ಮನೆ ಆರೋಗ್ಯ ಮಧುಮೇಹದಲ್ಲಿ ಕಾಡುವ ಪಾದದ ಹುಣ್ಣಿನ ನಿಯಂತ್ರಣಕ್ಕೆ ಇಲ್ಲಿದೆ ಪರಿಹಾರ

ಮಧುಮೇಹದಲ್ಲಿ ಕಾಡುವ ಪಾದದ ಹುಣ್ಣಿನ ನಿಯಂತ್ರಣಕ್ಕೆ ಇಲ್ಲಿದೆ ಪರಿಹಾರ

0

ಮಧುಮೇಹಿಗಳಲ್ಲಿ ಹೆಚ್ಚಾಗಿ ಕಂಡುಬರುವ ಗಂಭೀರ ಸಮಸ್ಯೆ ಎಂದರೆ ಅದು ಪಾದದ ಹುಣ್ಣು ಅಥವಾ ಫೂಟ್‌ ಅಲ್ಸರ್‌. ಇದನ್ನು ಆರಂಭದಲ್ಲಿಯೇ ನಿಯಂತ್ರಿಸುವುದು ಮುಖ್ಯ. ಗ್ಯಾಂಗ್ರೀನ್‌ ಆಗುವ ಸಾಧ್ಯತೆ ಇರುತ್ತದೆ. ಹಾಗಾದರೆ ಈ ಪಾದದ ಹುಣ್ಣನ್ನು ಹೇಗೆ ನಿಯಂತ್ರಿಸಬಹುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಸಾಮಾನ್ಯವಾಗಿ ಡಯಾಬಿಟೀಸ್‌ ಇರುವವರು ಆದಷ್ಟು ಗಾಯಗಳನ್ನು ಮಾಡಿಕೊಳ್ಳಬೇಡಿ ಎಂದು ವೈದ್ಯರು ಸಲಹೆ ನೀಡುತ್ತಾರೆ. ಏಕೆಂದರೆ ಮಧುಮೇಹಿಗಳ ಚರ್ಮಕ್ಕೆ ಒಮ್ಮೆ ಗಾಯವಾದರೆ ಅದನ್ನು ಗುಣಪಡಿಸುವುದು ಕಷ್ಟ. ಅದು ಹುಣ್ಣಾಗಿ ಪರಿಣಮಿಸಬಹುದು. ಅದರಲ್ಲೂ ಪಾದದ ಹುಣ್ಣು ಹೆಚ್ಚು ಅಪಾಯಕಾರಿಯಾಗಿದೆ. ಇದು ತೆರೆದ ಹುಣ್ಣು ಅಥವಾ ಗಾಯವಾಗಿದ್ದು, ಇದು ಮಧುಮೇಹ ಹೊಂದಿರುವ ಸುಮಾರು 15 ಪ್ರತಿಶತದಷ್ಟು ರೋಗಿಗಳಲ್ಲಿ ಕಂಡುಬರುತ್ತದೆ ಮತ್ತು ಇದು ಸಾಮಾನ್ಯವಾಗಿ ಪಾದದ ಕೆಳಭಾಗದಲ್ಲಿ ಉಂಟಾಗುತ್ತದೆ. ಪಾದದ ಹುಣ್ಣನ್ನು ಅಭಿವೃದ್ಧಿಪಡಿಸುವವರಲ್ಲಿ, ಆರು ಪ್ರತಿಶತದಷ್ಟು ಜನರು ಸೋಂಕು ಅಥವಾ ಇತರ ಹುಣ್ಣು-ಸಂಬಂಧಿತ ತೊಡಕುಗಳಿಗೆ ಒಳಗಾಗುತ್ತಾರೆ.

ಹುಣ್ಣಿಗೆ ಕಾರಣ

  • ಮಿತಿಮೀರಿದ ಮಧುಮೇಹದಿಂದ ಪಾದದ ಹುಣ್ಣು ಉಂಟಾಗುತ್ತದೆ
  • ಮಧುಮೇಹದಲ್ಲಿ ಪಾದದ ಹುಣ್ಣಿಗೆ ಸಾಮಾನ್ಯ ಕಾರಣಗಳೆಂದರೆ ಅಸಮರ್ಪಕ ಗ್ಲೈಸೆಮಿಕ್ ನಿಯಂತ್ರಣ
  • ಪಾದದ ಆರೈಕೆ ಸರಿಯಾಗಿ ಮಾಡದೇ ಇರುವುದು
  • ಸರಿಯಾಗಿ ಹೊಂದುವ ಚಪ್ಪಲಿಗಳನ್ನು ಧರಿಸದಿರುವುದು
  • ಇತರ ನರಕ್ಕೆ ಸಂಬಂಧಿಸಿದ ಸಮಸ್ಯೆ ಮತ್ತು ರಕ್ತಪರಿಚಲನೆ ಸರಿಯಾಗಿ ಆಗದಿರುವುದರಿಂದ
  • ಚರ್ಮವನ್ನು ಸರಿಯಾಗಿ ಆರೈಕೆ ಮಾಡದೆ ಒಣ ಚರ್ಮ ಉಂಟಾಗಿ ಅದು ಸುಲಿದು ಹುಣ್ಣಿಗೆ ಕಾರಣವಾಗಬಹುದು.

