜೆಕ್ಷನ್ ಕೊಡಬಹುದು.

★ಮೊದಲು ಹಾರ್ಟ್ ಫೆಲ್ಯೂರ್ ಲಕ್ಷಣಗಳನ್ನು ಸರಿಪಡಿಸಿ,ನಂತರ ಡಾಕ್ಟರ್ ಚರ್ಯೆಯ ಹಿಂದಿನ ಮೂಲಕಾರಣಗಳನ್ನು ನಿವಾರಿಸಲು ಪ್ರಯತ್ನಿಸುತ್ತಾರೆ. ಹೃದಯದ ಕವಾಟ (Heart Valve)ಕೆಟ್ಟುಹೋಗಿದ್ದರೆ ಅದನ್ನು ಶಸ್ತ್ರಕ್ರಿಯ ಮೂಲಕ ಸರಿಮಾಡಲು ಪ್ರಯತ್ನಿಸುತ್ತಾರೆ.( ನಿಜಕ್ಕೂ ಹಾರ್ಡ್ ಫೇಲ್ಯೂರ್ ಲಕ್ಷಣಗಳು ತೀವ್ರವಾಗುವ ಮೊದಲೇ ಈ ಸರ್ಜರಿ ಮಾಡಿಸಿಕೊಳ್ಳುವುದು ಒಳ್ಳೆಯದು.)

★ಹೃದಯದ ವೈಫಲ್ಯ( ಹಾರ್ಟ್ ಫೇಲ್ಯೂರ್). ಮೂಲ ಕಾರಣಗಳಿಗೆ ಚಿಕಿತ್ಸೆ ಮಾಡುವುದೂ ಸಾಧ್ಯ. ಹೈಪರ್ ಟೆನ್ಷನ್( ಅಧಿಕ ರಕ್ತದೊತ್ತಡ ),ಹೃದಯದ ಅನಿಯಮಿತ ಬಡಿತ(Arrhythmia) ಇಂತಹವುಗಳನ್ನು ಔಷಧಿಗಳ ಮೂಲಕ,  ಮೂಲಕ ಹುಟ್ಟಿನಿಂದ ಬರುವ ಹೃದಯದ ಲೋಪಗಳನ್ನು(Congenital Septal Defects)ತೆರೆದ ಹೃದಯ ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಲು ಪ್ರಯತ್ನಿಸುತ್ತಾರೆ.

★ದೀರ್ಘಕಾಲದಿಂದ ಇರುವ Cardiomyopathy (ಹೃದಯದ ಸ್ನಾಯುಬೇನೆ )ಯಾಗಲಿ, ಕ್ರಾನಿಕ್ ಲಂಗ್ ಡಿಸೀಸ್ (ಶ್ವಾಸಕೋಶ ರೋಗ) ಆಗಲಿ ಇದ್ದರೆ ಮಾತ್ರ ಪರಿಸ್ಥಿತಿ ಅಷ್ಟು ಆಶಾಜನಕವಾಗಿರದು.

ಮುಂಜಾಗ್ರತ ಕಮ 

★ಧೂಮಪಾನದ ಅಭ್ಯಾಸವಿದ್ದರೆ ನಿಲ್ಲಿಸಬೇಕು. ಹಾಟ್ ಫೇಲ್ಯೂರ್ ಬರದಿರಲು, ಇಲ್ಲವೇ ಬರುವುದನ್ನು ಮುಂದೂಡಲು ಇದು ಲಕ್ಷಣ ರೇಖೆ.

★ಈಗಾಗಲೇ ಹಾರ್ಟ್ ಫೇಲ್ಯೂರ್ ಬಂದಿರುವವರು. ಇಲ್ಲವೇ ಅದು ಬರುವ ಅವಕಾಶ ಇದೆಯೆಂದು  ಎಚ್ಚರಿಸಲ್ಪಟ್ಟಿರುವವರು,ಈ ಕೆಳಗಿನ ಮುಂಜಾಗ್ರತೆಯನ್ನು ತೆಗೆದುಕೊಳ್ಳಬೇಕು

★ವಯಸ್ಸಿಗೆ ಎತ್ತರಕ್ಕೆ ತಕ್ಕಂತೆ ತೂಕವಿರುವಂತೆ ನೋಡಿಕೊಳ್ಳಬೇಕು.ಅಂದರೆ ತೂಕ ಹೆಚ್ಚಾಗಿದ್ದರೆ ಕಡಿಮೆ ಮಾಡಿಕೊಳ್ಳಬೇಕು.

★ಅಧಿಕ ದೈಹಿಕ ಶ್ರಮಕ್ಕೆ ಒಳಗಾಗಬಾರದು ಒಂದು ವೇಳೆ ಮಾಡಲೇ ಬೇಕಾಗಿ ಬಂದರೆ ನಿಧಾನವಾಗಿ ಮಾಡಬೇಕು.

★ಮೆಟ್ಟಿಲುಗಳನ್ನು ಹತ್ತುವಾಗ ಎಚ್ಚರಿಕೆಯಿಂದಿರಬೇಕು. ಹತ್ತಲೇ ಬೇಕಾಗಿ ಬಂದಾಗ ಮಧ್ಯೆ ಮಧ್ಯೆ ನಿಂತು ಮಿಶ್ರಮಿಸಬೇಕು.ಎತ್ತರದ ಪ್ರದೇಶದಲ್ಲಿ  ಹತ್ತುವಾಗ ಗಾಳಿಗೆ ಎದುರಾಗಿ ನಡೆಯುತ್ತಿರುವಾಗ ಕೂಡಾ ಹೀಗೆ ಮಾಡಿ.

★ನೀರು ಅಥವಾ ದ್ರವ ಪದಾರ್ಥಗಳನ್ನು ಹೆಚ್ಚು ಕುಡಿಯಬಾರದು.

★ಖಂಡಿತವಾಗಿ ವೈದ್ಯರು ಸೂಚಿಸಿದ ರೀತಿಯಲ್ಲಿ ನಿಯಮಿತವಾಗಿ ಆಯಾ ವೇಳೆಗೆ ಸರಿಯಾಗಿ ಔಷಧಿಗಳನ್ನು ತೆಗೆದುಕೊಳ್ಳಬೇಕು

ಅಪಾಯ ಎಲ್ಲಿಯವರೆಗೆ?

★ ಅಪಾಯವೆನ್ನುವುದು ಹಾರ್ಟ್ ಫೇಲ್ಯೂರ್ ಯಾವ ಸ್ಥಿತಿಯಲ್ಲಿ ಯಾವ ಮಟ್ಟದಲ್ಲಿದೆ ಎಂಬುದನ್ನು ಅವಲಂಬಿಸಿರುತ್ತದೆ.

     ★ಮೂಲ ಕಾರಣವನ್ನು ಸರಿಪಡಿಸಿದಾಗ ಅಂತಹ ಅಪಾಯವೇನೂ ಇರದು. ಉದಾಹರಣೆಗೆ ಥೈರಾಯಿಡ್ ರೋಗ,ಹೃದಯ ಕವಾಟ ರೋಗ (Valvular Disease)ಹುಟ್ಟಿನಿಂದ ಬರುವ ಹೃದ್ರೋಗ(Congenital Heart Disease)ಅಧಿಕ ರಕ್ತದೊತ್ತಡ (ಹೈ ಬಿಪಿ) ಮೊದಲಾದವು .