Saval TV on YouTube
ಅಹಮದಾಬಾದ್(ಗುಜರಾತ್): ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರ ಅಂತ್ಯ ಸಂಸ್ಕಾರ ಅಹಮದಾಬಾದ್’ನಲ್ಲಿ ನಡೆಯಿತು.
ನರೇಂದ್ರ ಮೋದಿ ಮತ್ತು ಅವರ ಹಿರಿಯ ಸಹೋದರ ಸೋಮಾಭಾಯಿ ಅವರು ಹೀರಾಬೆನ್ ಅವರ ಪಾರ್ಥಿವ ಶರೀರಕ್ಕೆ ‘ಅಗ್ನಿ ಸ್ಪರ್ಶ ‘ ನೀಡಿದರು.
ದೆಹಲಿಯಿಂದ ಮುಂಜಾನೆ ವಿಮಾನದಲ್ಲಿ ಬಂದ ಪ್ರಧಾನಿಯವರು ತಮ್ಮ ತಾಯಿಗೆ ಪುಷ್ಪ ನಮನ ಸಲ್ಲಿಸಿದರು. ತಾಯಿಯ ಅಂತಿಮ ಯಾತ್ರೆ ವೇಳೆ, ಅವರ ಪಾರ್ಥಿವ ಶರೀರಕ್ಕೆ ಹೆಗಲುಕೊಟ್ಟರು. ಆ ಬಳಿಕ ಅಹಮದಾಬಾದ್’ನ ಶವಾಗಾರದಲ್ಲಿ ಅಂತಿಮ ವಿಧಿ ವಿಧಾನಗಳನ್ನು ಪೂರೈಸಲಾಯಿತು.
ಎಲ್ಲ ಸಹೋದರರ ಜತೆಗೂಡಿ ತಾಯಿ ಹೀರಾಬೆನ್ ಅವರ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಿದರು. ಹಿಂದು ಸನಾತನ ಪದ್ಧತಿಯಂತೆ ಅಂತಿಮ ವಿಧಿ ವಿಧಾನಗಳನ್ನು ಪೂರೈಸಲಾಯಿತು.
ಮಾಜಿ ಮುಖ್ಯಮಂತ್ರಿ ಶಂಕರಸಿಂಹ ವಘೇಲಾ ಅವರು ಸ್ಮಶಾನದಲ್ಲಿ ಪ್ರಧಾನಮಂತ್ರಿಯವರೊಂದಿಗೆ ಖುದ್ದು ಸಂತಾಪ ಸೂಚಿಸಿದರು.