ಮನೆ ಕಾನೂನು ಶುಕವಾರ, ರಂಜಾನ್‌ ವೇಳೆ ಹಿಜಾಬ್‌ಗೆ ಅನುಮತಿ ನೀಡಿ: ಹೈಕೋರ್ಟ್‌ಗೆ ನೂತನ ಅರ್ಜಿ ಸಲ್ಲಿಕೆ

ಶುಕವಾರ, ರಂಜಾನ್‌ ವೇಳೆ ಹಿಜಾಬ್‌ಗೆ ಅನುಮತಿ ನೀಡಿ: ಹೈಕೋರ್ಟ್‌ಗೆ ನೂತನ ಅರ್ಜಿ ಸಲ್ಲಿಕೆ

0

ಬೆಂಗಳೂರು: ಶುಕ್ರವಾರ ಮತ್ತು ಪವಿತ್ರ ರಂಜಾನ್ ತಿಂಗಳಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಕೋರಿ ರ್ನಾಟಕ ಹೈಕೋರ್ಟ್‌ನಲ್ಲಿ ಹೊಸ ಅರ್ಜಿಯನ್ನು ಸಲ್ಲಿಸಲಾಗಿದೆ.

ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಪೀಠ, ಈ ಅರ್ಜಿಯನ್ನು ಪರಿಗಣಿಸಲು ಸಮ್ಮತಿಸಿದೆ.

ಹೈಕೋರ್ಟಿನ ಮಧ್ಯಂತರ ಆದೇಶವು ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ತೊಡುಗೆಗೆ ನಿಷೇಧ ಹೇರಿದೆ. ಕಾಲೇಜುಗಳಲ್ಲಿ ಹಿಜಾಬ್ ಧರಿಸಬಹುದೇ ಎಂದು ಹೈಕೋರ್ಟ್ ಅಂತಿಮವಾಗಿ ತೀರ್ಪು ನೀಡುವವರೆಗೂ ಈ ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ಅಥವಾ ಕೇಸರಿ ಶಾಲುಗಳನ್ನು ಧರಿಸುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ತೀರ್ಪಿನಲ್ಲಿ ಹೇಳಿದೆ.

ಹೊಸ ಅರ್ಜಿಯಲ್ಲಿರುವುದೇನು?

ರಾಜ್ಯದ ಮುಸ್ಲಿಂ ಬಾಲಕಿಯರ ಪರವಾಗಿ ಹಾಜರಾದ ಅರ್ಜಿದಾರ ಡಾ.ವಿನೋದ್ ಕುಲಕರ್ಣಿ, “ಮಧ್ಯಂತರ ಆದೇಶದ ಭಾಗವಾಗಿ ಮುಸ್ಲಿಂ ಹುಡುಗಿಯರು ಕನಿಷ್ಠ ಶುಕ್ರವಾರ, ಜುಮಾ ದಿನದಂದು, ಮುಸ್ಲಿಮರಿಗೆ ಅತ್ಯಂತ ಮಂಗಳಕರ ದಿನವಾದ ಸಮಯದಲ್ಲಿಯಾದರೂ ಹಿಜಾಬ್‌ ಧರಿಸಲು ಅವಕಾಶ ಮಾಡಿ ಆದೇಶ ಹೊರಡಿಸಬೇಕು ಎಂದು ಮನವಿ ಮಾಡುತ್ತೇವೆ. ಪವಿತ್ರ ರಂಜಾನ್ ತಿಂಗಳು, ಶೀಘ್ರದಲ್ಲೇ ಬರಲಿದೆ,” ಎಂದು ತಿಳಿಸಿದ್ದಾರೆ.

ಮುಸ್ಲಿಂ ಹುಡುಗಿಯರು ಸೂಚಿಸಿದ ಯಾವುದೇ ಸಮವಸ್ತ್ರವನ್ನು ಧರಿಸುತ್ತಾರೆ ಎಂಬ ಅವರ ಮನವಿಗೆ ವಿರುದ್ಧವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಉಲ್ಲೇಖ ಮಾಡಿದಾಗ ಅದಕ್ಕೆ ಪ್ರತಿಕ್ರಿಯೆ ನೀಡಿದ ಡಾ ಕುಲಕರ್ಣಿ, “ಹಿಜಾಬ್ ಸಮವಸ್ತ್ರದ ಭಾಗವಾಗಿದೆ,” ಎಂದು ಹೇಳಿದರು. ಇನ್ನು ಹಿಜಾಬ್ ಅನ್ನು ನಿಷೇಧಿಸುವುದು “ಕುರಾನ್ ಅನ್ನು ನಿಷೇಧಿಸಿದಂತೆ” ಎಂದು ರಾಜ್ಯದ ಮುಸ್ಲಿಂ ಬಾಲಕಿಯರ ಪರವಾಗಿ ಹಾಜರಾದ ಅರ್ಜಿದಾರ ಡಾ.ವಿನೋದ್ ಕುಲಕರ್ಣಿ ಪ್ರತಿಪಾದಿಸಿದಾಗ, ನ್ಯಾಯಾಧೀಶರು “ಸ್ವಲ್ಪ ಹೆಚ್ಚಿಗೆ ಎಳೆಯಲಾಗುತ್ತಿದೆ,” ಎಂದು ಅಭಿಪ್ರಾಯಿಸಿದ್ದಾರೆ.