ಹುಣ್ಣಿನ ಲಕ್ಷಣಗಳು:

  • ಹುಣ್ಣು ಆರಂಭವಾಗುವ ಜಾಗದಲ್ಲಿ ಚರ್ಮ ಕಪ್ಪಾಗುವುದು
  • ಆ ಜಾಗದಲ್ಲಿ ಬಿಸಿ ಅಥವಾ ಶೀತವನ್ನು ಗ್ರಹಿಸುವ ಸಾಮರ್ಥ್ಯ ಕಡಿಮೆಯಾಗುವುದು
  • ಮರಗಟ್ಟುವಿಕೆ
  • ನೋವು
  • ಜುಮ್ಮೆನಿಸುವಿಕೆ

ಹುಣ್ಣಿನ ಪರಿಹಾರ:

  • ಕಾಲು ಅಥವಾ ಪಾದದ ಹುಣ್ಣನ್ನು ನಿಯಂತ್ರಣದಲ್ಲಿಡಲು ಮೊದಲು ಮಾಡಬೇಕಾದ ಕೆಲಸವೇ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು.
  • ಪ್ರತಿನಿತ್ಯ ಕಾಲುಗಳನ್ನು ಶುಚಿಯಾಗಿರಿಸಿ ಆರೈಕೆ ಮಾಡಿಕೊಳ್ಳುವುದು. ಗಾಯವಾದರೆ ಅದನ್ನು ಬೇಗನೆ ಗುಣಪಡಿಸಿಕೊಳ್ಳುವುದು, ದಿನನಿತ್ಯ ಸ್ವಚ್ಛವಾದ ಸಾಕ್ಸ್‌ಗಳನ್ನು ಧರಿಸುವ ಮೂಲಕ ಪಾದಗಳಿಗೆ ಆದಷ್ಟು ಗಾಯವಾಗದಂತೆ ಜೋಪಾನವಾಗಿ ನೋಡಿಕೊಳ್ಳಬೇಕು.
  • ಕಾಲುಗಳನ್ನು ರಾಸಾಯನಿಕವಿಲ್ಲದ ನೈಸರ್ಗಿಕ ಸೋಪ್‌ಗಳಿಂದ ತೊಳೆದು, ಕಾಟನ್‌ ಬಟ್ಟೆಯಿಂದ ನೀರಿನಾಂಶವಿಲ್ಲದಂತೆ ಒಣಗಿಸಿಕೊಳ್ಳಿ. ಗಾಯವಾಗಿದ್ದರೆ ಮೆತ್ತನೆಯ ಬಟ್ಟೆಯಿಂದ ನೀರು ಆರುವಂತೆ ಒರೆಸಿಕೊಳ್ಳಿ.
  • ನಿಯಮಿತವಾಗಿ ಉಗುರುಗಳನ್ನು ಕತ್ತರಿಸುತ್ತಿರಿ. ಏಕೆಂದರೆ ನಿಮ್ಮ ಉಗುರುಗಳೇ ನಿಮ್ಮ ಚರ್ಮಕ್ಕೆ ತಾಗಿ ಗಾಯವಾಗುವ ಸಾಧ್ಯತೆ ಇರುತ್ತದೆ. ಅಥವಾ ಗಾಯಗಳಿಗೆ ತಾಗಿ ನಂಜು ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಉಗುರುಗಳನ್ನು ಬೆಳೆಯದಂತೆ ಕಟ್‌ ಮಾಡುತ್ತಿರಿ.
  • ಆದಷ್ಟು ಪಾದಗಳ ಹುಣ್ಣು ಅಥವಾ ಗಾಯ ಗ್ಯಾಂಗ್ರೀನ್‌ಗೆ ತಿರುಗದಂತೆ ಕಾಳಜಿವಹಿಸಿ. ಇದರಿಂದ ಗಂಭೀರ ಅಪಾಯವನ್ನು ತಪ್ಪಿಸಬಹುದಾಗಿದೆ.

ಹಿಂದಿನ ಲೇಖನಉಪರಾಷ್ಟ್ರಪತಿ ಚುನಾವಣೆ: ವಿಪಕ್ಷಗಳ ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವ ಆಯ್ಕೆ
ಮುಂದಿನ ಲೇಖನಶ್ರೀ ಶಿವ ರಕ್ಷಾ ಸ್ತೋತ್ರ