ಸಕ್ಕರೆ ನಾಶಕ ಎಂಬ ಅರ್ಥದಲ್ಲಿ ಇದನ್ನು ಮಧುನಾಶಿ ಎನ್ನುತ್ತಾರೆ. ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ, ಪಿತ್ತಕೋಶದ ಆರೋಗ್ಯಕ್ಕೂ ಒಳ್ಳೆಯದು. ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಕೆಯಾಗದಂತೆ ಮಾಡುತ್ತದೆ. ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಿಸುತ್ತದೆ. ಮೂತ್ರಪಿಂಡ ಮತ್ತು ಸ್ಪ್ಲಿನ್ಯ ಆರೋಗ್ಯಕ್ಕೂ ಒಳ್ಳೆಯದು
ಅಳಲೆ (ಹರಿಹಿತಕೀ ಚೂರ್ಣ) : ಸರ್ವರೋಗಗಳಿಗೂ ಇದು ಒಂದು ಒಳ್ಳೆಯ ಮದ್ದು ದೇಹದ ನಂಜನ್ನು ಹಾಕಿ ಆರೋಗ್ಯವನ್ನು ಕಾಪಾಡುತ್ತದೆ. ಜೀರ್ಣಕ್ರಿಯೆ ಸರಾಗವಾಗಿ ನೆರವೇರುತ್ತದೆ. ಅಂಗಾಂಶಗಳು ಆರೋಗ್ಯಕರ ಬೆಳವಣಿಗೆಗೆ ಸಹಾಯವಾಗಿದೆ. ದೇಹದ ಆಂತರಿಕ ಸ್ವಚ್ಛತೆ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ನೇರಳೆ ಬೀಜದ ಚೂರ್ಣ :
ರಕ್ತ ಮತ್ತು ಮೂತ್ರದಲ್ಲಿ ಅಧಿಕ ಸಕ್ಕರೆ ಪ್ರಮಾಣವನ್ನು ನೇರಳೆ ಬೀಜವು ಸಮರ್ಪಕವಾಗಿ ತಗ್ಗಿಸುತ್ತದೆ. ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಿಸುತ್ತದೆ. ಮಧುಮೇಹ ಇರುವವರಿಗೆ ಇದೊಂದು ಅಪೂರ್ವ ಔಷಧವಾಗಿದೆ. ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಪಿತ್ತಕೋಶದ ಆರೋಗ್ಯವನ್ನು ಕಾಪಾಡುತ್ತದೆ.
ಮಧುಮೇಹ ನಿಯಂತ್ರಣದಲ್ಲಿ :
ಆಯುರ್ವೇದ ಮತ್ತು ಪಾರಂಪರಿಕ ವೈದ್ಯಕೀಯ ಪದ್ಧತಿಯಲ್ಲಿ ನೇರಳೆಬೀಜವನ್ನು ಸಕ್ಕರೆ ಕಾಯಿಲೆಯ ನಿಯಂತ್ರಣದಲ್ಲಿ ಬಳಸಲಾಗುವುದು. ಒಂದು ಪ್ರಾಚೀನ ಪರಂಪರೆಯಾಗಿದೆ.
ಈ ದಿಶೆಯಲ್ಲಿ ಲಕ್ನೋದಲ್ಲಿರುವ ಕೇಂದ್ರ ಔಷಧ ಸಂಶೋಧನಾಸಂಸ್ಥೆಯು ಸಂಶೋಧನೆಗಳನ್ನು ನಡೆಸಿದಾಗ ನೇರಳೆ ಬೀಜದ ಸತ್ವವು ಮದುಮೇಹ ರೋಗಿಗಳ ರಕ್ತದ ಸಕ್ಕರೆ ಪ್ರಮಾಣವನ್ನು ತಗ್ಗಿಸುವುದು ತಿಳಿದುಬಂದಿದೆ.
