ಮನೆ ದೇವಸ್ಥಾನ ಹೊರನಾಡು ಅನ್ನಪೂರ್ಣೇಶ್ವರಿ

ಹೊರನಾಡು ಅನ್ನಪೂರ್ಣೇಶ್ವರಿ

0

 ಶ್ರೀ ಕ್ಷೇತ್ರಕ್ಕೂ ಕಾಲಶೇಶ್ವರನ ಸ್ವಾಮಿ ದೇವಸ್ಥಾನಕ್ಕೂ ಪುರಾತನವಾಗಿ ನಡೆದುಕೊಂಡು ಬಂದ ಪಾರಂಪರಿಕ ಸಂಬಂಧ

Join Our Whatsapp Group

      ದಕ್ಷಿಣ ಕಾಶಿ ಎಂದೇ ಪ್ರಖ್ಯಾತ ಗೊಂಡ ಶ್ರೀ ಕಾಲಶೇಶ್ವರ ಸ್ವಾಮಿಗೆ ಯುಗ ಯುಗಗಳಿಂದ ನಡೆದುಕೊಂಡು ಬರುತ್ತಿರುವ ಗಿರಿಜಾ ಕಲ್ಯಾಣ ಮಹೋತ್ಸವವನ್ನು ಪ್ರತಿ ವರ್ಷವೂ ತೋರಿಸುವುದಾಗಿ ಪರಮೇಶ್ವರನು  ಅಗಸ್ತ್ಯ ಮಹರ್ಷಿಗಳಿಗೆ ನೀಡಿದ ವಚನದಂತೆ ಕಳಸದ ಕಾಲಶೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಕಾರ್ತಿಕ ಮಾಸ ಶುಕ್ಲಪಕ್ಷ ಏಕಾದಶಿಯುಕ್ತ ದ್ವಾದಶಿಯಂದು ಶ್ರೀ ಗಿರಿಜಾ ಕಲ್ಯಾಣೋತ್ಸವ ನಡೆದುಕೊಂಡು ಬರುತ್ತಿದೆ. ವಿವಾಹದ ಮರುದಿನ ಪ್ರಥಮ ಪಂಚಾಮೃತ ಅಭಿಷೇಕ ಪೂಜೆಯನ್ನು ಪರ್ವತರಾಜ ಕುಟುಂಬದ ಪರಂಪರೆಯವರು ನಡೆಸುತ್ತಾರೆ ಆ ನಂತರದ ಎರಡನೆಯ ಪಂಚಾಮೃತ ಅಭಿಷೇಕ ಪೂಜೆಯನ್ನು ಹೊರನಾಡು ಜೋಯಿಸ್ ಕುಟುಂಬದವರು ಈ ಸನ್ನಿಧಿಯ ಎಡೆನಾಡಿನಲ್ಲಿ ಕುಳಿತು ಪಂಚಾಮೃತ ಅಭಿಷೇಕವನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಈ ಹಿನ್ನೆಲೆಯು ಶ್ರೀ ಕ್ಷೇತ್ರಕ್ಕೂ ಮತ್ತು ಶ್ರೀ ಕಾಲಶೇಶ್ವರ ಸ್ವಾಮಿ ದೇವಸ್ಥಾನಕ್ಕೂ ಇರುವಂತಹ ಅವಿನಾಭಾವ ಮತ್ತು ಧಾರ್ಮಿಕ ಪೂಜಾ ಸಂಬಂಧವನ್ನು ವ್ಯಕ್ತಪಡಿಸುತ್ತದೆ. ಅಲ್ಲದೆ ಈ ಲಾಗಾಯಿತಿಯಿಂದ ಶ್ರೀ ಕಾಳೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಹಾಗೂ ಹೊರನಾಡು ಅದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ವಾರ್ಷಿಕ ರಥೋತ್ಸವದ ಹಿಂದಿನ ದಿನ ಹಸಿರುವಾಣಿ ಹೊರೆಕಾಣಿಕೆಯನ್ನು ಸಲ್ಲಿಸುತ್ತಿರುವುದು ಕೂಡಾ ವಿಶೇಷವಾಗಿ ನಡೆದುಕೊಂಡು ಬಂದಿರುವ ಆಚರಣೆಯ ಸಂಪ್ರದಾಯವಾಗಿರುತ್ತದೆ.

