ತುಮಕೂರು ಜಿಲ್ಲೆಯಲ್ಲಿ ರಾಷ್ಟ್ರಪಕ್ಷಿ ನವಿಲುಗಳ ಸರಣಿ ಸಾvin ಪ್ರಕರಣ ಇದೀಗ ಗಂಭೀರ ತಿರುವು ಪಡೆದುಕೊಂಡಿದ್ದು ಎನ್ನಲಾಗಿದೆ, ಹಕ್ಕಿಜ್ವರ ಕಾರಣ ಎಂಬುದು ಅಧಿಕೃತವಾಗಿ ದೃಢಪಟ್ಟಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದರೂ, ಸಂಬಂಧಿಸಿದ ಇಲಾಖೆಗಳು ಇದರ ಕುರಿತ್ತಾಗಿ ತಕ್ಷಣವೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿವೆ ಎನ್ನಲಾಗಿದೆ.
ತುಮಕೂರು ತಾಲೂಕಿನ ಊರ್ಡಿಗೆರೆ ಹೋಬಳಿಯ ಕೋಳಿಹಳ್ಳಿ ಗ್ರಾಮ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ನವಿಲುಗಳ ಸಾವುಗಳು ವರದಿಯಾಗುತ್ತಿದ್ದವು. ಈ ಕುರಿತ್ತಾಗಿ ಸತ್ತ ನವಿಲುಗಳ ಅಂಗಾಂಶ ಮಾದರಿಗಳನ್ನು ಪರೀಕ್ಷೆಗಾಗಿ ಭೋಪಾಲ್ನ ರಾಷ್ಟ್ರೀಯ ಉಚ್ಚ ಸುರಕ್ಷಾ ಪಶುರೋಗ ಸಂಸ್ಥೆ ಗೆ ಕಳುಹಿಸಲಾಗಿತ್ತು ಎನ್ನಲಾಗಿತ್ತು . ಇದೀಗ ವರದಿಯು ಬಂದಿದ್ದು H5N1 ವೈರಸ್ ಪತ್ತೆಯಾಗಿರುವಿದರಿಂದ ನವಿಲುಗಳು ಸಾವಿಗೀಡಾಗಿವೆ ಎಂದು ದೃಢಪಟ್ಟಿದ್ದು, ಹಕ್ಕಿಜ್ವರವೇ ಈ ಸಾವುಗಳಿಗೆ ಕಾರಣ ಎಂದು ದೃಢಪಟ್ಟಿದೆ ಎಂಬುದಾಗಿ ತಿಳಿದುಬಂದಿದೆ. ಈ ಕುರಿತು ಮಾಹಿತಿ ನೀಡಿದ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ಶಿವಪ್ರಸಾದ್, ವರದಿ ಸಿಕ್ಕ ತಕ್ಷಣವೇ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕೋಳಿಹಳ್ಳಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಶೇಷ ನಿಗಾವಹಿಸಲಾಗಿದ್ದು, ಕೋಳಿ ಸಾಕಾಣಿಕೆ ಕೇಂದ್ರಗಳ ಮೇಲೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂಬ ವಿಷಯ ತಿಳಿದು ಬಂದಿದೆ. ಯಾವುದೇ ರೀತಿಯ ಸೋಂಕು ವ್ಯಾಪಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕರಿಗೆ ಜಾಗೃತಿ
ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಹೈ ಅಲರ್ಟ್ ಘೋಷಿಸಲು ನಿರ್ದೇಶನ ನೀಡಲಾಗಿದ್ದು. ಜಿಲ್ಲಾಡಳಿತವೂ ಕೂಡ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಮುಂದಾಗಿದ್ದು ಎನ್ನಲಾಗಿದೆ, ಸತ್ತ ಪಕ್ಷಿಗಳನ್ನು ಯಾವುದೇ ಕಾರಣಕ್ಕೂ ಮುಟ್ಟಬಾರದು ಎಂದು ಕಡ್ಡಾಯವಾಗಿ ಸೂಚಿಸಿದೆ. ಯಾವುದೇ ಅನುಮಾನಾಸ್ಪದ ಸಾವುಗಳು ಕಂಡು ಬಂದರೆ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳಿಗೆ ವಿಷಯ ನೀಡುವಂತೆ ಮನವಿ ಮಾಡಲಾಗಿದೆ ಎನ್ಲಾಗುತ್ತದೆ.
ಡಾ. ಶಿವಪ್ರಸಾದ್ ಅವರು ಜನರಲ್ಲಿ ಅನಗತ್ಯ ಭೀತಿ ಬೇಡ ಎಂದು ಸ್ಪಷ್ಟಪಡಿಸಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಸಾಕು ಪ್ರಾಣಿ-ಪಕ್ಷಿಗಳ ವಧೆಗೆ ಯಾವುದೇ ಆದೇಶ ಇಲ್ಲ ಎಂದು ಹೇಳಿದ್ದಾರೆ. ರಾಷ್ಟ್ರಪಕ್ಷಿಗಳಿಗೂ ಹಾಗೂ ಸಾಕು ಪ್ರಾಣಿಗಳಿಗೆ ತಕ್ಷಣದ ಅಪಾಯ ಕಂಡುಬಂದಿಲ್ಲದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿಗಾ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಮೂಲಕ ಪರಿಸ್ಥಿತಿಯನ್ನು ಹತೋಟಿಯಲ್ಲಿಡಲಾಗುತ್ತಿದೆ ಎಂದು ವಿವರಿಸಿದ್ದಾರೆ ಎನ್ನಲಾಗಿದೆ.