ಒಂದು ಅಧ್ಯಯನದಲ್ಲಿ 80 ಜನ ಇನ್ಸುಲಿನ್ ತೆಗೆದುಕೊಳ್ಳದ ಮಧುಮೇಹ ರೋಗಿಗಳಿಗೆ ನೇರಳೆ ಬೀಜದ ಚೂರ್ಣವನ್ನು ಕೊಟ್ಟು ಪರೀಕ್ಷಿಸಲಾಯಿತು ದಿನದಲ್ಲಿ ಮೂರು ಬಾರಿಯಂತೆ ಒಟ್ಟು 12 ಗ್ರಾಂ ಚೂರ್ಣವನ್ನು ಕೊಡಲಾಯಿತು.
ಮೂರು ತಿಂಗಳ ಕಾಲ ನಡೆದ ಈ ಪ್ರಯೋಗದಿಂದ ಮದುವೆಯ ರೋಗಿಗಳು ರಕ್ತದ ಸಕ್ಕರೆ ನಿಯಂತ್ರಣಕ್ಕೆ ಬಂದಿರುವುದು ತಿಳಿದು ಬಂದಿತು. ಈ ಬಗ್ಗೆ ಚೂರ್ಣ ಸೇವನೆಯಿಂದ ಯಾವುದೇ ಅಡ್ಡ ಪರಿಣಾಮಗಳು ಕಂಡುಬಂದಿಲ್ಲ.
ಮತ್ತೊಂದು ಪ್ರಯೋಗದಲ್ಲಿ ಇನ್ಸುಲಿನ್ ತೆಗೆದುಕೊಳ್ಳದೆ 80 ಜನ ಮಧುಮೇಹರುಗಳಿಗೆ ಆಯುರ್ವೇದ ಮದ್ದೋಂದನ್ನು ನೀಡಲಾಯಿತು. ನೇರಳೆ ಬೀಜ ಮತ್ತು ಶುದ್ಧ ಶಿಲಾಜಿತ್ತು ಬಳಸಿ ಮಾಡಿದ ಈ ಮದ್ದನ್ನು 24 ವಾರಗಳ ಕಾಲ ಪ್ರಯೋಗಿಸಲಾಯಿತು. ಈ ಪ್ರಯೋಗದಲ್ಲೂ ಸುಮಾರು 24% ರೋಗಿಗಳಲ್ಲಿ ಮಧು ಮೇಹ ಕಾಯಿಲೆ ನಿಯಂತ್ರಣಕ್ಕೆ ಬಂದಿರುವುದು ತಿಳಿದು ಬಂದಿತ್ತು.
ಚರ್ಮದ ಸಮಸ್ಯೆಗಳಲ್ಲಿ :
ಚರ್ಮದ ಸಮಸ್ಯೆಗಳು ಇದ್ದಾಗ ನೇರಳೆ ಬೀಜದ ಚೂರ್ಣವನ್ನು ಸ್ವಲ್ಪ ನೀರಿನಲ್ಲಿ ಕಲಸಿ ಲೇಪಿಸಿಕೊಂಡು ಒಂದು ಗಂಟೆಯ ನಂತರ ತೊಳೆದುಕೊಳ್ಳಬೇಕು ಈ ಇದನ್ನು ಪ್ರತಿನಿತ್ಯ ಮಾಡುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ
ಕಣ್ಣಿನ ಸಮಸ್ಯೆಗಳು :
ಬೆಟ್ಟದ ನೆಲ್ಲಿಕಾಯಿ ಚೂರ್ಣ ಮತ್ತು ನೇರಳೆ ಬೀಜದ ಚೂರ್ಣವನ್ನು ಸಮ ಪ್ರಮಾಣದಲ್ಲಿ ವಿವರಿಸಿ ಇಟ್ಟು ಪ್ರತಿದಿನ ಅರ್ಧ ಗಂಟೆ ಚಮಚ ಅರ್ಧ ಚಮಚ ಎಷ್ಟು ಸೇವಿಸಿದ ರಿಂದ ದೃಷ್ಟಿ ಶಕ್ತಿ ಹೆಚ್ಚಾಗುತ್ತದೆ.
ಗಂಟಲಿನ ಸಮಸ್ಯೆಗಳು : ಟ್ಯಾನ್ಸಿಲೈಟಿಸ್ ಲ್ಯಾರಿಂಜೈಟಿಸ್ ಮತ್ತು ಸ್ವರಂಭವಾದಾಗ ನೆರಳೆಬೀಜದ ಚೂರ್ಣ ಜೇನುತುಪ್ಪ ದೊಡನೆ ಕಲಿಸಿ ಸೇವಿಸಬೇಕು.