     ಸ್ಕಂದ ಪುರಾಣದ ತುಂಗಭದ್ರಾ ಕಾಂಡದಲ್ಲಿ ಇರುವ ಶ್ರೀ ಕಾಲಶೇಶ್ವರ ಮಹಾತ್ಮೆಯ ಕನ್ನಡ ಅನುವಾದವನ್ನು ಶ್ರೀ ಕಲಶೇಶ್ವರ ಸ್ವಾಮಿಯೇ ಸನ್ನಿಧಿಯಲ್ಲಿ ಪುರಾಣಿಕವಾಗಿರುವ ಶ್ರೀರಾಮ ಜೋಯಿಸ್ ರವರು ಬರೆದಿರುವ ಗ್ರಂಥವನ್ನು ಮುಂದಿಟ್ಟುಕೊಂಡು ಶ್ರೀ ಸ್ವಾಮಿಯ ಪುರಾಣಿಕಾರದ ಶ್ರೀ ವಿ ಎಸ್ ಕಾಳಸೈ ಭಟ್ ಅವರು 1941 ರಲ್ಲಿ ಕನ್ನಡಕ್ಕೆ ಅನುವಾದ ಮಾಡಿರುವ ಪುಸ್ತಕದಲ್ಲಿ ಶ್ರೀಕಲಶೇಶ್ವರ ಸ್ವಾಮಿಯ ಕಲ್ಯಾಣ ಮಹೋತ್ಸವಕ್ಕೆ ದುರ್ಗಾದೇವಿ,ಕಾಲಭೈರವ, ಅನ್ನಪೂರ್ಣಾ ದೇವಿ,, ಇವರೆಲ್ಲರೂ ವಿವಾಹಕ್ಕಾಗಿ ದಯಮಾಡಿ ಈಗಲೂ ಭಕ್ತರ ಇಷ್ಟ ಸಿದ್ಧಿಯನ್ನು  ಸಲ್ಲಿಸುತ್ತಾ ಶಾಶ್ವತವಾಗಿ ಅಗಸ್ತ್ಯಕ್ಷೇತ್ರದಲ್ಲಿ ವಾಸವಾಗಿದ್ದಾರೆ ಎಂಬ ಮಾಹಿತಿಯನ್ನು ವ್ಯಕ್ತಪಡಿಸುತ್ತಾರೆ.

