ಮನೆ ರಾಜಕೀಯ ಅತ್ಯಾಚಾರ ಹೆಚ್ಚಲು ಮಹಿಳೆಯರ ಡ್ರೆಸ್ ಕಾರಣ: ವಿವಾದಾತ್ಮಕ ಹೇಳಿಕೆಗೆ ಕ್ಷಮೆ ಕೇಳಿದ ಶಾಸಕ ಎಂಪಿ ರೇಣುಕಾಚಾರ್ಯ

ಅತ್ಯಾಚಾರ ಹೆಚ್ಚಲು ಮಹಿಳೆಯರ ಡ್ರೆಸ್ ಕಾರಣ: ವಿವಾದಾತ್ಮಕ ಹೇಳಿಕೆಗೆ ಕ್ಷಮೆ ಕೇಳಿದ ಶಾಸಕ ಎಂಪಿ ರೇಣುಕಾಚಾರ್ಯ

0

ನವದೆಹಲಿ: ಅತ್ಯಾಚಾರ ಹೆಚ್ಚಲು ಮಹಿಳೆಯರ ಡ್ರೆಸ್ ಕಾರಣ ಎಂದು ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿ ಬಳಿಕ ಕ್ಷಮೆ ಕೇಳಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ, ಮಹಿಳೆಯರ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ. ಮಹಿಳೆಯರ ಬಟ್ಟೆಯಿಂದ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತೆ. ಹೆಣ್ಣುಮಕ್ಕಳು ಮೈತುಂಬಾ ಬಟ್ಟೆ ಹಾಕಿಕೊಂಡು ಬರಬೇಕು  ಮಹಿಳೆಯರನ್ನ ತಾಯಿ ಸ್ಥಾನದಲ್ಲಿ ನೋಡುತ್ತೇವೆ ಎಂದರು.

ಪ್ರಿಯಾಂಕಾ ಗಾಂಧಿ ಬಿಕನಿ ಪದ ಬಳಸಿದ್ದು ತಪ್ಪು.  ಇದು ಕೀಳುಮಟ್ಟದ ಹೇಳಿಕೆ. ಪ್ರಿಯಾಂಕಾ ಗಾಂಧಿ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.  ಹಾಗೆಯೇ ರಾಜಕಾರಣದಲ್ಲಿ ನಾವು ಕೇಸರಿಕರಣ ಮಾಡುತ್ತೇವೆ ಶಿಕ್ಷಣದಲ್ಲಿ ನಾವು ಕೇಸರಿಕರಣ ಮಾಡಲ್ಲ ಎಂದರು.

ಇನ್ನು ಅತ್ಯಾಚಾರ ಹೆಚ್ಚಲು ಮಹಿಳೆಯರ ಡ್ರೆಸ್ ಕಾರಣ ಎಂಬ ಹೇಳಿಕೆ ನೀಡಿ ಟೀಕೆಗೆ ಗುರಿಯಾದ ಶಾಸಕ ಎಂಪಿ ರೇಣುಕಾಚಾರ್ಯ ನಂತರ  ನನ್ನ ಹೇಳಿಕೆಯಿಂದ ನೋವಾಗಿದ್ದರೇ ಕ್ಷಮೆ ಇರಲಿ ಎಂದು ಕ್ಷಮೆಯಾಚಿಸಿದರು.

ಹಿಂದಿನ ಲೇಖನಶಾಲೆಯಲ್ಲಿ ಧರ್ಮ ಪ್ರದರ್ಶನಕ್ಕೆ ಅವಕಾಶವಿಲ್ಲ: ಎಂಎಲ್‍ಸಿ ಹೆಚ್.ವಿಶ್ವನಾಥ್
ಮುಂದಿನ ಲೇಖನಹಿಜಾಬ್​​ ಪ್ರಕರಣ: ಮಹತ್ವದ ನಿರ್ಧಾರ ಕೈಗೊಂಡ ಹೈಕೋರ್ಟ್