ಮನೆ ರಾಷ್ಟ್ರೀಯ ತನ್ನ ಸಹೋದರ ಆತನ ಪುತ್ರನನ್ನು ಗುಂಡಿಕ್ಕಿ ಕೊಂದ ಮಾಜಿ ಸೈನಿಕ

ತನ್ನ ಸಹೋದರ ಆತನ ಪುತ್ರನನ್ನು ಗುಂಡಿಕ್ಕಿ ಕೊಂದ ಮಾಜಿ ಸೈನಿಕ

0

ಭೋಪಾಲ್: ಮನೆಯಲ್ಲಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದಾಗ ಮಧ್ಯಪ್ರವೇಶಿಸಿದ ನಂತರ ಮಾಜಿ ಸೈನಿಕನೊಬ್ಬ ತನ್ನ ಸಹೋದರ ಮತ್ತು ಆತನ ಪುತ್ರನನ್ನು ಗುಂಡಿಕ್ಕಿ ಕೊಂದಿದ್ದು,  ಮಗಳನ್ನು ಗಾಯಗೊಳಿಸಿದ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.

ಲಾಲೇಪುರ ಗ್ರಾಮದಲ್ಲಿ ಶುಕ್ರವಾರ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಆರೋಪಿ ರಾಮಧರ್ ತಿವಾರಿ (50) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸನೋಧಾ ಪೊಲೀಸ್ ಠಾಣೆಯ ಇನ್ಸ್‌ ಪೆಕ್ಟರ್ ಆರ್‌ ಪಿ ದುಬೆ ತಿಳಿಸಿದ್ದಾರೆ.

ರಾಮಧರ್ ಅವರು ಪತ್ನಿ ಸಂಧ್ಯಾ ಅವರೊಂದಿಗೆ ಜಗಳವಾಡುತ್ತಿದ್ದಾಗ ಅವರ ಅಣ್ಣ ರಾಮಮಿಲನ್ (62) ಮತ್ತು ಅವರ ಪುತ್ರ ಅಜ್ಜು (36) ಅವರನ್ನು ಸಮಾಧಾನಪಡಿಸಲು ಮಧ್ಯಸ್ಥಿಕೆ ವಹಿಸಿದರು. ಆರೋಪಿ ಇಬ್ಬರ ಮೇಲೆ ಗುಂಡು ಹಾರಿಸಿದ್ದು, ಮಗಳು ವರ್ಷಾ (24) ಅವರ ಮೇಲೂ ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಆರೋಪಿಗೆ ನಾಲ್ವರು ಪುತ್ರಿಯರು ಹಾಗೂ ಓರ್ವ ಪುತ್ರನಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿಯ ವೇಳೆ ಅವರ ಇಬ್ಬರು ಮಕ್ಕಳು ಶಾಲೆಯಲ್ಲಿದ್ದರು.

ಹಿಂದಿನ ಲೇಖನನಟ ಸುದೀಪ್ ಅವರ 46ನೇ ಚಿತ್ರಕ್ಕೆ ಟೈಟಲ್ ಫಿಕ್ಸ್: ‘ಮ್ಯಾಕ್ಸ್’ ಎಂದು ನಾಮಕರಣ
ಮುಂದಿನ ಲೇಖನಬಾಂಗ್ಲಾದೇಶ ವಿರುದ್ಧದ ಏಕದಿನದ ಸರಣಿಗೆ ನ್ಯೂಜಿಲ್ಯಾಂಡ್ ತಂಡ ಪ್ರಕಟ: ಲ್ಯೂಕಿ ಫರ್ಗ್ಯುಸನ್ ನಾಯಕ