ಮೂತ್ರ ಜನಕಾಂಗದ ಸಮಸ್ಯೆಗಳು : ಮೂತ್ರ ಪಿಂಡಗಳಲ್ಲಿ ಹರಳು ಉಂಟಾಗಿದ್ದರೆ ಅರ್ಧ ಚಮಚೆಯಷ್ಟು ನೇರಳೆ ಬೀಜಚೂರ್ಣವನ್ನು ಮಜ್ಜಿಗೆಯಲ್ಲಿ ಸೇವಿಸಬೇಕು.
ನೋವು : ಬೆನ್ನು ನೋವು ಸಮಸ್ಯೆ ಇದ್ದಾಗ ನೇರಳೆ ಬೀಜದ ಕಷಾಯ ಮಾಡಿ ಕುಡಿಯುತ್ತಿದ್ದರೆ ಅನ್ನುವ ಪರಿಹಾರವಾಗುತ್ತದೆ.
ಜಟಾ ಮಾಂಸಿ ಚೂರ್ಣ : ಮಾನಸಿಕ ಆರೋಗ್ಯಕ್ಕೆ ನೆರವು ನೀಡುವ ಜಟಮಾಂಸೆಯನ್ನು ಆಯುರ್ವೇದ ಅನೇಕ ಔಷಧಗಳ ತಯಾರಿಕೆಯಲ್ಲಿ ಬಳಸುವರು. ಮಾನಸಿಕ ಒತ್ತಡ ಆಂತರಿಕ ದುಗುಡವನ್ನು ಇದು ನಿವಾರಿಸುತ್ತದೆ. ಊತ ನಿವಾರಕವಾಗಿದೆ. ಜೀರ್ಣಾಂಗ ವ್ಯೂಹ ಮತ್ತು ಶಾಸಕಾಂಗ ವ್ಯೂಹದ ಆರೋಗ್ಯಕ್ಕೆ ಒಳ್ಳೆಯದು ಮನಸನ್ನು ಪ್ರಶಾಂತವಾಗಿರುಸಲು ಸಹಾಯ ಮಾಡುತ್ತದೆ
ಹಾಗಲ ಚೂರ್ಣ : ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಿಸಲು ಔಷಧಿಯ ಗುಣಗಳಿಂದ ಸಮೃದ್ಧವಾಗಿರುವ ಹಾಗಲಕಾಯಿ ಒಂದು ಜನಪ್ರಿಯ ತರಕಾರಿಯೂ ಹೌದು, ರಕ್ತದ ಸಕ್ಕರೆಯೊಂದಿಗೆ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಿಸುವ ಹಲವಾರು ದೇಹದಲ್ಲಿ ಇರಬಹುದಾದ ನಂಜನ್ನು ಹೊರ ಹಾಕುತ್ತದೆ ರುಚಿಯನ್ನು ಉದ್ದಿಪನಗೊಳಿಸುತ್ತದೆ ಆಹಾರದಲ್ಲಿ ಕಾರ್ಬೋಹೈಡ್ರೇಟ್ ಸಹಾಯ ಮಾಡುತ್ತದೆ ಉತ ನಿವಾರಕ ಗುಣವಿದೆ.
ಕ್ರೌಂಚ ಬೀಜ ಚೂರ್ಣ : ಕಪಿಕಚ್ಚು ಎಂಬ ಸಂಸ್ಕೃತದಲ್ಲಿ ನಾಯಿ ಸೋಣಗೂ ಎಂದು ಕನ್ನಡದಲ್ಲಿ ಇದಕ್ಕೆ ಹೆಸರುಗಳಿವೆ ಅತ್ಯಂತ ಪೌಷ್ಟಿಕ ಗುಣವಿದೆ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ದೇಹದ ಬಲವನ್ನು ಹುದ್ದೆ ಮಾಡುತ್ತದೆ ಮೂತ್ರಪಿಂಡದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.