ಕುರಾನ್‌ನಿಂದ ಹಿಜಾಬ್ ಅನ್ನು ಶಿಫಾರಸು ಮಾಡಲಾಗಿದೆಯೇ ಎಂಬ ಚರ್ಚೆ ನಡೆಯುತ್ತಿದೆ. ಖುರಾನ್‌ನಲ್ಲಿ ಇದನ್ನು ಎಲ್ಲಿ ಹೇಳಲಾಗಿದೆ ಎಂಬುದನ್ನು ತೋರಿಸಬಹುದೇ ಎಂದು ಮುಖ್ಯ ನ್ಯಾಯಮೂರ್ತಿಗಳ ಪ್ರಶ್ನೆಗೆ, ಡಾ ಕುಲಕರ್ಣಿ ಪ್ರತಿಕ್ರಿಯಿಸಿದರು. “ನಾನು ಧರ್ಮನಿಷ್ಠ ಬ್ರಾಹ್ಮಣ, ನನ್ನ ಸಲ್ಲಿಕೆಯು ಕುರಾನ್ ಅನ್ನು ನಿಷೇಧಿಸುವ ಬಗ್ಗೆ ಇರಬಹುದು. ರಂಜಾನ್‌ ಸಂದರ್ಭದಲ್ಲಿ ಹಿಜಾಬ್‌ ಧರಿಸಲು ಅವಕಾಶ ನೀಡಿ ದಯವಿಟ್ಟು ಆದೇಶವನ್ನು ನೀಡಿ ಎಂಬುದು ನನ್ನ ಸಲ್ಲಿಕೆಯಾಗಿದೆ.

“ಶುಕ್ರವಾರದಂದು ಅವರಿಗೆ ಹಿಜಾಬ್ ಅನ್ನು ಅನುಮತಿಸಬೇಕೆಂದು ನೀವು ಬಯಸುತ್ತೀರಾ? ನಿಮ್ಮ ವಾದವನ್ನು ನಾವು ಪರಿಗಣಿಸುತ್ತೇವೆ,” ಎಂದು ಮುಖ್ಯ ನ್ಯಾಯಮೂರ್ತಿ ಉತ್ತರಿಸಿದ್ದು ವಿಚಾರಣೆಯನ್ನು ಮುಂದೂಡಿಕೆ ಮಾಡಿದ್ದಾರೆ. ಇನ್ನು ಈಗಾಗಲೇ ತಾಂತ್ರಿಕ ಕಾರಣಗಳಿಂದಾಗಿ ಎರಡು ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಲಾಗಿದೆ. ಒಂದು ಅರ್ಜಿಯ ಬಗ್ಗೆ ಪ್ರತಿಕ್ರಿಯಿಸಿದ ಪೀಠ, ನಿಮ್ಮ ಅರ್ಜಿ ನಿಯಮದ ಪ್ರಕಾರವಿಲ್ಲ. ಹೈಕೋರ್ಟ್ ಯಾವ ನಿಯಮ ಅನುಸರಿಸಬೇಕೆಂದು ಸೂಚಿಸಿದೆಯೇ ಅದರ ಪ್ರಕಾರ ಸಲ್ಲಿಕೆಯಾಗಿಲ್ಲ. ಹೀಗಾಗಿ ನಾವು ಈ ಪಿಐಎಲ್ ಅನ್ನು ವಜಾಗೊಳಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಅದೇ ರೀತಿ ತಾಂತ್ರಿಕ ಅಂಶದ ಆಧಾರದ ಮೇಲೆ ನ್ಯಾಯವಾದಿಯೊಬ್ಬರ ಅರ್ಜಿಯನ್ನೂ ವಜಾಗೊಳಿಸಿತು.

ಹಿಂದಿನ ಲೇಖನಫೆ.25ರಂದು ಯುವರಾಜ ಕಾಲೇಜಿನ 8ನೇ ಪದವಿ ಪ್ರದಾನ ಸಮಾರಂಭ
ಮುಂದಿನ ಲೇಖನನೈರುತ್ಯ ರೈಲ್ವೆ ವಿಭಾಗದಲ್ಲಿ ಡಿಜಿಟಲ್ ಪಾವತಿ ಮೂಲಕ ಟಿಕೆಟ್ ಪಡೆಯಲು ಅವಕಾಶ