ಮನೆ ಪೌರಾಣಿಕ ಭೃಗುವಂಶ ಚರಿತ್ರೆ

ಭೃಗುವಂಶ ಚರಿತ್ರೆ

0

ಪರಾಶರರು “ಮೈತ್ರೇಯಾ ! ಬೃಗು ಮಹರ್ಷಿಯು ದಕ್ಷ ಪ್ರಜಾಪತಿಯ ಮಗಳಾದ ಖ್ಯಾತಿಯನ್ನು ವಿವಾಹವಾದ ಮೇಲೆ ಆತನಿಗೆ ಧಾತ, ವಿಧಾತರು ಜನಿಸಿದರು. ಅವರಿಬ್ಬರೂ ಮೇರು ಪರ್ವತ ರಾಜನ ಪುತ್ರಿಯರಾದ ಆಯತ, ನಿಯತಿ ಎಂಬುವವರು ಪತ್ನಿಯರಾದರು. ಅವರಲ್ಲಿ ಆಯತಿಗೆ ಪ್ರಾಣನು, ನಿಯತಿಗೆ ಮೃಕಂಡ ಮಹರ್ಷಿಯು ಆತನಿಗೆ ಮಾರ್ಕಂಡೇಯನ್ನು ಜನಿಸಿದನು. ಪ್ರಾಣನಿಗೆ ವೇದಶಿರನು, ಅವನಿಗೆ ದ್ಯುತಿಮಂತನು ಅವನಿಗೆ ಹುಟ್ಟಿ ವಂಶವು ಅಭಿವೃದ್ಧಿಯನ್ನು ಹೊಂದಿತು.

Join Our Whatsapp Group

ಮರೀಚಿಗೆ ಸಂಬೂತಿಯ ಗರ್ಭದಲ್ಲಿ ಪೌರ್ಣಮಾಸನು, ಆತನಿಗೆ ವಿರಜನು, ಪರ್ವತನು ಹುಟ್ಟಿ ವಂಶವಂಶಾಭಿವೃದ್ಧಿಯಾಯಿತು. ಅಂಗೀರಸನಿಗೆ ಸ್ಮೃತಿಯ ಗರ್ಭದಲ್ಲಿ ಅನುಮತಿ, ರಾಕ, ಸಿನೀವಾಲಿ,  ಕುಹೂ ಎಂಬ ನಾಲ್ವರ ಹೆಣ್ಣುಮಕ್ಕಳಾದರು. ಅತ್ರಿ ಮಹರ್ಷಿಗೆ ಅನಸೂಯ ಗರ್ಭದಲ್ಲಿ ಚಂದ್ರನು, ದುರ್ವಾಸನು, ದತ್ತಾತ್ರೇಯನು ಜನಿಸಿದನು. ಪ್ರೀತಿಗೆ ದತ್ತಾಗ್ನಿ ಜನಿಸಿದನು. ಆತನೇ ಸ್ವಯಂಭುವ ಮನ್ವಂತರದಲ್ಲಿನ ಅಗಸ್ತ್ಯ ಮಹರ್ಷಿ.

ಪುಲಹನಿಗೆ ಕ್ಷಮ, ಆಕೆಗೆ ಕರ್ದಮ, ಸಹಿಷ್ಣನು, ಊರ್ಧ್ವಾರೇತನು ಹುಟ್ಟಿದನು. ಕ್ರತುವಿಗೆ ಸನ್ನತಿಯಲ್ಲಿ ಹೆಬ್ಬೆರಳಷ್ಟು ಪರಿಣಾಮದಲ್ಲಿ ಉರ್ದ್ವಾರೇತಸ್ಕರಾಗಿ ವಾಲಖಿಲ್ಯಾದಿಗಳಾದ ಮಹರ್ಷಿಗಳು ಉದ್ಭವಿಸಿದರು. ವಶಿಷ್ಟನಿಗೆ ಊರ್ಜಳ ಗರ್ಭದಲ್ಲಿ ವಿರಜನು, ಗೋತ್ರನು, ಊರ್ಧ್ವಾಬಾಹು, ಸವಣನು, ಅನಘನು, ಸುತಪನು, ಶುಕ್ರನು ಜನಿಸಿ ಉತ್ತಮ ಮನೋಕುಲದಲ್ಲಿ ಸಪ್ತರ್ಷಿಗಳಾಗಿ ಕೀರ್ತಿಯನ್ನುಗಳಿಸಿದರು. ವಹ್ನಿನಿಗೆ ಸ್ವಾಹಾ ಗರ್ಭದಲ್ಲಿ ಪಾವಕನನು, ಪವಮಾನನು, ಶುಚಿ ಹುಟ್ಟಿದನು. ಅವರು ಮೂವರಿಗೂ ಮತ್ತೆ 47 ಜನ ಮಕ್ಕಳಾದರು. ಪಿತೃದೇವನಿಗೆ ಸ್ವಧಾಳ ಗರ್ಭದಲ್ಲಿ ಪಿತೃಗಣರು, ಮೇನಕೆ, ವೈತರಣೀಯರು ಜನಿಸಿದರು. ಸ್ವದಾ ಪಿತೃ ದೇವರು ಯೋಗಿನಿ ದೇವತೆಗಳಾದರು. ಎಂದು ಪಾರಶರರು ಹೇಳಿದರು.

ಮೈತ್ರೇಯನು ಭಕ್ತಿಪೂರ್ವವಾಗಿ “ಮುನಿವರ್ಯಾ ! ಸ್ವಯಂಭುವ ಮನುವಿನ ವಂಶದಲ್ಲಿ ಜನಿಸಿದ ಮಹಾರಾಜರುಗಳು, ಅವರ ಗುಣಶೀಲತೆಗಳನ್ನು ಹೇಳಿರಿ” ಎಂದು ಕೇಳಿದರು. ಅದಕ್ಕೆ ಪರಾಶರರು “ಮೈತ್ರೇಯಾ ! ಮನುವರಲ್ಲಿ ಪ್ರಥಮನಾದ ಸ್ವಯಂಭುವ ಮನುವಿಗೆ ಪ್ರಿಯವ್ರತನು, ಉತ್ಥಾತನಪಾದನು ಜನಿಸಿದರು. ಅವರಲ್ಲಿ ಉತ್ಥಾತನ ಪಾದನಿಗೆ ಉತ್ತಮನು, ಧ್ರುವನು ಎಂಬ ಇಬ್ಬರು ಗಂಡು ಮಕ್ಕಳು ಹುಟ್ಟಿದರು. ಪರಮ ಪವಿತ್ರವಾದ ಧ್ರುವನ ಪುಣ್ಯಕತೆಯನ್ನು ಹೇಳುತ್ತೇನೆ ಕೇಳು.

ಹಿಂದಿನ ಲೇಖನನೀರಾವರಿ ಪಂಪ್‍ಸೆಟ್‍ಗಳಿಗೆ  7 ಗಂಟೆಗಳ ವಿದ್ಯುತ್ ಸರಬರಾಜು: ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಂದಿನ ಲೇಖನನಗರದ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಫೇರಿಪರಲ್ ರಿಂಗ್ ರೋಡ್ ನಿರ್ಮಾಣ – ಬಿ ಎಸ್ ಸುರೇಶ್(ಬೈರತಿ)