         ಅಲ್ಲದೆ ಮುಂದುವರಿದು ತುಂಗಾಭದ್ರಾ ನದಿಯ ಪ್ರತಿಯೊಂದು ಶಿಲೆಯು ದೇವರೆಂದರೆ ಭಾವಿಸಲು ಪುರಾಣ ವ್ಯಾಕ್ಯದಂತೆ ಈ ಬಿದುರಿನ ಒಳಗಿನ ಶಿಲೆಗಳು ವಿಗ್ರಹವಾಗಿವೆ ಎಂಬುದು ಆಶ್ಚರ್ಯವೇನಲ್ಲ. ಭದ್ರಾತೀರದ ಹೊರನಾಡು ಗಣಪತಿ, ಸೋಮಾಪುರದ ಲಿಂಗದಲ್ಲಿ ಮೂಡಿದ,ತುಂಗಾ ತೀರದ ವೈಕುಂಠ ಪುರದ ಅಗ್ರಹಾರದ  ಗಣಪತಿ ಇವುಗಳೇ ನಿದರ್ಶನಗಳಾಗಿವೆ ಎಂಬುದಾಗಿ ಅಗಸ್ತ್ಯ ಕಥಾ ಸಂಗ್ರಹ ಎಂಬ ಕೃತಿಯಲ್ಲಿ ವ್ಯಕ್ತಪಡಿಸುತ್ತಾರೆ. ಭೀಮಾ ಜೋಯಿಸರಿಗೆ ಕನಸಿನಲ್ಲಿ ಶ್ರೀಮಾತೆಯು ನೀಡಿದ ಆದೇಶಾನುಸಾರವಾಗಿ  ಮೇರುತಿ ತಪ್ಪಲಿನ ಬುಡದಲ್ಲಿ ಇದ್ದ. ಶ್ರೀ ಉದ್ಭವ ಗಣಪತಿಯೇ ಸ್ವಾಮಿಯನ್ನು ಕರೆತಂದು ಪ್ರತಿಷ್ಠೆ ಮಾಡಿರುತ್ತಾರೆ. ಈ ಅಗಸ್ತ್ಯ ಕಥಾ ಸಂಗ್ರಹ ಕಳಶ ಮಹಾತ್ಮೈ ಪುಸ್ತಕಕ್ಕೆ ಮುನ್ನುಡಿಯನ್ನು 1940 ರಲ್ಲಿ ಆನೆಗುಂದಿ  ಶ್ರೀರಾಮ ದೀಕ್ಷಿತರು.ಶೃಂಗೇರಿ ಮಠದ ನಿವೃತ್ತ ಧರ್ಮ ಅಧಿಕಾರಿಗಳಾಗಿಯು ಮೈಸೂರು ಆಸ್ಥಾನದ ವಿ ದ್ವಾಂಸರಾಗಿಯು, ಶ್ರೀ ಐ ರಾಮೇಶ್ವರ ಶಾಸ್ತ್ರಿಗಳು ಹರಿಕಥಾ ವಿದ್ವಾನ್ ಮಾನ್ಯ ಬೇಲೂರು ಕೇಶವದಾಸರು ಶ್ರೀ ಕಲಸ ಕ್ಷೇತ್ರದ ವೇದ ಮತ್ತು ಸಂಸ್ಕೃತ ಪಾಠಶಾಲಾ ಅಧ್ಯಕ್ಷರಾದ ಶ್ರೀ ವಿದ್ವಾನ್ ಮಾನ್ಯ ಬೇಲೂರು ಕೇಶವದಾಸರು ಶ್ರೀ ಕಳಶ ಕ್ಷೇತ್ರದ ವೇದ ಮತ್ತು ಸಂಸ್ಕೃತ ಪಾಠಶಾಲಾ ಅಧ್ಯಕ್ಷರಾದ  ಎಚ್ಎಸ್ ಕೇಶವಮೂರ್ತಿಗಳು ಕಲಸ ಕ್ಷೇತ್ರ ಉಭಯ ವಾಸಿಗಳಾದ ಮಹಾ ಜನಗಳ ಪರವಾಗಿ ಪ್ರಶಸ್ತಿ ಪತ್ರ ನೀಡಿದ ಶ್ರೀ ಕಾಲಶ್ವೇರ ದೇವಸ್ಥಾನದ ತಾಂತ್ರಿಕರಾದ ಶ್ರೀ ಗಣಪತಿ ಜೋಯಿಸ್ ಹಾಗೂ ಸಂಶೋಧಕರ ಲೇಖನಕ್ಕೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಶ್ರೀ ಯದುರ್ಕಳ ಶಂಭುಭಟ್ ವಿದ್ವಾನ್ ಇವರುಗಳು ತಮ್ಮ ಅನಿಸಿಕೆಯನ್ನು ಕಲಸ ಮಹತ್ವೈ ಪುಸ್ತಕದ ಮುನ್ನುಡಿಯನ್ನು ದಾಖಲು ಮಾಡಿದ್ದಾರೆ. ಈ ಪುಸ್ತಕವನ್ನು ಮುದ್ರಿಸುವ ಸಂದರ್ಭದಲ್ಲಿ ಊರಿನ ಮಾನ್ಯ ಶ್ರೀ ಡಿ.ವಿ.ವೆಂಕಟಸುಬ್ಬಾ   ಜೋಯಿಸರನ್ನು ಸೇರಿಸಿಕೊಂಡು, ಕಳಸ,ಕೊಪ್ಪ, ಶೃಂಗೇರಿ, ಎನ್ ಆರ್ ಪುರ, ಕವಿಲ್ಕುಡಿಗೆ  ಬೇರಕೊಡಗು ತೆಂಗಿನಮನೆ, ಬಿಕ್ಕಳಿ, ತೋರಣಗದ್ದೆ ಊರಿನ ಮಹನೀಯರು ಈ ಪುಸ್ತಕದ ಮುದ್ರಣಕ್ಕೆ ಪ್ರೋತ್ಸಾಹವನ್ನು ಮತ್ತು ಸಹಾಯವನ್ನು ಮಾಡಿರುವುದು ಈ ಪುಸ್ತಕದಲ್ಲಿ ಉಲ್ಲೇಖವಿದೆ.